Monday, December 23, 2019

ಎನ್‌ಆರ್‌ಸಿ, ಪೌರತ್ವ ತಿದ್ದುಪಡಿ ಕಾಯ್ದೆಗೂ ಮುಸ್ಲಿಮರಿಗೂ ಸಂಬಂಧವಿಲ್ಲ

ಎನ್ಆರ್ಸಿ, ಪೌರತ್ವ ತಿದ್ದುಪಡಿ ಕಾಯ್ದೆಗೂ ಮುಸ್ಲಿಮರಿಗೂ ಸಂಬಂಧವಿಲ್ಲ
ವಿಪಕ್ಷ, ನಗರ ನಕ್ಸಲರ ವದಂತಿ: ಪ್ರಧಾನಿ ಮೋದಿ ತರಾಟೆ
ನವದೆಹಲಿ: ರಾಷ್ಟ್ರೀಯ ಪೌರ ನೋಂದಣಿ (ಎನ್ಆರ್ಸಿ) ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಭುಗಿಲೆದ್ದಿರುವ ರಾಷ್ಟ್ರವ್ಯಾಪಿ ಪ್ರತಿಭಟನೆಗಳ ಮಧ್ಯೆ, ದೆಹಲಿಯ ರಾಮಲೀಲಾ ಮೈದಾನದಲ್ಲಿ 2019 ಡಿಸೆಂಬರ್ 22 ಭಾನುವಾರ ನಡೆದ ಬೃಹತ್ ಸಭೆಯಲ್ಲಿ  ಬಿಜೆಪಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿಎನ್ಆರ್ಸಿ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆಗೂ ಮುಸ್ಲಿಮರಿಗೂ ಯಾವುದೇ ಸಂಬಂಧವೂ ಇಲ್ಲ ಎಂದು ಸ್ಪಷ್ಟ ಪಡಿಸಿದರು.

ಟೀಕಾಕಾರರನ್ನು
ತರಾಟೆಗೆ ತೆಗೆದುಕೊಳ್ಳಲು ಭಾರತೀಯ ಜನತಾಪಕ್ಷವು ಸಂಘಟಿಸಿದ್ದಆಭಾರ್ ಸಭೆಯನ್ನು ಬಳಸಿಕೊಂಡ ಪ್ರಧಾನಿ, ತಮ್ಮ ಪ್ರತಿಸ್ಪರ್ಧಿಗಳು ತಿದ್ದುಪಡಿಗೊಂಡಿರುವ ಪೌರತ್ವ ಕಾಯ್ದೆ ಬಗ್ಗೆ ಮುಸ್ಲಿಮರನ್ನು ದಾರಿ ತಪ್ಪಿಸಿ ಜನರಲ್ಲಿ ಭೀತಿ ಹುಟ್ಟು ಹಾಕಲು ಯತ್ನಿಸುತ್ತಿದ್ದಾರೆ ಎಂದು ಆಪಾದಿಸಿದರು.

ತಮ್ಮ ಸರ್ಕಾರದ ಯಾವುದೇ ಕಾರ್ಯಕ್ರಮಗಳು ಧರ್ಮದ ಆಧಾರದಲ್ಲಿ ಯಾವುದೇ ತಾರತಮ್ಯವನ್ನೂ ಮಾಡಿಲ್ಲ. ಪೌರತ್ವ ಕಾನೂನು ಮತ್ತು ಉದ್ದೇಶಿತ ರಾಷ್ಟ್ರೀಯ ಪೌರ ನೋಂದಣಿಗೂ ಭಾರತೀಯ ಮುಸ್ಲಿಮರಿಗೂ ಯಾವ ಸಂಬಂಧವೂ ಇಲ್ಲ ಎಂದು ಮೋದಿ ಹೇಳಿದರು.

