My Blog List

Saturday, December 7, 2019

ನಿರ್ಭಯ ಪ್ರಕರಣ: ಕ್ಷಮಾದಾನ ಕೋರಿಕೆ ಅರ್ಜಿ ತಿರಸ್ಕರಿಸಿ; ರಾಷ್ಟ್ರಪತಿಗೆ ಕೇಂದ್ರ ಶಿಫಾರಸು

ನಿರ್ಭಯ ಪ್ರಕರಣ: ಕ್ಷಮಾದಾನ  ಕೋರಿಕೆ ಅರ್ಜಿ ತಿರಸ್ಕರಿಸಿ;  ರಾಷ್ಟ್ರಪತಿಗೆ ಕೇಂದ್ರ  ಶಿಫಾರಸು
ನವದೆಹಲಿ: ಇಡೀ ದೇಶದ ಗಮನ ಸೆಳೆದಿದ್ದ ೨೦೧೨ರ  ನಿರ್ಭಯಾ ಪ್ರಕರಣದ ಪ್ರಮುಖ ಅತ್ಯಾಚಾರಿ ವಿನಯ್ ಶರ್ಮ ಕ್ಷಮಾದಾನ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸುವಂತೆ ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಕೇಂದ್ರ ಗೃಹ ಇಲಾಖೆ  2019 ಡಿಸೆಂಬರ್ 06ರ ಶುಕ್ರವಾರ ಶಿಫಾರಸು ಮಾಡಿತು.

ತೆಲಂಗಾಣ ಮೂಲದ ಪಶುವೈದ್ಯೆ ಮೇಲೆ ಅತ್ಯಾಚಾರ ಎಸಗಿ ಕಿಚ್ಚಿಟ್ಟು ಕೊಲೆಗೈದ ನಾಲ್ವರು ಆರೋಪಿಗಳನ್ನು ತೆಲಂಗಾಣ ಪೊಲೀಸರು ಈದಿನ ನಸುಕಿನಲ್ಲಿ ಎನ್ಕೌಂಟರ್ನಲ್ಲಿ ಕೊಂದು ಹಾಕಿದ ಘಟನೆಯ ಬೆನ್ನಲ್ಲೇ, ನಿರ್ಭಯಾ ಕುಟುಂಬವೂ ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸುವಂತೆ ಮಾಡಿದ ಮನವಿಯನ್ನು ಗಮನಿಸಿ ಕೇಂದ್ರ ಕ್ರಮ ಕೈಗೊಂಡಿತು.
ಕಾಕತಾಳೀಯವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕೂಡಾ ಅಪ್ರಾಪ್ತರ ಮೇಲಿನ ಲೈಂಗಿಕ ಹಲ್ಲೆ ಪ್ರಕರಣಗಳಲ್ಲಿ ಅಪರಾಧಿಗಳ ಕ್ಷಮಾದಾನ ಕೋರಿಕೆ ಅರ್ಜಿಗಳನ್ನು ಪರಿಗಣಿಸುವ ಪ್ರಶ್ನೆಯೇ ಇಲ್ಲ ಎಂಬುದಾಗಿ ಈದಿನ ಹೇಳಿದ್ದರು.

ಅರೆ ವೈದ್ಯಕೀಯ ವಿದ್ಯಾರ್ಥಿನಿ, ೨೩ರ ಹರೆಯದನಿರ್ಭಯಾಮೇಲೆ ಅತ್ಯಾಚಾರ ಎಸಗಿ ಕೊಲೆಗೈದಿದ್ದ ಪ್ರಕರಣದಲ್ಲಿ ಮರಣದಂಡೆಗೆ ಗುರಿಯಾಗಿರುವ ಅಪರಾಧಿ ವಿನಯ್ ಶರ್ಮ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ್ದ.

ಕ್ಷಮಾದಾನ ಕೋರಿಕೆ ಅರ್ಜಿಯನ್ನು ತಿರಸ್ಕರಿಸಿದ್ದ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಕಡತವನ್ನು ಗೃಹ ಇಲಾಖೆಗೆ ಕಳುಹಿಸಿದ್ದರು. ಮತ್ತು ಗೃಹ ಇಲಾಖೆಯು ಅಂತಿಮ ನಿರ್ಧಾರಕ್ಕಾಗಿ ಅದನ್ನು ರಾಷ್ಟ್ರಪತಿಯವರಿಗೆ ಕಳುಹಿಸಿತು.

ಕ್ಷಮೆಕೋರಿಕೆ ಅರ್ಜಿಯನ್ನು ತಿರಸ್ಕರಿಸುವಂತೆ ಗೃಹ ಸಚಿವಾಲಯವು ಶಿಫಾರಸು ಮಾಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಬರೆದ ಪತ್ರದಲ್ಲಿ ೨೩ರ ಹರೆಯದ ಅರೆವೈದ್ಯಕೀಯ ವಿದ್ಯಾರ್ಥಿನಿಯ ತಾಯಿ, ಈದಿನ ಅಪರಾಧಿಯ ಕ್ಷಮೆ ಕೋರಿಕೆ ಅರ್ಜಿಯನ್ನು ತಿರಸ್ಕರಿಸುವಂತೆ ಆಗ್ರಹಿಸಿದ್ದರು. ’ಮರಣದಂಡನೆ ಜಾರಿಯನ್ನು ತಪ್ಪಿಸುವ ಮತ್ತು ನ್ಯಾಯ ದೊರಕದಂತೆ ಮಾಡುವ ಉದ್ದೇಶ ಪೂರ್ವಕ ಯತ್ನ ಕ್ಷಮಾದಾನ ಕೋರಿಕೆ ಅರ್ಜಿಎಂದು ಆಕೆ ಹೇಳಿದ್ದರು.

