My Blog List

Monday, December 23, 2019

ಜ್ವರ: ಫಾಲ್ಕೆ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಅಮಿತಾಭ್ ಬಚ್ಚನ್ ಗೈರು

ಜ್ವರ: ಫಾಲ್ಕೆ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ
ಅಮಿತಾಭ್ ಬಚ್ಚನ್ ಗೈರು
ನವದೆಹಲಿ: ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಚಿತ್ರನಟ ಅಮಿತಾಭ್ ಬಚ್ಚನ್ ಅವರು ಅಸ್ವಾಸ್ಥ್ಯದ ಕಾರಣ 2019 ಡಿಸೆಂಬರ್ 23ರ ಸೋಮವಾರ ನಡೆಯಲಿರುವ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಗೈರು ಹಾಜರಾಗಲು ನಿರ್ಧರಿಸಿದ್ದಾರೆ. ಬಚ್ಚನ್ ಅವರು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಂದ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸಬೇಕಾಗಿತ್ತು.

ಜ್ವರದಿಂದ ಮಲಗಿದ್ದೇನೆ. ಪ್ರಯಾಣಕ್ಕೆ ಅನುಮತಿ ಇಲ್ಲ.. ದೆಹಲಿಯಲ್ಲಿ ಸೋಮವಾರ ನಡೆಯಲಿರುವ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ. ದುರದೃಷ್ಟಕರ... ನನ್ನ ವಿಷಾದಗಳು...’ ಎಂದು ಅಮಿತಾಭ್ ಬಚ್ಚನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ 2019 ಡಿಸೆಂಬರ್ 22ರ ಭಾನುವಾರ ಪ್ರಕಟಿಸಿದರು.

ಉಪರಾಷ್ಟ್ರಪತಿ
ವೆಂಕಯ್ಯ ನಾಯ್ಡು ಅವರು ಸೋಮವಾರ ದೆಹಲಿಯ ವಿಜ್ಞಾನಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ವಿಜೇತರಿಗೆ ಪ್ರದಾನ ಮಾಡಲಿದ್ದಾರೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಅವರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪತ್ರಿಕಾ ಹೇಳಿಕೆ ತಿಳಿಸಿತು.
ಇದಕ್ಕೆ ಮುನ್ನ ಅಮಿತಾಭ್ ಬಚ್ಚನ್ ಅವರು ತಮ್ಮನ್ನು ಪ್ರತಿಷ್ಠಿತ ಪ್ರಶಸ್ತಿಗಾಗಿ ಆಯ್ಕೆ ಮಾಡಿದ್ದಕ್ಕಾಗಿ ಧನ್ಯವಾದ ಅರ್ಪಿಸಿ ಟ್ವೀಟ್ ಮಾಡಿದ್ದರು. ’ಹರಿದು ಬರುತ್ತಿರುವ ಅಭಿನಂದನೆಗಳ ಔದಾರ್ಯಕ್ಕೆ ಉತ್ತರಿಸಲು ಪದಗಳೇ ಸಿಗುತ್ತಿಲ್ಲ. ಪದಗಳಿಗಾಗಿ ತಡಕಾಡುತ್ತಿದ್ದೇನೆ.. ನಾನು ಅತ್ಯಂತ ಕೃತಜ್ಞನಾಗಿದ್ದೇನೆ ಮತ್ತು ಅತ್ಯಂತ ವಿನೀತನಾಗಿದ್ದೇನೆ...ನನ್ನ ಪ್ರಾಮಾಣಿಕ ಕೃತಜ್ಞತೆಗಳು. ಮನಸ್ಸಿನಲ್ಲಿ ಏನಿದೆಯೋ ಗೊತ್ತಾಗುತ್ತಿಲ್ಲ.. ಬಹುಶಃ ಎಂದಿಗೂ ಗೊತ್ತಾಗುವುದಿಲ್ಲ.. ಕೃತಜ್ಞತೆಗಳು ಮತ್ತು ಅತ್ಯಂತ ವಿನಮ್ರತೆಯ ಭಾವನೆ .. ಇವತ್ತು ಸರ್ವೋಚ್ಚ ಎನ್ನಿಸುತ್ತಿದೆ.. ಮತ್ತು ಪ್ರೀತಿಯೊಂದಿಗೆಎಂದ ಬಚ್ಚನ್ ಬರೆದಿದ್ದರು.

