Saturday, December 14, 2019

'ರೇಪ್ ಇನ್ ಇಂಡಿಯಾ’, ಈಶಾನ್ಯ ಹಿಂಸಾಚಾರ: ಸಂಸತ್ ಕೋಲಾಹಲ

'ರೇಪ್ ಇನ್ ಇಂಡಿಯಾ, ಈಶಾನ್ಯ ಹಿಂಸಾಚಾರ: ಸಂಸತ್ ಕೋಲಾಹಲ, ಕಲಾಪ ಅನಿರ್ದಿಷ್ಟ ಮುಂದೂಡಿಕೆ
 ಕ್ಷಮೆಯಾಚನೆಗೆ ರಾಹುಲ್ ನಕಾರ
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರರೇಪ್ ಇನ್ ಇಂಡಿಯಾಹೇಳಿಕೆ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯ ಹಿನ್ನೆಲೆಯಲ್ಲಿ ಈಶಾನ್ಯ ರಾಜ್ಯಗಳಲ್ಲಿ ಭುಗಿಲೆದ್ದಿರುವ ಹಿಂಸಾಚಾರ ಸಂಸತ್ತಿನ ಉಭಯು ಸದನಗಳಲ್ಲಿ 2019 ಡಿಸೆಂಬರ್ 13ರ ಶುಕ್ರವಾರ ಪ್ರತಿಧ್ವನಿಸಿ ತೀವ್ರ ಕೋಲಾಹಲದ ಮಧ್ಯೆ ಕಲಾಪಗಳನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಲಾಯಿತು. ರಾಹುಲ್ ಗಾಂಧಿ ಅವರು ಬಳಿಕ ಹೇಳಿಕೆ ಹಿನ್ನೆಲೆಯಲ್ಲಿಕ್ಷಮೆಯಾಚನೆಗೆ  ಖಡಕ್ ಆಗಿ ನಿರಾಕರಿಸಿದರು.

ಜಾರ್ಖಂಡ್
ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ನೀಡಿದರೇಪ್ ಇನ್ ಇಂಡಿಯಾಹೇಳಿಕೆಗಾಗಿ ಸಂಸತ್ತಿನಲ್ಲಿ ತೀವ್ರ ಟೀಕೆಗೊಳಗಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಾವು ಎಂದಿಗೂ ಕ್ಷಮೆ ಕೋರುವುದಿಲ್ಲ ಎಂದು ಶುಕ್ರವಾರ ಖಂಡತುಂಡವಾಗಿ ಹೇಳಿದರು. ಬದಲಿಗೆ ಯುಪಿಎ ಆಡಳಿತಾವಧಿಯಲ್ಲಿ ದೆಹಲಿಯುರೇಪ್ ಕ್ಯಾಪಿಟಲ್ಆಗಿ ಬದಲಾಗಿದೆ ಎಂಬುದಾಗಿ ನೀಡಿದ ಹೇಳಿಕೆಗಾಗಿ ಪ್ರಧಾನಿ ನರೇಂದ್ರ ಮೋದಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಮುನ್ನ ರಾಹುಲ್ ಗಾಂಧಿಯವರ ಹೇಳಿಕೆ ಮತ್ತು ಪೌರತ್ವ ತಿದ್ದುಪಡಿ ಮಸೂದೆ ಹಿನ್ನೆಲೆಯಲ್ಲಿ ಭುಗಿಲೆದ್ದ ಈಶಾನ್ಯ ರಾಜ್ಯಗಳ ಹಿಂಸಾಚಾರದ ವಿಚಾರ ಸಂಸತ್ತಿನ ಉಭಯ ಸದನಗಳಲ್ಲೂ ಪ್ರತಿಧ್ವನಿಸಿ ಆಡಳಿತ ಮತ್ತು ವಿರೋಧ ಪಕ್ಷಗಳ ಮಧ್ಯೆ ತೀವ್ರ ವಾಕ್ಸಮರಕ್ಕೆ ಕಾರಣವಾಯಿತು. ಕೋಲಾಹಲದ ಮಧ್ಯೆ ಉಭಯ ಸದನಗಳ ಕಲಾಪವನ್ನೂ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

ಕ್ಷಮೆ ಯಾಚಿಸಬೇಕು ಎಂಬ ಬಿಜೆಪಿ ಒತ್ತಾಯಕ್ಕೆ ಸಂಬಂಧಿಸಿದಂತೆ ನಾನು ಎಂದಿಗೂ ಅವರ ಕ್ಷಮೆ ಯಾಚಿಸುವುದಿಲ್ಲಎಂದು ಸಂಸತ್ತಿನ ಹೊರಗೆ ಪತ್ರಕರ್ತರೊಂದಿಗೆ ಮಾತನಾಡುತ್ತಾ ರಾಹುಲ್ ಗಾಂಧಿ ಹೇಳಿದರು.