ಅಪರಾಧ ಘಟಿಸಿ ವರ್ಷಗಳು ಕಳೆದುಹೋಗಿವೆ. ಅರ್ಜಿದಾರರು (ತಾಯಿ) ಅನುಭವಿಸುತ್ತಿರುವ ಆಘಾತ, ನೋವು ಮತ್ತು  ಸಂಕಟ ಅಸಹನೀಯವಾದದ್ದು ಮತ್ತು ನ್ಯಾಯಕ್ಕಾಗಿ ಕಾದಿರುವ ಕಾಲ ದೀರ್ಘವಾಗುತ್ತಲೇ ಇದೆಎಂದು ವಕೀಲರ ಮೂಲಕ ಕಳುಹಿಸಲಾಗಿರುವ ಪತ್ರ ಹೇಳಿತ್ತು.

ಏನಿದು ಪ್ರಕರಣ: ೨೦೧೨ರ ಡಿಸೆಂಬರ್ ೧೬ರಂದು ರಾತ್ರಿ ವೇಳೆ ತನ್ನ ಸ್ನೇಹಿತನೊಂದಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ೨೩ ವರ್ಷದ ಯುವತಿನಿರ್ಭಯಾಮೇಲೆ ಅಪ್ರಾಪ್ತ ವಯಸ್ಸಿನ ಬಾಲಕ ಸೇರಿದಂತೆ ಒಟ್ಟು ಆರು ಮಂದಿ ಅತ್ಯಂತ ಕ್ರೂರ ಹಾಗೂ ಅಮಾನುಷವಾಗಿ ಅತ್ಯಾಚಾರವೆಸಗಿದ್ದರು.

ಇದನ್ನು
ತಡೆಯಲು ಬಂದ ಸ್ನೇಹಿತನ ಮೇಲೂ ಹಲ್ಲೆ ನಡೆಸಿದ್ದರು. ಮೃಗೀಯವಾಗಿ ಅತ್ಯಾಚಾರವೆಸಗಿದ್ದ ಅಪರಾಧಿಗಳು ಯುವತಿಯನ್ನು ಚಲಿಸುತ್ತಿದ್ದ ಬಸ್ಸಿನಿಂದಲೇ ಹೊರಕ್ಕೆ ಎಸೆದಿದ್ದರು. ಘೋರ ಕೃತ್ಯದಿಂದ ಗಾಯಗೊಂಡು ಸಾವು-ಬದುಕಿನ ಹೋರಾಟ ನಡೆಸುತ್ತಿದ್ದ ನಿರ್ಭಯಾ ಚಿಕಿತ್ಸೆ ಫಲಕಾರಿಯಾಗದೆ ಡಿ. ೨೯ರಂದು ಸಿಂಗಾಪುರದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

ಆರು ಮಂದಿ ಅಪರಾಧಿಗಳಲ್ಲಿ ರಾಮ್ ಸಿಂಗ್ ಎಂಬಾತ ೨೦೧೩ರಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲೇ ತಿಹಾರ್ ಜೈಲಿನಲ್ಲಿ ನೇಣು ಹಾಕಿ ಆತ್ಮಹತ್ಯೆಗೆ ಶರಣಾಗಿದ್ದ. ಇನ್ನು ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಬಾಲಾಪರಾಧಿಯಾಗಿದ್ದರಿಂದ ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಇನ್ನುಳಿದ ನಾಲ್ವರು ಅಪರಾಧಿಗಳಿಗೆ ತ್ವರಿತ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿತ್ತು.

ಅಲ್ಲದೇ
ಆದೇಶವನ್ನು ದೆಹಲಿಯ ಹೈಕೋರ್ಟ್ ಕೂಡಾ ಎತ್ತಿಹಿಡಿದಿತ್ತು.

೨೦೧೭ರ ವರ್ಷದ ಮೇ ೫ರಂದು ಸುಪ್ರೀಂಕೋರ್ಟ್ ಕೂಡ ಆದೇಶವನ್ನು ಎತ್ತಿಹಿಡಿದಿತ್ತು. ಆದರೆ ಮೂವರು ಅಪರಾಧಿಗಳು ತಮಗೆ ವಿಧಿಸಿರುವ ಗಲ್ಲುಶಿಕ್ಷೆಯ ತೀರ್ಪನ್ನು ಮರುಪರಿಶೀಲಿಸುವಂತೆ ಅರ್ಜಿ ಸಲ್ಲಿದ್ದರು. ಮರುಪರಿಶೀಲನಾ ಅರ್ಜಿಯ ತೀರ್ಪು ಪ್ರಕಟಿಸಿದ ಸುಪ್ರೀಂಕೋರ್ಟ್ ಕೂಡಾ ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸಿತ್ತು.

No comments:

Advertisement