ಸರ್ಕಾರವು ಜನರ ಹಕ್ಕುಗಳನ್ನು ಕಿತ್ತುಕೊಳ್ಳಲು ಕಾನೂನು ತಂದಿದೆ ಎಂದು ಸುಳ್ಳನ್ನು ಹರಡಲಾಗುತ್ತಿದೆಎಂದು ಹೇಳಿದ ಪ್ರಧಾನಿ ತಮ್ಮ ಕೆಲಸದಲ್ಲಿ ಏನಾದರೂ ತಾರತಮ್ಯ ನಡೆದಿದ್ದರೆ ಪತ್ತೆ ಹಚ್ಚಿ ಎಂದು ಪ್ರತಿಸ್ಪರ್ಧಿಗಳಿಗೆ ಸವಾಲು ಹಾಕಿದರು.

ಚುನಾವಣೆಯಲ್ಲಿ ತಮಗೆ ಸವಾಲು ಹಾಕಲು ಆಗಲಿಲ್ಲ ಎಂದು ಪ್ರತಿಸ್ಪರ್ಧಿಗಳು ಈಗ ವದಂತಿಗಳನ್ನು ಹರಡುವ ಮೂಲಕ ರಾಷ್ಟ್ರವನ್ನು ಒಡೆಯಲು ಹೊರಟಿದ್ದಾರೆ ಎಂದು ಮೋದಿ ಹೇಳಿದರು. ಯಾವುದೆ ಪ್ರತಿಸ್ಪಧಿ ಪಕ್ಷಗಳ ಹೆಸರನ್ನೂ ಹೇಳದ ಪ್ರಧಾನಿ, ’ನಕಲಿ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಉನ್ನತ ಸ್ಥಾನಗಳಲ್ಲಿ ಇದ್ದವರು ಜನರನ್ನು ಪ್ರಚೋದಿಸುತ್ತಿದ್ದಾರೆಎಂದು ನುಡಿದರು.

ಕಾಂಗ್ರೆಸ್
ಮತ್ತು ನಗರ ನಕ್ಸಲರು ಭಾರತದಲ್ಲಿಬಂಧನ ಕೇಂದ್ರಗಳ ಬಗ್ಗೆ ಸುಳ್ಳುಗಳನ್ನು ಹರಡುತ್ತಿದ್ದಾರೆ ಎಂದು ಹೇಳಿದ ಮೋದಿ, ಅಂತಹ ಯಾವುದೇ ಕೇಂದ್ರಗಳು ಅಸ್ತಿತ್ವದಲ್ಲಿ ಇರುವುದನ್ನು ತಳ್ಳಿಹಾಕಿದರು.

ದೇಶದಲ್ಲಿ
ಈವರೆಗೆ ಸುಮಾರು ೨೦ ಜನರನ್ನು ಬಲಿತೆಗೆದುಕೊಂಡಿರುವ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರ ನೋಂದಣಿ ವಿರೋಧಿ ಚಳವಳಿ ವಿಚಾರವನ್ನು ಪ್ರಸ್ತಾಪಿಸಿದ ಪ್ರಧಾನಿಕಾನೂನು ತಿದ್ದುಪಡಿ ಮಾಡಿದ್ದು ಭಾರತೀಯ ಮುಸ್ಲಿಮರ ಹಕ್ಕುಗಳನ್ನು ಕಿತ್ತು ಕೊಳ್ಳುವುದಕ್ಕಾಗಿ ಅಲ್ಲಎಂದು ಹೇಳಿದರು.

