Friday, December 6, 2019

ಸರ್ಕಾರದ ವಿರುದ್ಧ ಬಂಧಮುಕ್ತ ಚಿದಂಬರಂ ವಾಗ್ದಾಳಿ

ಸರ್ಕಾರದ ವಿರುದ್ಧ ಬಂಧಮುಕ್ತ ಚಿದಂಬರಂ ವಾಗ್ದಾಳಿ
ಆರ್ಥಿಕತೆ: ಪ್ರಧಾನಿಗೆ ಅರಿವೇ ಇಲ್ಲ, ಸಚಿವರಿಂದ ಬುರುಡೆ...
ನವದೆಹಲಿ: ಐಎನ್ಎಕ್ಸ್  ಮೀಡಿಯಾ ಪ್ರಕರಣದಲ್ಲಿ ೧೦೦ಕ್ಕೂ ಹೆಚ್ಚು ದಿನಗಳ ಸೆರೆವಾಸದ ಬಳಿಕ  ತಿಹಾರ್ ಸೆರೆಮನೆಯಿಂದ ಬುಧವಾರ ಹೊರಬಂದಿರುವ ಕೇಂದ್ರದ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರು ಗುರುವಾರ ದೇಶದ ಆರ್ಥಿಕತೆಯ ವಿಚಾರವನ್ನು ತೆಗೆದುಕೊಂಡು ಕೇಂದ್ರ ಸರ್ಕಾರದತ್ತ ತನ್ನ ವಾಗ್ದಾಳಿಯ ಫಿರಂಗಿಯನ್ನು ತಿರುಗಿಸಿದರು.

ಆರ್ಥಿಕ ಪರಿಸ್ಥಿತಿ ಏನಾಗಿದೆ ಎಂಬ ಸುಳಿವೇ ಸರ್ಕಾರಕ್ಕೆ ಇಲ್ಲ, ಹೀಗಾಗಿ ಅದು ತಪ್ಪುಗಳ ಮೇಲೆ ತಪ್ಪುಗಳನ್ನು ಎಸಗುತ್ತಿದೆಎಂದು ಚಿದಂಬರಂ ಸೆರೆವಾಸದಿಂದ ಹೊರಬಂದ ಬಳಿಕ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ನಡೆಸಿದ ತಮ್ಮ ಚೊಚ್ಚಲ ಮಾಧ್ಯಮ ಗೋಷ್ಠಿಯಲ್ಲಿ ಚುಚ್ಚಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಆರ್ಥಿಕತೆ ಬಗ್ಗೆ ಅಸಾಮಾನ್ಯ ಮೌನ ತಾಳಿದ್ದಾರೆ. ಅವರು ಬುರುಡೆ ಬಿಡುವ ಕೆಲಸವನ್ನು ಮಂತ್ರಿಗಳಿಗೆ ವಹಿಸಿದ್ದಾರೆ. ಒಟ್ಟಾರೆ ಪರಿಣಾಮ ಸರ್ಕಾರವು ಆರ್ಥಿಕತೆಯ ಅಸಮರ್ಥ ನಿರ್ವಾಹಕವಾಗಿದೆ ಎಂಬುದು ಆರ್ಥಿಕ ತಜ್ಞರೊಬ್ಬರ ಮಾತುಎಂದು ಪ್ರಧಾನಿ ವಿರುದ್ಧವೂ ಚಿದಂಬರಂ ಹರಿಹಾಯ್ದರು.

ಸುಪ್ರೀಂಕೋರ್ಟಿನಿಂದ ಜಾಮೀನು ಪಡೆದು ಬಿಡುಗಡೆಗೊಂಡಿರುವ ಕಾಂಗ್ರೆಸ್ ನಾಯಕತಾನು ಏನನ್ನು ಬಿಟ್ಟು ಹೋಗುತ್ತದೋ ಅದು ಬಿಜೆಪಿಯ ಕೊಡುಗೆಯಾಗುತ್ತದೆ. ಅವರು ಬಿಟ್ಟು ಹೋಗುತ್ತಿರುವುದು ಆರ್ಥಿಕತೆಯ ಅವಶೇಷಗಳನ್ನುಎಂದು ಚಾಟಿ ಬೀಸಿದರು.

