Friday, December 6, 2019

ಉತ್ತರ ಪ್ರದೇಶ: ಸಾಮೂಹಿಕ ಅತ್ಯಾಚಾರ ಸಂತ್ರಸ್ಥೆಗೆ ಬೆಂಕಿ

ಉತ್ತರ ಪ್ರದೇಶ: ಸಾಮೂಹಿಕ ಅತ್ಯಾಚಾರ ಸಂತ್ರಸ್ಥೆಗೆ ಬೆಂಕಿ
ಐವರು ದುಷ್ಕರ್ಮಿಗಳ ಪೈಕಿ ಮೂವರ ಬಂಧನ
ನವದೆಹಲಿ: ಉತ್ತರ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ೩೦ರ ಹರೆಯದ ಸಂತ್ರಸ್ಥೆಯ ಮೇಲೆ ಉನ್ನಾವೋ ಜಿಲ್ಲೆಯಲ್ಲಿ ಗುರುವಾರ ನಸುಕಿನಲ್ಲಿ ಐವರು ವ್ಯಕ್ತಿಗಳು ಹಲ್ಲೆ ನಡೆಸಿ ಬೆಂಕಿ ಹಚ್ಚಿದ ಘಟನೆ ಘಟಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂದಿ ಹಲ್ಲೆಕೋರರ ಪೈಕಿ ಒಬ್ಬ ವ್ಯಕ್ತಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಆರೋಪಿಗಳ ಪೈಕಿ ಒಬ್ಬನಾಗಿದ್ದು, ಆತನನ್ನು ಈವರೆಗೂ ಬಂಧಿಸಲಾಗಿರಲಿಲ್ಲ.

ಮಹಿಳೆ ನಸುಕಿನಲ್ಲಿ ರಾಯ್ ಬರೇಲಿಗೆ ನ್ಯಾಯಾಲಯಕ್ಕೆ ಹಾಜರಾಗುವ ಸಲುವಾಗಿ ರೈಲ್ವೇ ನಿಲ್ದಾಣದತ್ತ ಹೊರಟಿದ್ದಾಗ ಹಲ್ಲೆ ನಡೆದಿದೆ. ಆಕೆಯನ್ನು ಆರೋಪಿಗಳ ಮಾರ್ಗ ಮಧ್ಯದಲ್ಲೇ ತಡೆದು ಹಲ್ಲೆ ನಡೆಸಿದರು ಎಂದು ಪೊಲೀಸರು ತಿಳಿಸಿದರು.

ಮಹಿಳೆಯನ್ನು ಲಕ್ನೋ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಗೆ ಶೇಕಡಾ ೬೦ರಷ್ಟು ಸುಟ್ಟ ಗಾಯಗಳಾಗಿವೆ ಎಂದು ಉತ್ತರಪ್ರದೇಶ ಪೊಲೀಸ್ ಮುಖ್ಯಸ್ಥ ಒಪಿ ಸಿಂಗ್ ಹೇಳಿದರು.
ದಾಳಿ ನಡೆದ ವೇಳೆಯಲ್ಲಿ ಮಹಿಳೆ ತನ್ನ ಮೇಲಾಗಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗಲು ಹೊರಟಿದ್ದಳು.

ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಮಹಿಳೆ, ಆರೋಪಿಗಳು ಮೊದಲ ತನ್ನ ತಲೆಗೆ ಹೊಡೆದು ಬಳಿಕ ಚೂರಿಯಿಂದ ಕತ್ತಿಗೆ ಇರಿದರು, ಕೆಳಕ್ಕೆ ಕುಸಿಯುತ್ತಿದ್ದಂತೆಯೇ ಅವರು ತನ್ನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು ಎಂದು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಸನಿಹದಲ್ಲಿದ್ದ ಕೆಲವರು ಆಕೆಯ ರಕ್ಷಣೆಗೆ ಬರುತ್ತಿದ್ದಂತೆಯೇ ಆರೋಪಿಗಳು ಸ್ಥಳದಿಂದ ಪರಾರಿಯಾದರು.

ಮಹಿಳೆ
ಹೆಸರಿಸಿದ ಐವರು ಪುರುಷರ ಪೈಕಿ ಮೂವರನ್ನು ಬಂಧಿಸಲಾಗಿದ್ದು, ಅವರಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ ವ್ಯಕ್ತಿಯೂ ಸೇರಿದ್ದಾನೆ ಎಂದು ಉನ್ನಾವೋ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ವೀರ್ ಹೇಳಿದರು.

ನಸುಕಿನ .೩೦ರ ವೇಳೆಯಲ್ಲಿ ತಾನು ಬೈಸ್ವಾರ ಬಿಹಾರ ರೈಲ್ವೇ ನಿಲ್ದಾಣದತ್ತ ಹೋಗುತ್ತಿದ್ದಾಗ ತನ್ನ ಮೇಲೆ ದಾಳಿ ನಡೆಯಿತು ಎಂದು ಮಹಿಳೆ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾಳೆ.
ಗೌರಾ ಕ್ರಾಸಿಂಗ್ನಲ್ಲಿ ಹರಿಶಂಕರ್ ತ್ರಿವೇದಿ, ಕಿಶೋರ್, ಶುಭಮ್, ಶಿವಮ್, ಉಮೇಶ್ ಮತ್ತು ಇತರ ಇಬ್ಬರು ತನ್ನನ್ನು ಅಡ್ಡ ಗಟ್ಟಿದರು ಎಂದು ಮಹಿಳೆ ಹೇಳಿದ್ದಾಳೆ.