ಅನಧಿಕೃತ
ಕಾಲೋನಿಗಳನ್ನು ಅಧಿಕೃತಗೊಳಿಸಿದಾಗ ನಾವು ಯಾರನ್ನಾದರೂ ಅವರ ಧರ್ಮದ ಬಗ್ಗೆ ಕೇಳಿದ್ದೇವೆಯೇ? ಯಾವ ರಾಜಕೀಯ ಪಕ್ಷವನ್ನು ಬೆಂಬಲಿಸಿದ್ದೀರಿ ಎಂದು ನಾವು ಅವರನ್ನು ಕೇಳಿದ್ದೇವೆಯೇ? ೧೯೭೦, ೧೯೮೦ರಿಂದ ದಾಖಲೆಗಳನ್ನು ಕೊಡುವಂತೆ ನಾವು ಅವರನ್ನು ಕೇಳಿದ್ದೇವೆಯೇ? ಎಂದು ಮೋದಿಆಭಾರ್ ಸಭೆಯಲ್ಲಿಪ್ರಶ್ನಿಸಿದರು.

ಮುಸ್ಲಿಮರು, ಸಿಕ್ಖರು, ಕ್ರೈಸ್ತರು ಸೇರಿದಂತೆ ಎಲ್ಲರಿಗೂ ಅನುಕೂಲವಾಗಿದೆ. ಇಲ್ಲಿ ವಾಸವಾಗಿರುವ ಪ್ರತಿಯೊಬ್ಬರಿಗೂ ಅನುಕೂಲವಾಗಿದೆ. ನಾವು ಏತಕ್ಕಾಗಿ ಇದನ್ನು ಮಾಡಿದ್ದೇವೆ? ಏಕೆಂದರೆ ನಾವು ರಾಷ್ಟ್ರದ ಪ್ರೀತಿಯ ಕಾರಣ ಬದುಕಿದ್ದೇವೆ. ’ಸಬ್ ಕಾ ಸಾಥ್, ಸಬ್ ಕಾ ವಿಕಾಸ್ಮಂತ್ರಕ್ಕೆ ನಮ್ಮನ್ನು ನಾವು ಸಮರ್ಪಣೆ ಮಾಡಿಕೊಂಡಿದ್ದೇವೆಎಂದು ಪ್ರಧಾನಿ ನುಡಿದರು.

ಇಂದು ಮುಸ್ಲಿಮರನ್ನು ಕಾಗದಪತ್ರಗಳು ಮತ್ತು ಸರ್ಟಿಫಿಕೇಟುಗಳ ಹೆಸರಿನಲ್ಲಿ ದಾರಿತಪ್ಪಿಸುತ್ತಿರುವವರು ಬಡವರ ಏಳಿಗೆಗಾಗಿ ರೂಪಿಸಲಾಗಿರುವ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ನಾವು ಕಾಗದ ಪತ್ರಗಳ ಹೆಸರಿನಲ್ಲಿ ಯಾವುದೇ ನಿರ್ಬಂಧಗಳನ್ನು ವಿಧಿಸಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕುಎಂದು ಮೋದಿ ಹೇಳಿದರು.

ಪೌರತ್ವ
ಕಾಯ್ದೆ ಬಗ್ಗೆ ವಿರೋಧ ಪಕ್ಷಗಳ ನಿಲುವನ್ನು ಪ್ರಶ್ನಿಸಿದ ಪ್ರಧಾನಿ, ಯುವಕರಿಗೆ ಕಾನೂನಿನ ಬಗ್ಗೆ ಸ್ವತಃ ಅಧ್ಯಯನ ಮಾಡಿಕೊಳ್ಳಿ ಎಂದು ಸಲಹೆ ಮಾಡಿದರು.

ಕಾಂಗ್ರೆಸ್, ಅದರ ಗೆಳೆಯರು ಮತ್ತು ಕೆಲವು ನಗರ ನಕ್ಸಲರು ಮುಸ್ಲಿಮರನ್ನು ಬಂಧನ ಕೇಂದ್ರಗಳಿಗೆ ಕಳುಹಿಸಲಾಗುವುದು ಎಂದು ವದಂತಿಗಳನ್ನು ಹರಡುತ್ತಿದ್ದಾರೆ... ನಿಮ್ಮ ಶಿಕ್ಷಣವನ್ನು ಗೌರವಿಸಿ, ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್ಆರ್ಸಿ ಅಂದರೆ ಏನು ಎಂದು ಓದಿ ಅಧ್ಯಯನ ಮಾಡಿ, ನೀವು ವಿದ್ಯಾವಂತರುಎಂದು ಪ್ರಧಾನಿ ಯುವಕರಿಗೆ ಕಿವಿಮಾತು ಹೇಳಿದರು.