ತಮ್ಮ
ರೇಪ್ ಹೇಳಿಕೆಯು ಸಂಸತ್ತಿನ ಉಭಯ ಸದನಗಳಲ್ಲೂ ಬಿಜೆಪಿಯಿಂದ ತೀವ್ರ ಪ್ರತಿಭಟನೆಗಳಿಗೆ ಕಾರಣವಾಗಿದೆ ಎಂದೂ ಕಾಂಗ್ರೆಸ್ ನಾಯಕ ನುಡಿದರು.

ನಾನು ಸರಳವಾಗಿ ಮೋದಿ ಅವರುಮೇಕ್ ಇಂಡಿಯಾಬಗ್ಗೆ ಮಾತನಾಡುವುದರ ಬಗ್ಗೆ ಬೊಟ್ಟು ಮಾಡಿದೇನೆ, ಆದರೆ ಎಲ್ಲೆಡೆಗಳಲ್ಲೂರೇಪ್ಗಳು ಘಟಿಸುತ್ತಿವೆಯಾದ್ದರಿಂದ ಎಲ್ಲಿ ನೋಡಿದರೂ ಅಲ್ಲಿರೇಪ್ ಇನ್ ಇಂಡಿಯಾಕಾಣುತ್ತಿದ್ದೇವೆ ಎಂದು ಹೇಳಿದ್ದೇನೆಎಂದು ರಾಹುಲ್ ಗಾಂಧಿ ಹೇಳಿದರು.

ಈಗಿನ ಮುಖ್ಯ ವಿಷಯ ಎನೆಂದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ದೇಶದ ಇಡೀ ಈಶಾನ್ಯಭಾಗವನ್ನು ಸುಟ್ಟು ಹಾಕಿದ್ದಾರೆ. ಬಿಜೆಪಿಯು ರೇಪ್ ಹೇಳಿಕೆಯನ್ನು ಎತ್ತಿ ದೇಶದ ಗಮನವನ್ನು ಬೇರೆಡೆಗೆ ತಿರುಗಿಸುತ್ತಿದೆಎಂದು ಕಾಂಗ್ರೆಸ್ ನಾಯಕ ನುಡಿದರು.
ತಮ್ಮ ಟ್ವಿಟ್ಟರ್ ಖಾತೆಯಲ್ಲೂ ವಿಷಯವನ್ನು ಪ್ರಸ್ತಾಪಿಸಿದ ರಾಹುಲ್ ಗಾಂಧಿಮೋದಿಯವರು ಈಶಾನ್ಯ ಭಾಗವನ್ನು ಸುಟ್ಟು ಹಾಕಿದ್ದಕ್ಕಾಗಿ , ಭಾರತದ ಆರ್ಥಿಕತೆಯನ್ನು ನಾಶ ಪಡಿಸಿದ್ದಕ್ಕಾಗಿ, ನಾನು ಇಲ್ಲಿ ಲಗತ್ತಿಸಿರುವ ವಿಡಿಯೋ ದೃಶ್ಯಾವಳಿಯಲ್ಲಿನ ಭಾಷಣಕ್ಕಾಗಿ ಕ್ಷಮೆ ಯಾಚಿಸಬೇಕುಎಂದು ಟ್ವೀಟ್ ಮಾಡಿದರು.

೨೦೧೩ರ ವಿಡಿಯೋದಲ್ಲಿ ನರೇಂದ್ರ ಮೋದಿಯವರು ಯುಪಿಎ ಆಡಳಿತದಲ್ಲಿ ದೆಹಲಿಯು ಜಗತ್ತಿನರೇಪ್ ಕ್ಯಾಪಿಟಲ್ಆಗಿದೆ ಎಂಬುದಾಗಿ ಉಲ್ಲೇಖಿಸಿದ್ದರು.