ಎನ್ಡಿಎ ಸರ್ಕಾರವು ೨೦೧೬ರಿಂದೀಚೆಗೆ ಲಕ್ಷಾಂತರ ಜನರನ್ನು ದಾರಿದ್ರ್ಯ ರೇಖೆಯಿಂದ ಕೆಳಕ್ಕೆ ತಳ್ಳಿದೆ. ರಫ್ತು ಪ್ರಮಾಣ ಕಡಿಮೆಯಾಗಲು ಜಾಗತಿಕ ಆರ್ಥಿಕ ಹಿಂಜರಿತ ಕಾರಣ ಎಂಬುದು ನಿಜವಾದರೂ, ಉಳಿದ ಸಮಸ್ಯೆಗಳು ದೇಶೀಯ. ಬಿಜೆಪಿಯ ಸುಧಾರಣೆಯ ಕಲ್ಪನೆಗಳಲ್ಲಿ ಜಿಡಿಪಿ ಅಪ್ರಸ್ತುತ ಎಂಬ ಕಲ್ಪನೆಯೂ ಸೇರಿದೆ...ಇದು ಬಿಜೆಪಿಯ ಯೋಜನೆಯಾಗಿದ್ದರೆ ನಮ್ಮನ್ನು ದೇವರೇ ಕಾಪಾಡಬೇಕಾಗುತ್ತದೆಎಂದು ಅವರು ನುಡಿದರು.

ತಾನು ಈರುಳ್ಳಿ ತಿನ್ನುವುದಿಲ್ಲ ಎಂಬುದಾಗಿ ಬುಧವಾರ ಸಂಸತ್ತಿನಲ್ಲಿ ಹೇಳಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ವಿರುದ್ಧವೂ ಚಿದಂಬರಂ ಟೀಕಾಸ್ತ್ರಗಳನ್ನು ಎಸೆದರು. ’ಸರ್ಕಾರವು ಉತ್ತಮ ಯೋಜನೆ ರೂಪಿಸಬೇಕಾಗಿತ್ತು. ಕೊಳೆತುಹೋಗುತ್ತಿರುವ ಅಡುಗೆ ಮನೆಯ ಅಗತ್ಯವಸ್ತುವಾದ ಈರುಳ್ಳಿಯನ್ನು ಈಗ ರಫ್ತು ಮಾಡುವುದರಿಂದ ಪ್ರಯೋಜನವಿಲ್ಲಎಂದು ಕಾಂಗ್ರೆಸ್ ನಾಯಕ ಹೇಳಿದರು.

ಈಗ ವಿತ್ತ ಸಚಿವರ ಪ್ರತಿಕ್ರಿಯೆ ನೋಡಿ... ’ನಾನು ಈರುಳ್ಳಿ ತಿನ್ನುವುದಿಲ್ಲಎಂದು ಅವರು ಹೇಳುತ್ತಿದ್ದಾರೆ. ಅವರು ನಿಮ್ಮನ್ನು ಈರುಳ್ಳಿ ತಿನ್ನುವ ಜನ ಎಂದು ಕರೆಯುತ್ತಿದ್ದಾರೆ. ಅವರು ಏನುಬೆಣ್ಣೆ ಹಣ್ಣು’ (ಅವಕಾಡೋ) ತಿನ್ನುತ್ತಾರೆಯೇ?’ ಎಂದು ಚಿದಂಬರಂ ಪ್ರಶ್ನಿಸಿದರು.

ಪ್ರಸ್ತುತ ವರ್ಷದ ಏಳು ತಿಂಗಳುಗಳ ಬಳಿಕವೂ ಆರ್ಥಿಕತೆ ಎದುರಿಸುತ್ತಿರುವ ಸಮಸ್ಯೆಗಳು ಆವರ್ತಕ (ಸೈಕ್ಲಿಕಲ್) ಎಂಬುದಾಗಿ ಬಿಜೆಪಿ ಸರ್ಕಾರ ನಂಬಿದೆಎಂದು ೧೦೬ ದಿನಗಳನ್ನು ಸೆರೆಮನೆಯಲ್ಲಿ ಕಳೆದು ಹೊರಬಂದಿರುವ ಕೇಂದ್ರದ ಮಾಜಿ ವಿತ್ತ ಸಚಿವ ಟೀಕಿಸಿದರು.