ಪೌರತ್ವ
ಕಾಯ್ದೆಯು ಹಲವಾರು ವರ್ಷಗಳಿಂದ ಭಾರತದಲ್ಲಿ ವಾಸವಾಗಿರುವ ನಿರಾಶ್ರಿತರಿಗೆ ಅನ್ವಯಿಸುತ್ತದೆ ಮತ್ತು ಹೊಸ ನಿರಾಶ್ರಿತರಿಗೆ ಅದರಿಂದ ಯಾವ ಲಾಭವೂ ಆಗುವುದಿಲ್ಲಎಂದು ಪ್ರಧಾನಿ ನುಡಿದರು.

ಪೌರತ್ವ ತಿದ್ದುಪಡಿ ಕಾಯ್ದೆಯು ಯಾರ ಪೌರತ್ವವನ್ನೂ ಕಿತ್ತುಕೊಳ್ಳುವುದಕ್ಕಾಗಿ ರೂಪಿಸಲ್ಪಟ್ಟದ್ದಲ್ಲ, ಬದಲಿಗೆ ಜನರಿಗೆ ಪೌರತ್ವ ನೀಡಲು ರೂಪಿಸಲ್ಪಟ್ಟದ್ದುಎಂದು ಮೋದಿ ವಿವರಿಸಿದರು.

ಇದಕ್ಕೆ ಮುನ್ನ ಪ್ರಧಾನಿಯವರು ದೆಹಲಿಯ ಹಾಲಿ ಆಡಳಿತ ವ್ಯವಸ್ಥೆ ಮತ್ತುಅಪ್ರಾಮಾಣಿಕವಿರೋಧ ಪಕ್ಷಗಳ ವಿರುದ್ಧ ಕಟುದಾಳಿ ನಡೆಸಿದರು. ಭಾರತೀಯ ಜನತಾ ಪಕ್ಷವು ದೆಹಲಿಯ ಹಿಂದಿನ ಸರ್ಕಾರಗಳಂತೆ ಜನರ ಸಮಸ್ಯೆಗಳನ್ನು ನಿರ್ಲಕ್ಷಿಸುವುದಿಲ್ಲ ಎಂದು ಅವರು ಹೇಳಿದರು.

ಸ್ವಾತಂತ್ರ್ಯ ಲಭಿಸಿದ ಹಲವಾರು ದಶಕಗಳ ಬಳಿಕ ಕೂಡಾ ದೆಹಲಿಯ ದೊಡ್ಡ ಸಂಖ್ಯೆಯ ಜನತೆ ಭಯ, ಅಸ್ಥಿರತೆ, ವಂಚನೆ ಮತ್ತು ಸುಳ್ಳು ಚುನಾವಣಾ ಭರವಸೆಗಳನ್ನು ಎದುರಿಸುತ್ತಿದ್ದಾರೆ. ’ಅಕ್ರಮ, ಬೀಗ ಜಡಿಯುವಿಕೆ, ಬುಲ್ ಡೋಜರ್ ಮತ್ತು ಕಟ್ ಆಫ್ ದಿನಾಂಕ- ದೆಹಲಿಯ ದೊಡ್ಡ ಪ್ರಮಾಣದ ಜನರ ಬದುಕು ಪದಗಳಿಗಷ್ಟೇ ಸೀಮಿತವಾಗಿದೆಎಂದು ಮೋದಿ ನುಡಿದರು.

