My Blog List

Tuesday, December 3, 2019

ರಾಷ್ಟ್ರವ್ಯಾಪಿ ನುಸುಳುಕೋರರ ಉಚ್ಛಾಟನೆಗೆ 2024ರ ಗಡುವು

ರಾಷ್ಟ್ರವ್ಯಾಪಿ ನುಸುಳುಕೋರರ ಉಚ್ಛಾಟನೆಗೆ 2024ರ ಗಡುವು
ಜಾರ್ಖಂಡ್ನಲ್ಲಿ ಕೇಂದ್ರ ಸಚಿವ ಅಮಿತ್ ಶಾ ಪ್ರಕಟಣೆ
ರಾಂಚಿ: ಸರ್ಕಾರವು ಎಲ್ಲ ನುಸುಳುಕೋರರನ್ನೂ ೨೦೨೪ರ ಒಳಗಾಗಿ ದೇಶದಿಂದ ಉಚ್ಛಾಟಿಸಲಿದೆ ಎಂದು ಗೃಹ ಸಚಿವ ಅಮಿತ್ ಶಾ ಅವರು 2019 ಡಿಸೆಂಬರ್ 02ರ ಸೋಮವಾರ ಜಾರ್ಖಂಡಿನಲ್ಲಿ ಪ್ರಕಟಿಸಿದರು.

ಮುಸ್ಲಿಂ ಬಾಹುಳ್ಯದ ಆಫ್ಘಾನಿಸ್ಥಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರಿಗೆ ಭಾರತೀಯ ಪೌರತ್ವ  ನೀಡುವಿಕೆಯನ್ನು ತ್ವರಿತಗೊಳಿಸುವ ಮಸೂದೆಯ ಮೇಲೆ ಸಂಸತ್ತಿನಲ್ಲಿ  ಚರ್ಚೆ ಆರಂಭವಾಗುವುದಕ್ಕೆ ಮುನ್ನವೇ ದೇಶದ ಒಳಗಿರುವ ನುಸುಳುಕೋರರನ್ನು ಹೊರಹಾಕುವ ಬಗೆಗಿನ ಪ್ರಕಟಣೆಯನ್ನು ಅಮಿತ್ ಶಾ ಮಾಡಿದರು.

ಐದು ಹಂತಗಳಲ್ಲಿ ಜಾರ್ಖಂಡ್ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯ ಪ್ರಚಾರದ ಸಲುವಾಗಿ ಜಾರ್ಖಂಡಿಗೆ ಪುನಃ ಆಗಮಿಸಿದ ಶಾ, ತಮ್ಮ ಪ್ರಚಾರಸಭೆಯಲ್ಲಿ ನುಸುಳುಕೋರರನ್ನು ದೇಶದಿಂದ ಹೊರಹಾಕುವ ಸಲುವಾಗಿ ರಾಷ್ಟ್ರವ್ಯಾಪಿ ಪೌರತ್ವ ನೊಂದಣಿ ನಡೆಸುವುದನ್ನು ಆಕ್ಷೇಪಿಸುತ್ತಿರುವುದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡರು.

ನುಸುಳುಕೋರರನ್ನು ರಾಷ್ಟ್ರ ಮತ್ತು ಜಾರ್ಖಂಡ್ನಿಂದ ಹೊರ ಹಾಕುವುದು ಬೇಡವೇ?’ ಎಂದು ಶಾ ಅವರು ಜಾರ್ಖಂಡಿನ ಪೂರ್ವ ಸಿಂಘಭೂಮ್ ಜಿಲ್ಲೆಯ ಬಹರಗೋರಾ ಪಟ್ಟಣದಲ್ಲಿ ನಡೆದ ಸಭೆಯಲ್ಲಿ ಪ್ರಶ್ನಿಸಿದರು.

ಆದರೆ ರಾಹುಲ್ ಬಾಬಾ  ಅವರು ರಾಷ್ಟ್ರೀಯ ಪೌರತ್ವ ನೋಂದಣಿಗೆ ಆಕ್ಷೇಪ ವ್ಯಕ್ತ ಪಡಿಸುತ್ತಿದ್ದಾರೆ. ಅವರನ್ನು ಉಚ್ಛಾಟಿಸಬೇಡಿ , ಅವರು ಎಲ್ಲಿಗೆ ಹೋಗುತ್ತಾರೆ, ಏನನ್ನು ತಿನ್ನುತ್ತಾರೆ? ಎಂದು ಹೇಳುತ್ತಿದ್ದಾರೆಎಂದು ಕೇಂದ್ರ ಗೃಹ ಸಚಿವರು ಹೇಳಿದರು.