ಸಂಸತ್ತಿನಲ್ಲಿ ಕೋಲಾಹಲ:  ಮೇಕ್ ಇನ್ ಇಂಡಿಯಾ ಇದೀಗ ರೇಪ್ ಇನ್ ಇಂಡಿಯಾದತ್ತ ಹೊರಳುತ್ತಿದೆ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಕ್ಷಮೆಯಾಚನೆಗೆ ಪಟ್ಟು ಹಿಡಿದರು. ಇದರಿಂದ ತೀವ್ರ ಕೋಲಾಹಲ ಉಂಟಾದಾದ ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು ಲೋಕಸಭೆಯ ಚಳಿಗಾಲದ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.

ಲೋಕಸಭೆಯಲ್ಲಿ ರಾಹುಲ್ ಹೇಳಿಕೆಯ ವಿಷಯವನ್ನು ಪ್ರಸ್ತಾಪಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರುಕಾಂಗ್ರೆಸ್ ನಾಯಕ, ಗಾಂಧಿ ಕುಟುಂಬದ ಸದಸ್ಯರು ದೇಶಕ್ಕೆ ಯಾವ ಸಂದೇಶವನ್ನು ನೀಡುತ್ತಿದ್ದಾರೆ. ಭಾರತಕ್ಕೆ ಬಂದು ಭಾರತೀಯ ಮಹಿಳೆಯರನ್ನು ರೇಪ್ ಮಾಡುವಂತೆ ನಾಯಕ ಪುರುಷರನ್ನು ಪ್ರಚೋದಿಸುತ್ತಿದ್ದಾರೆಯೇ ?’ ಎಂದು ಪ್ರಶ್ನಿಸಿ, ರಾಹುಲ್ ಕ್ಷಮಾಯಾಚನೆಗೆ ಆಗ್ರಹಿಸಿದರು.

ಸ್ಮೃತಿ ಇರಾನಿಯವರ ಮಾತುಗಳಿಗೆ ಚಳಿಗಾಲದ ಸಂಸತ್ ಅಧಿವೇಶನದ ಕೊನೆಯ ದಿನ ಬಿಜೆಪಿ ಸದಸ್ಯರಿಂದ ಕೋಪೋದ್ರಿಕ್ತ ಪ್ರತಿಕ್ರಿಯೆಗಳು ವ್ಯಕ್ತವಾದವು.

ಇತಿಹಾಸದಲ್ಲಿ ಇಂತಹ ಘಟನೆ ಇದೇ ಮೊದಲ ಬಾರಿಗೆ ಘಟಿಸಿದೆ.  ಗಾಂಧಿ ಕುಟುಂಬದ ಪುತ್ರಬನ್ನಿ ಭಾರತದಲ್ಲಿ ಮಹಿಳೆಯರ ಮೇಲೆ ರೇಪ್ ಮಾಡಿಎದು ಹೇಳುತ್ತಿದ್ದಾರೆ ಎಂದು ಇರಾನಿ ಹೇಳುತ್ತಿದ್ದಂತೆಯೇ, ಬಿಜೆಪಿಯ ಲಾಕೆಟ್ ಚಟರ್ಜಿ ಮತ್ತು ಪಕ್ಷದ ಇತರ ಮಹಿಳಾ ಸಂಸದೆಯರು ಅವರ ಜೊತೆಗೂಡಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೂ ಧ್ವನಿಗೂಡಿಸಿಇಂತಹ ಹೇಳಿಕೆಗಳನ್ನು ನೀಡುವ ವ್ಯಕ್ತಿಗಳಿಗೆ ಸದನದ ಸದಸ್ಯರಾಗುವ ನೈತಿಕ ಹಕ್ಕಿಲ್ಲಎಂದು ಹೇಳಿದರು.
ಆಪಾದನೆಯನ್ನು ತಳ್ಳಿಹಾಕಿದ ರಾಹುಲ್ ಗಾಂಧಿ, ’ಬಿಜೆಪಿಯು ವಿಷಯವನ್ನು ಪೌರತ್ವ ತಿದ್ದುಪಡಿ ವಿವಾದದಿಂದ ಅಶಾಂತಗೊಂಡಿರುವ ಈಶಾನ್ಯ ರಾಜ್ಯಗಳಿಂದ ಬೇರೆ ಕಡೆಗೆ ಸೆಳೆಯಲು ಯತ್ನಿಸುತ್ತಿದೆಎಂದು ಹೇಳಿದರು.