ದೆಹಲಿಯ ಲಕ್ಷಾಂತರ ಮಂದಿ ವಂಚನೆ, ನಕಲಿ ರಾಜಕೀಯ ಭರವಸೆಗಳನ್ನು ಸ್ವಾತಂತ್ರ್ಯೋತ್ತರ ಯುಗದ ಹಲವಾರು ದಶಕಗಳಿಂದ ಕೇಳುತ್ತಲೇ ಬಂದಿದ್ದಾರೆ ಎಂದು ಪ್ರಧಾನಿ ನುಡಿದರು.

ಪ್ರಧಾನಿಯವರು
ಅಕ್ರಮ ಕಾಲೋನಿಗಳನ್ನು ಸಕ್ರಮಗೊಳಿಸುವ ಬಗ್ಗೆ, ಮೆಟ್ರೋ ಸಂಪರ್ಕಗಳನ್ನು ವಿಸ್ತರಿಸುವ ಬಗ್ಗೆ ಮಾತನಾಡುತ್ತಲೇ ದೆಹಲಿ ನಿವಾಸಿಗಳು ಎದುರಿಸುತ್ತಿರುವ ವಿಷಯಗಳನ್ನು ಪ್ರಸ್ತಾಪಿಸುತ್ತಾ ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ದೆಹಲಿ ಸರ್ಕಾರವು ದೆಹಲಿ ಮೆಟ್ರೋ ಯೋಜನೆಯ ನಾಲ್ಕನೇ ಹಂತದ ಯೋಜನೆಯನ್ನು ರಾಜಕೀಯಗೊಳಿಸದೇ ಇದ್ದಿದ್ದರೆ, ಅದರ ಕೆಲಸ ಬಹಳ ಹಿಂದೆಯೇ ಆರಂಭವಾಗುತ್ತಿತ್ತು. ನಿಮ್ಮ ಹೆಸರಿನಲ್ಲಿ ರಾಜಕೀಯ ಮಾಡುವವರಿಗೆ ನಿಮ್ಮ ಹೆಸರು ಎಂದಿಗೂ ನಿಮ್ಮ ನೋವು ಅರ್ಥವಾಗುವುದಿಲ್ಲ ಎಂದು ನಾನು ಹೇಳುತ್ತಿರುವುದು ಇದಕ್ಕೇಎಂದು ಜನರ ಹರ್ಷೋದ್ಘಾರಗಳ ನಡುವೆ ಮೋದಿ ನುಡಿದರು.

ಕೇಂದ್ರ
ಸಚಿವರಾದ ಹರ್ಷ ವರ್ಧನ್ ಮತ್ತು ಹರದೀಪ್ ಪುರಿ, ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ, ಹನ್ಸ್ ರಾಜ್ ಹ್ಯಾನ್ಸ್, ವಿಜಯ್ ಗೋಯೆಲ್, ಮೀನಾಕ್ಷಿ ಲೇಖಿ ಮತ್ತಿತರ ಬಿಜೆಪಿ ನಾಯಕರು ಹಾಜರಿದ್ದರು.

ವರ್ಷದ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ದೆಹಲಿಯಲ್ಲಿ ಪ್ರಧಾನಿಯವರು ಪಾಲ್ಗೊಂಡ ಚೊಚ್ಚಲ ಚುನಾವಣಾ ರ್ಯಾಲಿ ಇದಾಗಿತ್ತು.

ದೆಹಲಿಯ ೧೭೩೧ ಅನಧಿಕೃತ ಕಾಲೋನಿಗಳ ೪೦ ಲಕ್ಷ ನಿವಾಸಿಗಳಿಗೆ ಮಾಲೀಕತ್ವ ಹಕ್ಕು ನೀಡಿದ್ದಕ್ಕಾಗಿ ಪ್ರಧಾನಿಯವರಿಗೆ ಧನ್ಯವಾದ ಹೇಳಲು ಆಭಾರ್ ರ್ಯಾಲಿಯನ್ನು ಸಂಘಟಿಸಲಾಗಿದೆ ಎಂದು ಬಿಜೆಪಿ ನಾಯಕ ವಿಜಯ್ ಗೋಯೆಲ್ ಇದಕ್ಕೆ ಮುನ್ನ ಹೇಳಿಕೆಯಲ್ಲಿ ತಿಳಿಸಿದ್ದರು.

