My Blog List

Monday, December 23, 2019

ದ್ವೇಷದ ಹಿಂದೆ ಅಡಗಿದ್ದೀರಿ: ಪ್ರಧಾನಿ, ಅಮಿತ್ ಶಾ ವಿರುದ್ಧ ರಾಹುಲ್ ವಾಗ್ದಾಳಿ

ದ್ವೇಷದ ಹಿಂದೆ ಅಡಗಿದ್ದೀರಿ: ಪ್ರಧಾನಿ, ಅಮಿತ್ ಶಾ ವಿರುದ್ಧ ರಾಹುಲ್ ವಾಗ್ದಾಳಿ
ನವದೆಹಲಿ: ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಹದಗೆಡುತ್ತಿರುವ ದೇಶದ ಆರ್ಥಿಕ ಸ್ಥಿತಿ ಬಗೆಗಿನ ಯುವಕರ ಸಿಟ್ಟಿನಿಂದ ತಪ್ಪಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರುದ್ವೇಷದ ಹಿಂದೆ ಅಡಗಿಕೊಂಡಿದ್ದಾರೆಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 2019 ಡಿಸೆಂಬರ್ 22ರ ಭಾನುವಾರ ಆಪಾದಿಸಿದರು.

ದೆಹಲಿ
ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಪೌರತ್ವ ಕಾಯ್ದೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಧೋರಣೆಯನ್ನು ಟೀಕಿಸಿದ ಬೆನ್ನಲ್ಲೇ ಟ್ವೀಟ್ ಮಾಡುವ ಮೂಲಕ ರಾಹುಲ್ ಗಾಂಧಿ ಅವರು ಉಭಯ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಕಳೆದ ಕೆಲವು ದಿನಗಳಿಂದ ಭಾರತದಿಂದ ಹೊರಗಿದ್ದ ರಾಹುಲ್ ಗಾಂಧಿ, ’ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರು ಭಾರತದ ಯುವಕರ ಭವಿಷ್ಯವನ್ನು ನಾಶ ಪಡಿಸಿದ್ದಾರೆಎಂದು ಟೀಕಿಸಿದರು.

ಮೋದಿ ಮತ್ತು ಶಾ ಅವರು ಹೆಚ್ಚುತ್ತಿರುವ ನಿರುದ್ಯೋಗ ಮತ್ತು ದೇಶದ ಆರ್ಥಿಕ ದುಃಸ್ಥಿತಿ ಹಿನ್ನೆಲೆಯಲ್ಲಿ ಯುವಕರ ಸಿಟ್ಟಿನಿಂದ ತಪ್ಪಿಸಿಕೊಳ್ಳಲುದ್ವೇಷದ ಹಿಂದೆ ಅಡಗಿದ್ದಾರೆಎಂದು ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ದೂರಿದರು.

ಭಾರತದ ಪ್ರೀತಿಯ ಯುವಕರೇ, ಮೋದಿ ಮತ್ತು ಶಾ ನಿಮ್ಮ ಭವಿಷ್ಯವನ್ನು ನಾಶ ಪಡಿಸಿದ್ದಾರೆ. ಉದ್ಯೋಗದ ಅಭಾವ ಮತ್ತು ತಾವು ಆರ್ಥಿಕತೆಗೆ ಮಾಡಿರುವ ಹಾನಿಯ ಬಗೆಗಿನ ನಿಮ್ಮ ಸಿಟ್ಟನ್ನು ಅವರು ಎದುರಿಸಲಾರರು. ಅದಕ್ಕಾಗಿ ಅವರು ನಮ್ಮ ಒಲವಿನ ಭಾರತವನ್ನು ವಿಭಜಿಸುತ್ತಿದ್ದಾರೆ ಮತ್ತು ದ್ವೇಷದ ಹಿಂದೆ ಅವಿತಿದ್ದಾರೆಎಂದು ರಾಹುಲ್ ಟ್ವೀಟ್ ಮಾಡಿದರು.

ಪ್ರತಿಯೊಬ್ಬ ಭಾರತೀಯನ ಬಗ್ಗೆ ಪ್ರೇಮ ವ್ಯಕ್ತ ಪಡಿಸುವ ಮೂಲಕ ಮಾತ್ರವೇ ನಾವು ಅವರನ್ನು ಪರಾಭವಗೊಳಿಸಬಹುದುಎಂದು ರಾಹುಲ್ ತಮ್ಮ ಟ್ವೀಟಿನಲ್ಲಿ ತಿಳಿಸಿದರು.

ದೆಹಲಿಯ
ರಾಮಲೀಲಾ ಮೈದಾನದಲ್ಲಿ ನಡೆದ ತಮ್ಮ ಬೃಹತ್ ಸಭೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ವದಂತಿಗಳನ್ನು ಹರಡುತ್ತಿವೆ ಮತ್ತು ಕಾಯ್ದೆ ವಿರುದ್ಧ ಜನರನ್ನು ಪ್ರಚೋದಿಸುತ್ತಿವೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತರಾಟೆಗೆ ತೆಗೆದುಕೊಂಡ ಬಳಿಕ ಕಾಂಗ್ರೆಸ್ ನಾಯಕನ ಟ್ವೀಟ್ ಪ್ರಕಟಗೊಂಡಿತು.

