My Blog List

Sunday, December 1, 2019

ಜಾರ್ಖಂಡ್ ಅಸೆಂಬ್ಲಿ: ಶೇ.೬೨.೮೭ ಮತದಾನ

ಜಾರ್ಖಂಡ್ ಅಸೆಂಬ್ಲಿ: ಶೇ.೬೨.೮೭ ಮತದಾನ
ಮಾವೋವಾದಿ ನಕ್ಸಲೀಯರ ಕರೆ ನಿರ್ಲಕ್ಷಿಸಿದ ಮತದಾರರು
ರಾಂಚಿ: ಜಾರ್ಖಂಡ್ ವಿಧಾನಸಭೆಯ ೧೩ ವಿಧಾನಸಭಾ ಕ್ಷೇತ್ರಗಳಿಗಾಗಿ ಶನಿವಾರ ಮೊದಲ ಹಂತದ ಮತದಾನ ನಡೆದಿದ್ದು, ಶೇಕಡಾ ೬೨.೮೭ರಷ್ಟು ಮತದಾನವಾಗಿದೆ.

ಚುನಾವಣೆ ಬಹಿಷ್ಕರಿಸುವಂತೆ ಮಾವೋವಾದಿ ನಕ್ಸಲೀಯರು ನೀಡಿದ್ದ ಕರೆಗೆ ಸೊಪ್ಪು ಹಾಕದ ಮತದಾರರು ಮತಗಟ್ಟೆಗಳಲ್ಲಿ ಭಾರೀ ಸಂಖ್ಯೆಯಲ್ಲಿ ಸಾಲುಗಟ್ಟಿ ನಿಂತು ಮತ ಚಲಾಯಿಸಿದರು ಎಂದು ವರದಿಗಳು ತಿಳಿಸಿವೆ.

ಚುನಾವಣಾ ಆಯೋಗದ ಪ್ರಕಾರ ಶೇಕಡಾ ೬೨.೮೭ರಷ್ಟು ಮತದಾನವಾಗಿದೆ. ಬಿಷ್ಣುಪುರದಲ್ಲಿ ಅತ್ಯಂತ ಹೆಚ್ಚು - ಶೇಕಡಾ ೬೭.೦೪ರಷ್ಟು ಮತದಾನವಾಗಿದ್ದು, ಮನಿಕಾ ಸ್ಥಾನಕ್ಕೆ ಅತ್ಯಂತ ಕಡಿಮೆ - ಶೇಕಡಾ ೫೭.೬೧ರಷ್ಟು ಮತದಾನವಾಗಿದೆ.

ಡಾಲ್ಟನ್
ಗಂಜ್ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಘರ್ಷಣೆ ನಡೆದ ಬಗ್ಗೆ ವರದಿಯಾಗಿದೆ.

ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್. ತ್ರಿಪಾಠಿ ಅವರು ಮತಗಟ್ಟೆ ಪ್ರವೇಶಿಸಿದ ಬಳಿಕ ತಮ್ಮ ಬಳಿ ಇದ್ದ ಲೈಸೆನ್ಸ್ ಹೊಂದಿದ ರಿವಾಲ್ವರ್ನ್ನು ಎತ್ತಿ ಹಿಡಿದು ಗಾಳಿಯಲ್ಲಿ ಆಡಿಸಿದರು ಎಂದು ವರದಿಗಳು ತಿಳಿಸಿವೆ.

ಚುನಾವಣಾ
ಆಯೋಗವು ಘಟನೆ ಬಗ್ಗೆ ವರದಿಯನ್ನು ಕೋರಿದ್ದು, ತ್ರಿಪಾಠಿ ಅವರಿಗೆ ನೀಡಲಾಗಿದ್ದ ಪರವಾನಗಿಯನ್ನು ರದ್ದು ಪಡಿಸಿದೆ.

No comments:

Advertisement