ಪ್ರಧಾನಿ ಮೋದಿಯವರು ತಮ್ಮ ಭಾಷಣದಲ್ಲಿ ನೂತನ ಪೌರತ್ವ ಕಾಯ್ದೆಯ ಬಗ್ಗೆ ವಿಶ್ವಸಂಸ್ಥೆ ನಿಗಾದಲ್ಲಿ ಜನಮತಗಣನೆ ನಡೆಸುವಂತೆ ಕರೆ ಕೊಟ್ಟದ್ದಕ್ಕಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನೂ ತರಾಟೆಗೆ ತೆಗೆದುಕೊಂಡು ತಮ್ಮ ರಾಜ್ಯದ ಜನರನ್ನು ಮೊದಲು ನಂಬಿ ಎಂದು ಛೇಡಿಸಿದರು.

ಕೆಲವು ವರ್ಷಗಳ ಹಿಂದೆ ಆಕೆ ಸಂಸತ್ತಿನಲ್ಲಿ ಬಾಂಗ್ಲಾದೇಶದಿಂದ ಬರುತ್ತಿರುವ ನುಸುಳುಕೋರರನ್ನು ಬರದಂತೆ ತಡೆಯಬೇಕು ಎಂದು ಮನವಿ ಮಾಡಿದ್ದರು. ದೀದಿ, ನಿಮಗೆ ಈಗ ಏನಾಗಿದೆ? ನೀವು ಏಕೆ ಬದಲಾಗಿದ್ದೀರಿ? ನೀವು ಯಾಕೆ ವದಂತಿಗಳನ್ನು ಹರಡುತ್ತಿದ್ದೀರಿ? ಚುನಾವಣೆಗಳು ಬರುತ್ತವೆ, ಹೋಗುತ್ತವೆ. ಜನರು ಅಧಿಕಾರ ಪಡೆಯುತ್ತಾರೆ ಮತ್ತು ಎಸೆಯಲ್ಪಡುತ್ತಾರೆ. ನೀವು ಏಕೆ ಹೆದರುತ್ತಿದ್ದೀರಿ?’ ಎಂದು ಪ್ರಧಾನಿ ಪ್ರಶ್ನಿಸಿದರು.

ಬಂಗಾಳದ ಜನರನ್ನು ನಂಬಿ. ಬಂಗಾಳದ ನಾಗರಿಕರು ನಿಮ್ಮ ವೈರಿಗಳು ಎಂದೇಕೆ ಚಿಂತಿಸುತ್ತೀರಿ?’ ಎಂದು ಪ್ರಧಾನಿ ಬ್ಯಾನರ್ಜಿ ಅವರನ್ನು ಚುಚ್ಚಿದರು.

ಪ್ರಧಾನಿ ಭಾಷಣದ ಮುಖ್ಯಾಂಶಗಳು:
·         *  ಪೌರತ್ವ ಕಾಯ್ದೆ ಮತ್ತು ಎನ್ಆರ್ಸಿಗೂ ಭಾರತೀಯ ಮುಸ್ಲಿಮರಿಗೂ ಯಾವುದೇ ಸಂಬಂಧವೂ ಇಲ್ಲ. ಭಾರತದಲ್ಲಿ ಯಾವುದೇ ಬಂಧನ ಕೇಂದ್ರಗಳು ಇಲ್ಲ. ಕಾಂಗ್ರೆಸ್ ಮತ್ತು ನಗರ ನಕ್ಸಲರು ಬಂಧನ ಕೇಂದ್ರಗಳ ಬಗ್ಗೆ ಸುಳ್ಳುಗಳನ್ನು ಹರಡುತ್ತಿದ್ದಾರೆ.

