My Blog List

Tuesday, December 3, 2019

ಲೆಫ್ಟಿನೆಂಟ್ ಶಿವಾಂಗಿ ಭಾರತೀಯ ನೌಕಾದಳದ ಮೊದಲ ಮಹಿಳಾ ಪೈಲಟ್

ಲೆಫ್ಟಿನೆಂಟ್ ಶಿವಾಂಗಿ ಭಾರತೀಯ ನೌಕಾದಳದ
ಮೊದಲ ಮಹಿಳಾ ಪೈಲಟ್
ಕೋಚಿ:ಭಾರತೀಯ ನೌಕಾಪಡೆಯ ಮೊದಲ ಮಹಿಳಾ ಪೈಲಟ್ ಆಗಿ ಉಪ ಲೆಫ್ಟಿನೆಂಟ್ ಶಿವಾಂಗಿ 2019 ಡಿಸೆಂಬರ್ 02ರ ಸೋಮವಾರ ನೇಮಕಗೊಳ್ಳುವ  ಮೂಲಕ ಭಾರತೀಯ ನೌಕಾಪಡೆಯ ಮೊದಲ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

‘ನನಗೆ ಇದೊಂದು ತುಂಬಾ ಹೆಮ್ಮೆಯ ವಿಚಾರವಾಗಿದೆ. ನನ್ನ ಪೋಷಕರಿಗೆ ತುಂಬಾ ಖುಷಿಕೊಟ್ಟಿದೆ. ನನ್ನ ದೀರ್ಘಕಾಲದ ಕನಸು ಕೊನೆಗೂ ನನಸಾಗಿದೆ. ನಾನೀಗ ಮೊದಲ ಮಹಿಳಾ ಪೈಲಟ್ ಎಂಬುದು ದೊಡ್ಡ ಹೆಮ್ಮೆಯ ವಿಚಾರವಾಗಿದೆ. ನಾನೀಗ ನನ್ನ ಮೂರನೇ ಹಂತದ ತರಬೇತಿಯನ್ನು ಪೂರ್ಣಗೊಳಿಸಲು ಎದುರು ನೋಡುತ್ತಿದ್ದೇನೆ ಎಂದು ಕೋಚಿ ನೌಕಾನೆಲೆಯಲ್ಲಿ ಕರ್ತವ್ಯಕ್ಕೆ ಹಾಜರಾದ ನಂತರ ಶಿವಾಂಗಿ ಈ ಪ್ರತಿಕ್ರಿಯೆ ನೀಡಿದರು.

ಬಿಹಾರದ ಮುಝಾಫರ್ ಪುರದಲ್ಲಿ ಜನಿಸಿರುವ ಶಿವಾಂಗಿ. ಪ್ರಾಥಮಿಕ ತರಬೇತಿಯ ನಂತರ ೨೦೧೮ರಲ್ಲಿ ಭಾರತೀಯ ನೌಕಾಪಡೆಗೆ ಆಯ್ಕೆಯಾಗಿದ್ದರು. ಸೋಮವಾರ ಕೋಚಿಯ ನೌಕಾ ನೆಲೆಗೆ ಶಿವಾಂಗಿ ಪೈಲಟ್ ಆಗಿ ಕರ್ತವ್ಯಕ್ಕೆ ಹಾಜರಾಗಿದ್ದರು.

ನೌಕಾಪಡೆಯಲ್ಲಿ ಈಗಾಗಲೇ ಮಹಿಳೆಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಹಿಳೆ ಕಾಕ್ ಪಿಟ್ ನಲ್ಲಿ ಇಲ್ಲದಿರುವಾಗ ಆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಉತ್ಸಾಹಿಗಳು ಇದ್ದೇ ಇರುತ್ತಾರೆ. ಆದರೆ ಇದು ಸ್ವಲ್ಪ ವಿಭಿನ್ನವಾದದ್ದು. ಇದೇ ಮೊದಲ ಬಾರಿಗೆ ಕಾಕ್ ಪಿಟ್ ನಲ್ಲಿ ಮಹಿಳೆ ಇರುವಂತಾಗಿದೆ.

ಇದರಿಂದಾಗಿ ರಕ್ಷಣಾ ಕ್ಷೇತ್ರದಲ್ಲಿ ಬೇರೆ ಮಹಿಳೆಯರಿಗೂ ಹೆಚ್ಚಿನ ಅವಕಾಶ ಕಲ್ಪಿಸಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಮಹಿಳೆಯೂ ಕೂಡಾ ಹೆಲಿಕಾಪ್ಟರ್ ಮತ್ತು ಯುದ್ಧ ವಿಮಾನಗಳಲ್ಲಿಯೂ ತನ್ನ ಕರ್ತವ್ಯ ನಿರ್ವಹಿಸಲು ಆರಂಭವಾಗಬಹುದು ಎಂದು ಶಿವಾಂಗಿ ಹೇಳಿದರು.

No comments:

Advertisement