Saturday, December 14, 2019

ಇಂಗ್ಲೆಂಡ್ ಚುನಾವಣೆ: ಬೋರಿಸ್ ಜಾನ್ಸನ್ ಕನ್ಸರ್‌ವೇಟಿವ್ ಪಕ್ಷಕ್ಕೆ ಪ್ರಚಂಡ ಬಹುಮತ

ಇಂಗ್ಲೆಂಡ್ ಚುನಾವಣೆ: ಬೋರಿಸ್ ಜಾನ್ಸನ್ ಕನ್ಸರ್ವೇಟಿವ್ ಪಕ್ಷಕ್ಕೆ ಪ್ರಚಂಡ ಬಹುಮತ
ಲಂಡನ್: ಇಂಗ್ಲೆಂಡಿನ ಸಂಸದೀಯ ಚುನಾವಣೆಯಲ್ಲಿ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಕನ್ಸರ್ ವೇಟಿವ್ ಪಾರ್ಟಿಯು ೩೬೫ ಸ್ಥಾನಗಳನ್ನು ಗೆದ್ದು, ೮೦ ಸ್ಥಾನಗಳ ಪ್ರಚಂಡ ಬಹುಮತವನ್ನು ಪಡೆಯಿತು.

ಗುರುವಾರ ಅಂತಿಮ ಫಲಿತಾಂಶ ಪ್ರಕಟಗೊಂಡಿದ್ದು, ಮುಖ್ಯ ವಿರೋಧ ಪಕ್ಷವಾದ ಲೇಬರ್ ಪಾರ್ಟಿಯು ೨೦೩ ಸ್ಥಾನಗಳನ್ನು ಗೆದ್ದಿತು. ಮೂರನೇ ಸ್ಥಾನದಲ್ಲಿರುವ ಸ್ಕಾಟಿಶ್ ನ್ಯಾಷನಲ್ ಪಾರ್ಟಿಯು ೪೮ ಸ್ಥಾನಗಳಲ್ಲಿ ಜಯಗಳಿಸಿತು.

ಬ್ರೆಕ್ಸಿಟ್ ವಿರೋಧಿ ಲಿಬರಲ್ ಡೆಮಾಕ್ರಾಟ್ ಪಕ್ಷವು ಕೇವಲ ೧೧ ಸ್ಥಾನ ಗೆದ್ದಿದೆ. ಇತರ ಪಕ್ಷಗಳು ೨೩ ಸ್ಥಾನಗಳನ್ನು ಗೆದ್ದುಕೊಂಡಿವೆ.

No comments:

Advertisement