Wednesday, December 4, 2019

ಅಡುಗೆ ಇಂಧನ ದರ ಏರಿಕೆ

ಅಡುಗೆ ಇಂಧನ ದರ ಏರಿಕೆ
ನವದೆಹಲಿ: ಸತತ ನಾಲ್ಕನೇ ಬಾರಿ ಎಲ್ಪಿಜಿ ಸಿಲಿಂಡರ್ ದರದಲ್ಲಿ ಏರಿಕೆ ಕಂಡುಬಂದಿದ್ದು, ೧೪. ಕೆಜಿ ಸಿಲಿಂಡರ್ ಮೇಲೆ ೧೩.೫೦ ರೂ. ಬೆಲೆ ಹೆಚ್ಚಳವಾಯಿತು.

ಇಂಡಿಯನ್ ಆಯಿಲ್ ಕಂಪನಿಯ ಪ್ರಕಾರ, ದೇಶಾದ್ಯಂತ ನಿತ್ಯ ೩೦ ಲಕ್ಷ ಸಿಲಿಂಡರ್ ವಿತರಣೆ ಆಗುತ್ತಿದೆ. ನವದೆಹಲಿಯಲ್ಲಿ ೧೪. ಕೆಜಿ ಸಬ್ಸಿಡಿ ರಹಿತ ಸಿಲಿಂಡರ್ ೬೯೫ ರೂ.ಗೆ ಲಭ್ಯವಾಗುತ್ತಿದ್ದು, ಮುಂಬಯಿಯಲ್ಲಿ ೬೬೫, ಚೆನ್ನೈಯಲಲಿ ೭೧೪ ರೂ. ಮತ್ತು ಕೋಲ್ಕತ್ತಾದಲ್ಲಿ ೭೨೫ ರೂ.ಗೆ ಮಾರಾಟ ಆಗುತ್ತಿದೆ.

ಪರಿಸ್ಥಿತಿಯ ಲಾಭ ಪಡೆದುಕೊಳ್ಳುತ್ತಿರುವ ಇಂಧನ ಚಿಲ್ಲರೆ ವ್ಯಾಪಾರಿಗಳು ದಿನದಿಂದ ದಿನಕ್ಕೆ ಬೆಲೆಗಳನ್ನು ಬದಲಾವಣೆ ಮಾಡುತ್ತಿದ್ದಾರೆ. ಕಳೆದ ತಿಂಗಳು ಸುಮಾರು ೭೬ ರೂ. ಹೆಚ್ಚಳವಾಗಿದ್ದರೆ ಅಕ್ಟೋಬರ್ ಮತ್ತು ಸೆಪ್ಟೆಂಬರಿನಲ್ಲಿ ತಲಾ ೧೫ ರೂ. ಏರಿಕೆಯಾಗಿದೆ ಎಂದು ವರದಿಗಳು ತಿಳಿಸಿದವು.

ತಿಂಗಳ ಪ್ರಾರಂಭದಲ್ಲೇ ೧೩.೫೦ ರೂ. ಹೆಚ್ಚಳವಾಗಿದ್ದು, ಅಂತಾರಾಷ್ಟ್ರೀಯ ಮಾನದಂಡದ ಪ್ರಕಾರ ಡಾಲರ್ ಮತ್ತು ರೂಪಾಯಿ ವಿನಿಮಯ ದರದ ಮೇಲೆ ಎಲ್.ಪಿ.ಜಿ. ಬೆಲೆ ನಿರ್ಧಾರವಾಗುತ್ತದೆ. ಈರುಳ್ಳಿ ದರ ಏರಿಕೆ ಆಗುತ್ತಿರುವುದರ ನಡುವೆಯೇ ಅಡುಗೆ ಇಂಧನ ಅನಿಲ ಬೆಲೆ ಹೆಚ್ಚಾಗಿರುವುದು ಗ್ರಾಹಕರನ್ನು ಮತ್ತಷ್ಟು ಆತಂಕಕ್ಕೆ ಈಡು ಮಾಡಿದೆ.

No comments:

Advertisement