Wednesday, December 11, 2019

ಫಿನ್ಲೆಂಡಿನ ಸನ್ನಾ ಮರಿನ್ ವಿಶ್ವದ ಅತಿ ಕಿರಿಯ ಪ್ರಧಾನಿ

ಫಿನ್ಲೆಂಡಿನ  ಸನ್ನಾ ಮರಿನ್ ವಿಶ್ವದ ಅತಿ ಕಿರಿಯ ಪ್ರಧಾನಿ
ಹೆಲ್ಸಿಂಕಿ: ಫಿನ್ಲೆಂಡ್ ದೇಶದ ಪ್ರಧಾನಿಯಾಗಿ ೩೪ ವರ್ಷ ವಯಸ್ಸಿನ ಸನ್ನಾ ಮರಿನ್ 2019 ಡಿಸೆಂಬರ್ 10ರ ಮಂಗಳವಾರ ಆಯ್ಕೆಯಾದರು. ಇವರು ಜಗತ್ತಿನ ಅತಿ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆ ಪಾತ್ರರಾದರು.

ಸಂಸತ್ತಿನ ೨೦೦ ಸದಸ್ಯರ ಪೈಕಿ ೯೯ ಸದಸ್ಯರು ಸನ್ನಾ ಮರಿನ್ ನಾಮನಿರ್ದೇಶನದ ಪರವಾಗಿ ಮತ್ತು ೭೦ ಸದಸ್ಯರು ವಿರುದ್ಧ ಮತ ಹಾಕಿದ್ದರು. ಮೂವತ್ತು ಸದಸ್ಯರು ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿರಲಿಲ್ಲ.

’ಪ್ರತಿ ಮಗುವೂ ಬಯಸಿದ ಸಾಧನೆ, ಎತ್ತರಕೆ ಬೆಳೆಯಲು ಅನುವಾಗುವ ಸಮಾಜವನ್ನು ನಿರ್ಮಾಣ ಮಾಡಲು ಬಯಸುತ್ತೇನೆ. ಅಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಅತ್ಯಂತ ಗೌರವದಿಂದ ಬದುಕಿ, ಬಾಳುವರು.’ ಎಂದು ಮರಿನ್ ಟ್ವೀಟಿಸಿದರು.

 ಫಿನ್ಲೆಂಡಿನಲ್ಲಿ ನಡೆದ ’ಪೋಸ್ಟಲ್ ಸ್ಟ್ರೈಕ್’ ನಿರ್ವಹಣೆಯಲ್ಲಿ ಸರ್ಕಾರ ಎಡವಿದೆ ಎಂದು ಮೈತ್ರಿ ಪಕ್ಷ ಸೆಂಟ್ರೆ ಪಾರ್ಟಿ ಅವಿಶ್ವಾಸ ಮಂಡಿಸಿದ ಪರಿಣಾಮ ಸೋಶಿಯಲ್ ಡೆಮೊಕ್ರಾಟ್ ಪಕ್ಷದ  ಪ್ರಧಾನಿ ಅಂಟಿ ರಿನೆ ಕೆಳದವಾರ ರಾಜೀನಾಮೆ ನೀಡಿದ್ದರು.

 ಸಂಸತ್ತಿನ ಅನುಮೋದನೆಯ ಬಳಿಕ ಫಿನ್ಲೆಂಡಿನ ಅಧ್ಯಕ್ಷರು ಮರಿನ್ ಅವರ ಐದು ಮೈತ್ರಿ ಪಕ್ಷಗಳ ಸಂಪುಟಕ್ಕೆ ನಾಮನಿರ್ದೇಶನ ಮಾಡಲಿದ್ದಾರೆ. ಸಂಪುಟವು ೧೨ ಮಂದಿ ಮಹಿಳಾ ಸಚಿವರು ಮತ್ತು ೭ ಮಂದಿ ಪುರುಷ ಸಚಿವರನ್ನು ಹೊಂದಲಿದೆ.

No comments:

Advertisement