My Blog List

Wednesday, December 4, 2019

ಗ್ರಾಮೀಣ ಬಡತನ ಮಟ್ಟ ಇನ್ನಷ್ಟು ಹೆಚ್ಚಳ

ಗ್ರಾಮೀಣ ಬಡತನ ಮಟ್ಟ ಇನ್ನಷ್ಟು ಹೆಚ್ಚಳ
ನವದೆಹಲಿ: ಬಡತನ ನಿಯಂತ್ರಣಕ್ಕೆ ಸರ್ಕಾರಗಳು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ಗ್ರಾಮೀಣ ಮಟ್ಟದಲ್ಲಿ ಬಡತನ ಇನ್ನೂ ಏರಿದೆ ಎಂದು ಅಂಕಿ ಅಂಶಗಳು ಹೇಳಿವೆ.

೧೯೮೦ರ
ಬಳಿಕ ಭಾರತ ಅಭಿವೃದ್ಧಿಯ ಹಳಿಯಲ್ಲಿದ್ದರೂ, ಗ್ರಾಮೀಣ ಬಡತನ ಏರುತ್ತಿರುವುದು ನಿಜಕ್ಕೂ ಒಂದು ಸವಾಲಾಗಿದೆ. ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್ಎಸ್) ಗ್ರಾಮೀಣ ಬಡತನ ಏರಿರುವ ಕುರಿತ ಅಂಕಿಅಂಶಗಳನ್ನು 2019 ಡಿಸೆಂಬರ್ 03ರ ಮಂಗಳವಾರ ಬಹಿರಂಗ ಪಡಿಸಿತು.

ಅಂಕಿಸಂಖ್ಯೆಗಳ ಪ್ರಕಾರ ೨೦೧೧-೧೨ರ ಅವಧಿಯಲ್ಲಿ ಗ್ರಾಮೀಣ ಬಡತನ ಶೇ.೪ರಷ್ಟು ಏರಿಕೆ ಕಂಡಿದ್ದರೆ, ೨೦೧೭-೧೮ರಲ್ಲಿ ಗ್ರಾಮೀಣ ಬಡತನ ಶೇ.೩೦ರಷ್ಟು ಏರಿಕೆ ಕಂಡಿದೆ. ಇದೇ ಅವಧಿಯಲ್ಲಿ ನಗರ ಬಡತನ ಶೇ.೫ರಷ್ಟು ಮತ್ತು ಶೇ.೯ರಷ್ಟು ಇಳಿಕೆ ಕಂಡಿದೆ. ಒಟ್ಟಾರೆ ಲೆಕ್ಕಾಚಾರದ ಪ್ರಕಾರ ೨೦೧೭-೧೮ರ ಅವಧಿಯಲ್ಲಿ ಬಡತನ ಶೇ.೨೩ರಷ್ಟು ಇದೆ ಎಂದು ಹೇಳಲಾಗಿದೆ. ಸದ್ಯದ ಮಾಹಿತಿ ಪ್ರಕಾರ ದೇಶದಲ್ಲಿ ಕೋಟಿ ಮಂದಿ ಬಡತನ ರೇಖೆಗಿಂತ ಕೆಳಗಿನವರು ಎಂದು ಹೇಳಲಾಯಿತು.

ಅತಿ ಹೆಚ್ಚು ಬಡತನ ದೊಡ್ಡ ರಾಜ್ಯಗಳಾದ ಜಾರ್ಖಂಡ್, ಬಿಹಾರ, ಒಡಿಶಾದಲ್ಲೇ ಇದೆ. ಬಿಹಾರದಲ್ಲಿ ೨೦೧೧-೧೨ರಲ್ಲಿ ಗ್ರಾಮೀಣ ಬಡತನ ಶೇ.೧೭ರಷ್ಟು ಇದ್ದರೆ, ೨೦೧೭-೧೮ರಲ್ಲಿ ಶೇ.೫೦.೪೭ಕ್ಕೆ ಏರಿದೆ.
ಜಾರ್ಖಂಡ್ನಲ್ಲಿ ಶೇ..೬ರಷ್ಟು ಏರಿಕೆಯಾಗಿದ್ದರೆ, ಒಡಿಶಾದಲ್ಲಿ ಶೇ..೧ರಷ್ಟು ಏರಿಕೆಯಾಗಿದೆ.

ಜಾರ್ಖಂಡ್
ಮತ್ತು ಒಡಿಶಾದಲ್ಲಿ ಶೇ.೪೦ರಷ್ಟಕ್ಕಿಂತಲೂ ಹೆಚ್ಚು ಮಂದಿ ಬಡತನ ರೇಖೆಗಿಂತ ಕೆಳಗಿನವರು ಎಂದು ಹೇಳಲಾಯಿತು.

No comments:

Advertisement