·         * ಏಳರ ಹರೆಯದ ಪಕ್ಷದಿಂದ (ಪರೋಕ್ಷವಾಗಿ ಆಮ್ ಆದ್ಮಿ ಪಕ್ಷದ ಉಲ್ಲೇಖ) ಶಾಂತಿಗಾಗಿ ಯಾವುದೇ ಮನವಿ ಕೂಡಾ ಇಲ್ಲ, ಇದು ಹಿಂಸಾಚಾರಕ್ಕೆ ಅದರ ಪರೋಕ್ಷ ಅನುಮೋದನೆ ಇದೆ ಎಂಬುದನ್ನು ಸೂಚಿಸುತ್ತದೆ.ಸ್ವಾತಂತ್ರ್ಯ ಲಭಿಸಿದಂದಿನಿಂದ ಇಲ್ಲಿಯವರೆಗೆ ೩೩,೦೦೦ ಪೊಲೀಸ್ ಸಿಬ್ಬಂದಿ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಪ್ರಾಣ ತೆತ್ತಿದ್ದಾರೆ, ಆದರೆ  ಅವರ ಮೇಲೆ ಈಗ ನಿಷ್ಕರುಣೆಯಿಮದ ದಾಳಿ ನಡೆಸಲಾಗುತ್ತಿದೆ.

   ನನ್ನನ್ನು ದ್ವೇಷಿಸುತ್ತಿದ್ದರೆ ನನ್ನ ಪ್ರತಿಸ್ಪರ್ಧಿಗಳು ನನ್ನ ಪ್ರತಿಕೃತಿಯನ್ನು ದಹಿಸಲಿ, ಆದರೆ ಅವರು ಬಡವರನ್ನು ಗುರಿ ಮಾಡಬಾರದು.
·         ಯೋಜನೆಗಳನ್ನು ಜಾರಿಗೊಳಿಸುವಾಗ ನಾವು ಎಂದೂ ಯಾರನ್ನೂ ಅವರು ದೇವಾಲಯ ಅಥವಾ ಮಸೀದಿಗೆ ಹೋಗುತ್ತಿದ್ದಾರೆಯೇ ಎಂದು ಪ್ರಶ್ನಿಸಿಲ್ಲ.

·        
ಮುಸ್ಲಿಮರನ್ನು ದಾರಿ ತಪ್ಪಿಸಲಾಗುತ್ತಿದೆ, ಅಭಿವೃದ್ಧಿ ಯೋಜನೆಗಳು ಮತ್ತು ಅವುಗಳ ಫಲಾನುಭವಿಗಳಿಗೆ ದಾಖಲೆಗಳು ಎಂದಿಗೂ ಅಡ್ಡ ಬರುವುದಿಲ್ಲ ಎಂದು ನಾನು ಯಾವಾಗಲೂ ಖಾತರಿ ನೀಡಿದ್ದೇನೆ.

·         ನನ್ನ ಕೆಲಸದಲ್ಲಿ ಏನಾದರೂ ತಾರತಮ್ಯ ಇದ್ದರೆ ಪತ್ತೆ ಹಚ್ಚಿ ಎಂಬುದಾಗಿ ನನ್ನ ಪ್ರತಿಸ್ಪರ್ಧಿಗಳಿಗೆ ಸವಾಲು ಹಾಕುತ್ತೇನೆ.

·         ನಾನು ಯಾರ ಹಕ್ಕುಗಳನ್ನೂ ಕಿತ್ತುಕೊಳ್ಳುತ್ತಿಲ್ಲ, ಬದಲಿಗೆ ನಾನು ಹಕ್ಕುಗಳನ್ನು ಕೊಡುತ್ತಿದ್ದೇನೆ.

No comments:

Advertisement