ಆದರೆ, ರಾಹುಲ್ ಅವರು ತಾವು ಏನನ್ನು ಬಯಸುತ್ತಿದ್ದಾರೆ ಎಂಬುದನ್ನು ಹೇಳಲಿ. ೨೦೨೪ರ ಒಳಗಾಗಿ ದೇಶದಿಂದ ಪ್ರತಿಯೊಬ್ಬ ನುಸುಳುಕೋರನನ್ನೂ ನಾವು ಹೊರಹಾಕುತ್ತೇವೆ ಎಂಬುದಾಗಿ ನಿಮಗೆ ಭರವಸೆ ನೀಡಲು ನಾನು ಇಲ್ಲಿಗೆ ಬಂದಿದ್ದೇನೆಎಂದು ಅಮಿತ್ ಶಾ ನುಡಿದರು.

ಜಾರ್ಖಂಡ್ನಲ್ಲಿ  ಮುಖ್ಯಮಂತ್ರಿ ರಘುಬರದಾಸ್ ಸರ್ಕಾರ ಮತ್ತು ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಏನು ಸಾಧನೆಗಳನ್ನು ಮಾಡಿದೆ ಎಂಬುದಾಗಿ ಪಟ್ಟಿ ಮಾಡುವ ಮೂಲಕ ಅಮಿತ್ ಶಾ ಅವರು ತಮ್ಮ ಭಾಷಣವನ್ನು ಆರಂಭಿಸಿದರು.

ಎನ್ಡಿಎ ಸರ್ಕಾರವು ಸಂವಿಧಾನದ ೩೭೦ನೇ ವಿಧಿಯನ್ನು ರದ್ದು ಪಡಿಸಿದ ಕ್ರಮದ ಬಗ್ಗೆ ಮಾತು ಆರಂಭಿಸುವುದಕ್ಕೆ ಮುನ್ನನಾನು ಮುಂದುವರಿಯಬಲ್ಲೆ, ಮತ್ತು ಮುಂದಕ್ಕೆ ಸಾಗುತ್ತಲೇ ಇರಬಲ್ಲೆಎಂದು ನುಡಿದ ಅಮಿತ್ ಶಾ, ’ಕಾಶ್ಮೀರವು ಭಾರತದ ಜೊತೆಗೇ ಉಳಿಯಲಿದೆಎಂದು ಭರವಸೆ ನೀಡಿದರು. ಇತ್ತೀಚೆಗೆ ಸುಪ್ರೀಂಕೋರ್ಟ್  ಅಯೋಧ್ಯಾ ಭೂಮಿ ಹಕ್ಕು ವಿವಾದಕ್ಕೆ ಸಂಬಂಧಿಸಿದಂತೆ  ನೀಡಿದ ತೀರ್ಪನ್ನೂ ಅವರು ಪ್ರಸ್ತಾಪಿಸಿದರು.

ಪೌರತ್ವ ನೋಂದಣಿ ಜಾರಿ ಕುರಿತು ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ತಮ್ಮ ಪಕ್ಷದ ಮಧ್ಯೆ ನಡೆಯುತ್ತಿರುವ ಘರ್ಷಣೆಯ ನಡುವೆಯೇ ಶಾ ಅವರು ದೇಶಾದ್ಯಂತ ಪೌರತ್ವ ನೋಂದಣಿ ಅನುಷ್ಠಾನಗೊಳಿಸುವ ಬಗ್ಗೆ ಒತ್ತು ನೀಡಿದ್ದಾರೆ.

ಸುಪ್ರೀಂಕೋರ್ಟಿನ ನಿಗಾದಲ್ಲಿ ಪೌರತ್ವ ನೋಂದಣಿಯು ಜಾರಿಯಾಗಿರುವ ದೇಶದ ಮೊತ್ತ ಮೊದಲ ರಾಜ್ಯವಾದ ಅಸ್ಸಾಮಿನಲ್ಲಿ ಹೊಸ ಪಟ್ಟಿ ಶೀಘ್ರದಲ್ಲೇ ಸಿದ್ಧವಾಗಲಿದೆ ಎಂದು ಸರ್ಕಾರ ಈಗಾಗಲೇ ಪ್ರಕಟಿಸಿದೆ. ವಿರೋಧ ಪಕ್ಷಗಳು ಹೇಳಿರುವಂತೆ ಮುಸ್ಲಿಮರಂತಹ ಅಲ್ಪಸಂಖ್ಯಾತ ಸಮುದಾಯಗಳ ವ್ಯಕ್ತಿಗಳನ್ನು ಗುರಿಯಾಗಿ ಇಟ್ಟುಕೊಂಡು ಕಾರ್ಯವನ್ನು ನಡೆಸಲಾಗುತ್ತಿಲ್ಲ ಎಂದು ಸರ್ಕಾರ ಒತ್ತಿ ಹೇಳಿತು.

No comments:

Advertisement