ತಮ್ಮ ಸರ್ಕಾರವು ಯೋಜನೆಗಳನ್ನು ಜಾರಿ ಮಾಡುವಾಗ ಧರ್ಮದ ನೆಲೆಯಲ್ಲಿ ಎಂದೂ ತಾರತಮ್ಯ ಮಾಡಿಲ್ಲ ಎಂದು ಮೋದಿ ಒತ್ತಿ ಹೇಳಿದ್ದರು.

ಇಂದು ದಾಖಲೆಗಳು ಮತ್ತು ಸರ್ಟಿಫಿಕೇಟುಗಳ ಹೆಸರಿನಲ್ಲಿ ಮುಸ್ಲಿಮರನ್ನು ದಾರಿತಪ್ಪಿಸುತ್ತಿರುವ ಜನರು ಬಡವರ ಅಭಿವೃದ್ಧಿಗಾಗಿ ಯೋಜನೆಗಳ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ನಾವು ಎಂದೂ ದಾಖಲೆಗಳ ನೆಲೆಯಲ್ಲಿ ನಿರ್ಬಂಧಗಳನ್ನು ಹೇರಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕುಎಂದು ಮೋದಿ ಹೇಳಿದ್ದರು.

ಶಾಸನದ ಬಗ್ಗೆ ಸ್ವತಃ ಅಧ್ಯಯನ ಮಾಡಿಕೊಳ್ಳಿ ಎಂದೂ ಪ್ರಧಾನಿ ಯುವಕರಿಗೆ ಹೇಳಿದ್ದರು
ಕಾಂಗ್ರೆಸ್, ಅದರ ಗೆಳೆಯರು ಮತ್ತು ಕೆಲವು ನಗರ ನಕ್ಸಲರು ಎಲ್ಲ ಮುಸ್ಲಿಮರನ್ನು ಬಂಧನ ಕೇಂದ್ರಗಳಿಗೆ ಕಳುಹಿಸಲಾಗುವುದು ಎಂದು ವದಂತಿಗಳನ್ನು ಹರಡುತ್ತಿದ್ದಾರೆ... ನಿಮ್ಮ ಶಿಕ್ಷಣವನ್ನು ಗೌರವಿಸಿ, ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್ಆರ್ಸಿ ಅಂದರೆ ಏನು ಎಂದು ಓದಿ, ನೀವು ವಿದ್ಯಾವಂತರುಎಂದು ಮೋದಿ ಹೇಳಿದ್ದರು.

ಪೌರತ್ವ ಕಾಯ್ದೆಯ ವಿಷಯವನ್ನು ಎತ್ತಿಕೊಂಡು ಭಾರತೀಯ ಜನತಾ ಪಕ್ಷ ನೇತೃತ್ವದ ಸರ್ಕಾರದ ವಿರುದ್ಧ ಮುಗಿ ಬಿದ್ದಿರುವ ಕಾಂಗ್ರೆಸ್ ಪಕ್ಷವು ಸೋಮವಾರ ರಾಜಘಾಟಿನ ಮಹಾತ್ಮ ಗಾಂಧಿ ಸಮಾಧಿಯ ಮುಂದೆ ತನ್ನ ಪ್ರತಿಭಟನೆ ದಾಖಲಿಸಲು ಐದು ಗಂಟೆಗಳ ಸತ್ಯಾಗ್ರಹ ಹಮ್ಮಿಕೊಂಡಿದೆ.

ಕಾಂಗ್ರೆಸ್
ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾಧ್ರ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಇತರ ನಾಯಕರೊಂದಿಗೆ ರಾಹುಲ್ ಗಾಂಧಿಯವರೂ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲಿದ್ದಾರೆ. ಸತ್ಯಾಗ್ರಹವು ಮಧ್ಯಾಹ್ನ ೩ರಿಂದ ರಾತ್ರಿ ಗಂಟೆಯವರೆಗೆ ನಡೆಯಲಿದೆ.

ದೇಶಾದ್ಯಂತ ನೂತನ ಕಾಯ್ದೆ ವಿರುದ್ಧ ಭುಗಿಲೆದ್ದಿರುವ ಹಿಂಸಾತ್ಮಕ ಪ್ರತಿಭಟನೆಗಳ ಕಾಲದಲ್ಲಿ ಒಂದು ಡಜನ್ಗೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಹಿಂಸೆಯು ಹಲವಾರು ಜಿಲ್ಲೆಗಳಿಗೆ ವ್ಯಾಪಿಸಿದ್ದು ಈವರೆಗೆ ಒಟ್ಟು ೧೭ ಮಂದಿ ಸಾವನ್ನಪ್ಪಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಯು ಮುಸ್ಲಿಂ ಬಾಹುಳ್ಯದ ಆಫ್ಘಾನಿಸ್ಥಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ ಭಾರತಕ್ಕೆ ಬಂದಿರುವ ಅಲ್ಲಿನ ಅಲ್ಪಸಂಖ್ಯಾತರಾದ ಹಿಂದುಗಳು, ಸಿಕ್ಖರು, ಕ್ರೈಸ್ತರು, ಬೌದ್ಧರು, ಜೈನರು ಮತ್ತು ಪಾರ್ಸಿಗಳು ಆರು ಸಮುದಾಯಗಳ ನಿರಾಶ್ರಿತರಿಗೆ ಭಾರತೀಯ ಪೌರತ್ವ ಒದಗಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲಿದೆ.

No comments:

Advertisement