ಬಿಜೆಪಿ ಸದಸ್ಯರುರಾಹುಲ್ ಕ್ಷಮೆ ಯಾಚಿಸಿಎಂಬುದಾಗಿ ಘೋಷಣೆಗಳನ್ನೂ ಕೂಗಿದರು.
ತತ್ ಕ್ಷಣಕ್ಕೆ ನಮ್ಮ ಮುಂದಿರುವ ಪೌರತ್ವ ಕಾನೂನಿನ ಜ್ವಲಂತ ವಿಷಯದಿಂದ ಬೇರೆಡೆಗೆ ಗಮನ ಸೆಳೆಯಲು ಇದೊಂದು ಕುಂಟುನೆಪ ಮಾತ್ರಎಂದು ರಾಹುಲ್ ಹೇಳಿದರು. ಕಾಂಗ್ರೆಸ್ ಸದಸ್ಯರು ರಾಹುಲ್ ಗಾಂಧಿ ಅವರನ್ನು ಸಮರ್ಥಿಸಿದರು.

ಕೋಲಾಹಲದ ಮಧ್ಯೆ ಡಿಎಂಕೆಯ ಕನಿಮೋಳಿ ಅವರು ರಾಹುಲ್ ಗಾಂಧಿ ಅವರ ಬೆಂಬಲಕ್ಕೆ ಬಂದರು. ’ನಾವು ಪ್ರಧಾನಿಯವರಮೇಕ್ ಇನ್ ಇಂಡಿಯಾ ಉಪಕ್ರಮವನ್ನು ಗೌರವಿಸುತ್ತೇವೆ. ನಾವು ಆರ್ಥಿಕತೆ ಬೆಳೆಯಬೇಕು ಎಂದು ಬಯಸುತ್ತೇವೆ. ಆದರೆ ದೇಶದಲ್ಲಿ ಏನಾಗುತ್ತಿದೆ? ಇದನ್ನು ರಾಹುಲ್ ಗಾಂಧಿಯವರು ಹೇಳಬಯಸಿದ್ದರು. ದುರದೃಷ್ಟಕರವಾಗಿ ಮೇಕ್ ಇಂಡಿಯಾ ಆಗುತ್ತಿಲ್ಲ ಮತ್ತು ದೇಶದಲ್ಲಿನ ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆಯುತ್ತಿವೆ. ಇದು ಕಳವಳದ ವಿಷಯಎಂದು ಕನಿಮೋಳಿ ನುಡಿದರು.

ಮಹಿಳೆಯರ ಮೇಲಿನ ಹಿಂಸಾಚಾರದ ಇತ್ತೀಚಿನ ಘಟನೆಗಳಿಗೆ ಸಂಬಂಧಿಸಿದಂತೆ ಪ್ರಧಾನಿಯವರ ಮೌನವನ್ನೂ ಕಾಂಗ್ರೆಸ್ ಪ್ರಶ್ನಿಸಿತು.

ರಾಹುಲ್ ಗಾಂಧಿಯವರು ನೀಡಿದ್ದು ಅತ್ಯಂತ ಸಾಮಾನ್ಯ ಹೇಳಿಕೆ. ಇದಕ್ಕಾಗಿ ಅವರು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಹೇಳಿದರು.

ಬಿಜೆಪಿಯು ವಿಷಯವನ್ನು ಎತ್ತಿ ಉಭಯ ಸದನಗಳಲ್ಲೂ ಕಲಾಪವನ್ನು ತಡೆ ಹಿಡಿದಾಗ, ’ದೇಶದ ಗಮನವನ್ನು ಪೌರತ್ವ (ತಿದ್ದುಪಡಿ) ಮಸೂದೆಯ ಪರಿಣಾಮವಾಗಿ ಇಡಿ ಈಶಾನ್ಯ ಭಾಗ ಹೊತ್ತಿ ಉರಿಯುತ್ತಿರುವುದರ ವಿರುದ್ಧದ ರಾಷ್ಟ್ರವ್ಯಾಪಿ ಪ್ರತಿಭಟನೆಗಳಿಂದ ದೇಶದ ಗಮನವನ್ನು ಬೇರೆಡೆಗೆ ಸೆಳೆಯುವ ಬಿಜೆಪಿ ತಂತ್ರ ಇದುಎಂದು ತರೂರ್ ಟೀಕಿಸಿದರು.

