My Blog List

Sunday, December 8, 2019

ನಿರ್ಭಯಾ ಅತ್ಯಾಚಾರ ಪ್ರಕರಣ: ಅಪರಾಧಿಯಿಂದಲೇ ಕ್ಷಮಾದಾನ ಅರ್ಜಿ ವಾಪಸ್!

ನಿರ್ಭಯಾ ಅತ್ಯಾಚಾರ ಪ್ರಕರಣ: ಅಪರಾಧಿಯಿಂದಲೇ ಕ್ಷಮಾದಾನ ಅರ್ಜಿ ವಾಪಸ್!

ನವದೆಹಲಿ: ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯ ಅತ್ಯಾಚಾರ ಪ್ರಕರಣ ಅಪರಾಧಿ, ಮರಣ ದಂಡನೆಗೆ ಗುರಿಯಾಗಿರುವ ವಿನಯ್ ಶರ್ಮ ತನ್ನ ಕ್ಷಮಾದಾನ ಕೋರಿಕೆ ಅರ್ಜಿಯನ್ನು ರಾಷ್ಟ್ರಪತಿಯವರಿಂದ ತತ್ ಕ್ಷಣವೇ ಹಿಂಪಡೆಯುವುದಾಗಿ ಹೇಳಿ 2019 ಡಿಸೆಂಬರ್ 07ರ ಶನಿವಾರ ತನ್ನ ವಕೀಲರ ಮೂಲಕ ಪತ್ರ ರವಾನಿಸಿದ.

ತನ್ನ ಹೆಸರಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಸಲ್ಲಿಸಲಾಗಿರುವ ಅರ್ಜಿಗೆ ನಾನು ಸಹಿ ಹಾಕಿಯೇ ಇಲ್ಲ. ತಿಹಾರ್ ಸೆರೆಮನೆ ಅಧಿಕಾರಿಗಳು ದುರುದ್ದೇಶದಿಂದ ದೆಹಲಿ ಸರ್ಕಾರದ ಜೊತೆಗೆ ಕ್ರಿಮಿನಲ್ ಸಂಚು ಹೂಡಿ ಕಡತ ಕಳುಹಿಸಿದ್ದಾರೆ ಎಂದು ವಿನಯ್ ಶರ್ಮ ತನ್ನ ಪತ್ರದಲ್ಲಿ ತಿಳಿಸಿದ.

ತನಗೆ ಮತ್ತು ಇತರ ಆರೋಪಿಗಳಿಗೆ ಕಾನೂನುಬದ್ಧವಾಗಿ ಕೆಲವು ಪರಿಹಾರ ಕೋರುವ ಹಕ್ಕಿದೆ. ಅವುಗಳನ್ನು ಚಲಾಯಿಸುವ ಮುನ್ನವೇ ರೀತಿ ಕಡತ ಕಳುಹಿಸಲಾಗಿದೆ. ಆದ್ದರಿಂದ ತತ್ ಕ್ಷಣವೇ ಅದನ್ನು ಹಿಂದಿರುಗಿಸಬೇಕು ಎಂದು ವಿನಯ್ ಶರ್ಮ ಕೋರಿ.


ಮರಣ ದಂಡನೆಗೆ ಗುರಿಯಾಗಿರುವ ಹಿನ್ನೆಲೆಯಲ್ಲಿ ಶಿಕ್ಷೆ ಜಾರಿಗೊಳಿಸಲು ವಿಳಂಬ ಮಾಡುವ ಉದ್ಧೇಶದಿಂದ ರೀತಿ ಮಾಡಲಾಗುತ್ತಿದೆ ಎಂದು ಶರ್ಮ ಮನವಿಗೆ ಸಾಮಾಜಿಕ ತಾಣಗಳಲ್ಲಿ ಆಕ್ರೋಶ ವ್ಯಕ್ತವಾಯಿತು.

ವಿನಯ್ ಶರ್ಮ ಕ್ಷಮಾದಾನ ಕೋರಿಕೆ ಅರ್ಜಿಯನ್ನು ತಿರಸ್ಕರಿಸಿ, ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ನೀಡಿದ್ದಾರೆ. ನಿರ್ಭಯಾ ಪ್ರಕರಣ ರಾಷ್ಟ್ರವನ್ನೇ ಬೆಚ್ಚಿ ಬೀಳಿಸಿದ ಕುಕೃತ್ಯವಾಗಿದ್ದು, ಯಾವುದೇ ಕಾರಣಕ್ಕೂ ಅಪರಾಧಿಗೆ ಕ್ಷಮೆ ನೀಡಬಾರದು ಎಂದು ವರದಿ ನೀಡಿದ್ದಾರೆ. ಗೃಹ ಸಚಿವಾಲಯವೂ ರಾಷ್ಟ್ರಪತಿ ಕೋವಿಂದ್ ಅವರಿಗೆ ಕ್ಷಮಾದಾನ ಅರ್ಜಿ ತಿರಸ್ಕರಿಸುವಂತೆಯೇ ಶಿಫಾರಸು ಮಾಡಿತ್ತು.

No comments:

Advertisement