ಆರೋಗ್ಯ ಸಂಬಂಧಿತ ಸಮಸ್ಯೆಗಳ ಕಾರಣ ಅಮಿತಾಭ್ ಬಚ್ಚನ್ ಅವರಿಗೆ ನವೆಂಬರ್ ತಿಂಗಳಲ್ಲಿ ನಡೆದ ೨೫ನೇ ಕೋಲ್ಕತ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಬಚ್ಚನ್ ಅವರನ್ನು ಕೆಲವು ದಿನಗಳ ಬಳಿಕ ಮುಂಬೈಯ ನಾನಾವತಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕೆಲವು ದಿನಗಳ ಅವಧಿಗೆ ದಾಖಲು ಮಾಡಲಾಗಿತ್ತು.

ಯಕೃತ್ತಿನ ಸಮಸ್ಯೆಯ ಕಾರಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಎಂಬುದಾಗಿ ಆಗ ಭಾವಿಸಲಾಗಿತ್ತು. ಅದರೆ ಅದು ಮಾಮೂಲಿ ವೈದ್ಯಕೀಯ ತಪಾಸಣೆಯಾಗಿತ್ತು ಎಂಬುದಾಗಿ ಬಳಿಕ ಸ್ಪಷ್ಟನೆ ನೀಡಲಾಗಿತ್ತು.

ಸಾಂಪ್ರದಾಯಿಕವಾಗಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಭಾರತದ ರಾಷ್ಟ್ರಪತಿಯವರೇ ವಿಜೇತರಿಗೆ ಪ್ರದಾನ ಮಾಡುತ್ತಾರೆ. ಏನಿದ್ದರೂ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರಶಸ್ತಿ ಪುರಸ್ಕೃತರ ಜೊತೆಗೆ ಚಹಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.

೨೦೧೮ರಲ್ಲಿ ರಾಷ್ಟ್ರಪತಿ ಕೋವಿಂದ್ ಅವರು ಸಮಾರಂಭದಲ್ಲಿ ಹಿಡಿಯಷ್ಟು ಪ್ರಶಸ್ತಿಗಳನ್ನು ಮಾತ್ರವೇ ಪ್ರದಾನ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಮೊದಲ ಕಂತಿನ ಪ್ರಶಸ್ತಿಗಳನ್ನು ಕೇಂದ್ರ ಸಚಿವರಾದ ಸ್ಮೃತಿ ಇರಾನಿ ಮತ್ತು ರಾಜ್ಯವರ್ಧನ ಸಿಂಗ್ ರಾಥೋಡ್ ಪ್ರದಾನ ಮಾಡಿದ್ದರೆ, ಎರಡನೇ ಕಂತಿನ ಪ್ರಶಸ್ತಿಗಳನ್ನು ರಾಷ್ಟ್ರಪತಿ ಪ್ರದಾನ ಮಾಡಿದ್ದರು.

೬೬ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರ ಹೆಸರುಗಳನ್ನು ವರ್ಷ ಆಗಸ್ಟ್ ತಿಂಗಳಲ್ಲಿ ಪ್ರಕಟಿಸಲಾಗಿತ್ತು. ಅತ್ಯುತ್ತಮ ಚಿತ್ರದ ಗೌರವಹೆಲ್ಲರೋಗುಜರಾತಿ ಚಿತ್ರಕ್ಕೆ ಪ್ರಾಪ್ತವಾಗಿತ್ತು. ವಿಕ್ಕಿ ಕೌಶಲ್ ಮತ್ತು ಆಯುಷ್ಮಾನ್ ಖುರಾನಾ ಅವರು ಜಂಟಿಯಾಗಿ ಅತ್ಯುತ್ತಮ ಚಿತ್ರನಟ ಪ್ರಶಸ್ತಿಗೆ ಭಾಜನರಾಗಿದ್ದರು. ’ಉರಿ: ದಿ ಸರ್ಜಿಕಲ್ ಸ್ಟೈಕ್ಮತ್ತುಅಂಧಾಧುನ್ಚಿತ್ರಗಳಲ್ಲಿನ ನಟನೆಗಾಗಿ ಉಭಯರಿಗೂ ಅತ್ಯುತ್ತಮ ಚಿತ್ರ ನಟ ಪ್ರಶಸ್ತಿ ಲಭಿಸಿತ್ತು. ’ಮಹಾನತಿತೆಲುಗು ಚಿತ್ರದ ಪಾತ್ರಕ್ಕಾಗಿ ಕೀರ್ತಿ ಸುರೇಶ್ ಅವರು ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದಿದ್ದರು.

No comments:

Advertisement