ರಾಹುಲ್ ಗಾಂಧಿಯವರು ಕ್ಷಮೆ ಕೇಳುವ ಪ್ರಶ್ನೆ ಇಲ್ಲವೇ ಇಲ್ಲ ಎಂದು ಅವರು ಸಂಸತ್ತಿನ ಹೊರಗೂ ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.

ರಾಜ್ಯಸಭೆಯಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಪ್ರಸ್ತಾಪಿಸಿ ಕಾಂಗ್ರೆಸ್, ಟಿಎಂಸಿ, ಡಿಎಂಕೆ ಹಾಗೂ ಎಡಪಕ್ಷಗಳು ತೀವ್ರ ಗದ್ದಲ ನಡೆಸಿದ ಹಿನ್ನೆಲೆಯಲ್ಲಿ ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಕೆಲಕಾಲ ಕಲಾಪ ಮುಂದೂಡಿದರು.

ನಂತರ ಕಲಾಪ ಆರಂಭವಾದಾಗ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಈಶಾನ್ಯ ರಾಜ್ಯಗಳಲ್ಲಿನ ಹಿಂಸಾಚಾರದ ಕುರಿತು ಧ್ವನಿ ಎತ್ತಿದ ಟಿಎಂಸಿ ಮುಖಂಡರಿಗೆ ಕಾಂಗ್ರೆಸ್ ಕೂಡಾ ಬೆಂಬಲ ನೀಡಿ ಘೋಷಣೆ ಕೂಗಲು ಆರಂಭಿಸಿತ್ತು. ಏತನ್ಮಧ್ಯೆ ಟಿಎಂಸಿ ಸಂಸದ ಡೋಲಾ ಸೇನ್ ಸದನದ ಬಾವಿಗಿಳಿದು ಪೇಪರ್ ತುಣುಕುಗಳನ್ನು ಹರಿದಿದ್ದರು.

ವಿರೋಧ ಪಕ್ಷಗಳ ಪ್ರತಿಭಟನೆಗೆ ಪ್ರತಿಯಾಗಿ ಆಡಳಿತಾರೂಢ ಬಿಜೆಪಿ ಸದಸ್ಯರು ರಾಹುಲ್ ಗಾಂಧಿಯವರರೇಪ್ ಇನ್ ಇಂಡಿಯಾಹೇಳಿಕೆಯನ್ನು ಪ್ರಸ್ತಾಪಿಸಿ ಕ್ಷಮೆ ಯಾಚನೆಗೆ ಆಗ್ರಹಿಸುತ್ತಾರಾಹುಲ್ ಗಾಂಧಿ ಕ್ಷಮೆ ಯಾಚಿಸಿಎಂದು ಘೋಷಣೆಗಳನ್ನು ಕೂಗಿದರು. ಸದನದ ಸದಸ್ಯರಲ್ಲದವರ ಹೆಸರು ಪ್ರಸ್ತಾಪಿಸಬಾರದು ಎಂದು ಬಿಜೆಪಿ ಸದಸ್ಯರಿಗೆ ಸೂಚಿಸಿದ ಸಭಾಪತಿ ವೆಂಕಯ್ಯ ನಾಯ್ಡು, ಪ್ರತಿಭಟನಾ ನಿರತ ಸದಸ್ಯರಿಗೆ ಶಾಂತಿಯಿಂದ ಕಲಾಪ ನಡೆಸಲು ಅನುಕೂಲ ಮಾಡಿಕೊಡುವಂತೆ ಕೋರಿದರು. ಆದರೆ ಗದ್ದಲ ಮುಂದುವರೆದಾಗ ಕಲಾಪವನ್ನು ಮುಂದೂಡಿದರು.

No comments:

Advertisement