ಮಹಿಳೆ ತನ್ನ ಮೇಲೆ ಇಬ್ಬರು ಪುರುಷರು ಅತ್ಯಾಚಾರ ಎಸಗಿದ ಬಗ್ಗೆ ದೂರು ನೀಡಿದ್ದಾಗ, ಒಬ್ಬ ಶಂಕಿತನನ್ನು ಮಾತ್ರ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಆತನನ್ನು ಬಳಿಕ ಜಾಮೀನಿನಲ್ಲಿ ಬಿಡುಗಡೆ ಮಾಡಲಾಗಿತ್ತು. ಎರಡನೇ ಆರೋಪಿ ಕಣ್ಮರೆಯಾಗಿದ್ದ ಮತ್ತು ಹೈಕೋರ್ಟಿನಿಂದ ಬಂಧನದ ವಿರುದ್ಧ ತಡೆಯಾಜ್ಞೆ  ಪಡೆಯಲು ಯತ್ನಿಸಿ ವಿಫಲನಾಗಿದ್ದ. ಪೊಲೀಸರು ಆತನ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಕ್ರಮ ಕೈಗೊಂಡಿದ್ದರು.

ಇದು (ಅಪರಾಧ ನ್ಯಾಯ) ವ್ಯವಸ್ಥೆಯ ವೈಫಲ್ಯಎಂದು ಸಿಂಗ್ ಸುದ್ದಿ ಜಾಲವೊಂದರ ಜೊತೆಗೆ ಮಾತನಾಡುತ್ತಾ ಹೇಳಿದರು.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮೇಲೆ ದಾಳಿ ನಡೆಸಲು ಗುರುವಾರದ ದಾಳಿ ಘಟನೆಯನ್ನು  ಬಳಸಿಕೊಂಡರು.

ಉತ್ತರ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಸುಧಾರಿಸಿದೆ ಎಂದು ರಾಷ್ಟ್ರದ ಗೃಹ ಸಚಿವರು ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಸ್ಪಷ್ಟವಾಗಿ ಸುಳ್ಳು ಹೇಳಿದ್ದಾರೆ... ಬಿಜೆಪಿ ನಾಯಕರು ಈಗ ನಕಲಿ ಪ್ರಚಾರವನ್ನು ನಿಲ್ಲಿಸಬೇಕು ಎಂದು ಪ್ರಿಯಾಂಕಾ ಟ್ವೀಟ್ ಮಾಡಿದರು.

ನೆರವಿಗಾಗಿ ಬೆಂಕಿಹೊತ್ತು ಓಡಿದ್ದ ಸಂತ್ರಸ್ತೆ
ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಮೈಗೆ ಹೊತ್ತಿಕೊಂಡು ಉರಿಯುತ್ತಿದ್ದ ಬೆಂಕಿಯ ಮಧ್ಯೆಯೇ ಕನಿಷ್ಠ ಒಂದು ಕಿಮೀ ದೂರ ನೆರವು ಬೇಡುತ್ತಾ ಓಡಿದ್ದ ವಿಚಾರ ಗುರುವಾರ ತಡವಾಗಿ ಬೆಳಕಿಗೆ ಬಂದಿದೆ.

ಗೌರಾ ಪಟ್ಟಣದಿಂದ ಉನ್ನಾವೋ ರೈಲ್ವೇ ನಿಲ್ದಾಣದವರೆಗೆರಕ್ಷಿಸಿ, ರಕ್ಷಿಸಿಎಂದು ಕೂಗುತ್ತಾ ಆಕೆ ಓಡಿದ್ದು, ಗ್ರಾಮಸ್ಥರು ಆಕೆಮಾಟಗಾತಿಇರಬಹುದು ಎಂಬ ಶಂಕೆಯಿಂದ ನೆರವು ನೀಡಲು ಹಿಂದೇಟು ಹಾಕಿದ್ದರು ಎನ್ನಲಾಗಿದೆ.

ಕೊನೆಗೆ ಗ್ಯಾಸ್ ಗೋದಾಮು ಒಂದರ ಗಾರ್ಡ್ ರವೀಂದ್ರ ಪ್ರಕಾಶ್ ಸಿಂಗ್ ಅವರು ಆಕೆ ಮಾಟಗಾತಿ ಅಲ್ಲ ಎಂಬುದಾಗಿ ಮನವರಿಕೆಯಾಗಿ ಬೆಂಕಿ ಆರಿಸಲು ನೆರವಾದರು ಎಂದು ವರದಿ ತಿಳಿಸಿದೆ.

No comments:

Advertisement