ಎನ್ಡಿಎ ಸರ್ಕಾರಕ್ಕೆ ಇನ್ನೂ ಆರ್ಥಿಕ ಕುಸಿತ ಸಮಸ್ಯೆಗಳ ನೈಜ ಕಾರಣ ಏನು ಎಂಬುದನ್ನೇ ಪತ್ತೆ ಹಚ್ಚಲು ಸಾಧ್ಯವಾಗಿಲ್ಲಎಂದು ಚಿದಂಬರಂ ಹೇಳಿದರು.

ನೀವು ತಪ್ಪಾಗಿ ರೋಗನಿದಾನ (ಡಯಗ್ನೋಸ್) ಮಾಡಿದರೆ, ಔಷಧವು ವ್ಯರ್ಥವಾಗುವುದು. ಮಾರಕವೂ ಆಗಬಹುದು. ಪ್ರಸ್ತುತ ಹಣಕಾಸು ವರ್ಷದ ತಿಂಗಳುಗಳ ಬಳಿಕವೂ ಬಿಜೆಪಿ ಸರ್ಕಾರವು ಆರ್ಥಿಕತೆಯು ಎದುರಿಸುತ್ತಿರುವ ಸಮಸ್ಯೆಗಳು ಆವರ್ತಕ ಎಂಬುದಾಗಿ ನಂಬಿದೆ. ಆರ್ಥಿಕ ಹಿನ್ನಡೆಯ ಸುಳಿವೇ ಇಲ್ಲದ ಕಾರಣ ಸರ್ಕಾರ ತಪ್ಪಾಗಿ ಲೆಕ್ಕ ಹಾಕುತ್ತಿದೆಎಂದು ಅವರು ನುಡಿದರು.

೯೦೦ ಪದಗಳ ತಮ್ಮ ಹೇಳಿಕೆಯಲ್ಲಿ ಸರ್ಕಾರವನ್ನು ಯದ್ವಾತದ್ವ  ತರಾಟೆಗೆ ತೆಗೆದುಕೊಂಡ ಚಿದಂಬರಂ, ’ಜನರು ಕಡಿಮೆ ಬೇಡಿಕೆ ಇಡುತ್ತಿದ್ದಾರೆ ಏಕೆಂದರೆ ಅವರ ಬಳಿ ಕಡಿಮೆ ಹಣವಿದೆ ಮತ್ತು ಅಸ್ಥಿರತೆ ಹಾಗೂ ಭಯದ ಕಾರಣ ಅವರ ಬಳಕೆಯ ಹಸಿವು ಕಡಿಮೆಯಾಗಿದೆ. ಬೇಡಿಕೆ ಹೆಚ್ಚದ ವಿನಃ, ಉತ್ಪಾದನೆ ಹೆಚ್ಚದು, ಉತ್ಪಾದನೆ ಇಲ್ಲವೇ ಹೊರಸುರಿ ಅಥವಾ ಹೂಡಿಕೆ ಹೆಚ್ಚಳ ಸಾಧ್ಯವಿಲ್ಲಎಂದು ಮಾಜಿ ವಿತ್ತ ಸಚಿವ ಹೇಳಿದರು.

ಆರ್ಥಿಕತೆಯು ಈಗ ಅತ್ಯಂತ ಒತ್ತಡ ಹಾಗೂ ಸ್ಫೋಟಕ ವಿಷಯವಾಗಿದೆ ಎಂದು ೭೪ರ ಹರೆಯದ ನಾಯಕ ನುಡಿದರು.

ರಾಜಕೀಯ ನಾಯಕರು ಇನ್ನೂ ಬಂಧನದಲ್ಲಿ ಇರುವ ಕಾಶ್ಮೀರದ ಪರಿಸ್ಥಿತಿಯ ಬಗ್ಗೆ ಮಾತನಾಡುತ್ತಾ ತಮ್ಮ ಹೇಳಿಕೆಯನ್ನು ಆರಂಭಿಸಿದ ಚಿದಂಬರಂ, ’ಸ್ವಾತಂತ್ರ್ಯವು ಅಗೋಚರವಾದದ್ದು; ನಮ್ಮ ಸ್ವಾತಂತ್ರ್ಯವನ್ನು ನಾವು ರಕ್ಷಿಸಬೇಕಾಗಿದ್ದರೆ, ನಾವು ಅವರ ಸ್ವಾತಂತ್ರ್ಯಕ್ಕಾಗಿ ಹೋರಾಡಲೇಬೇಕುಎಂದು ಹೇಳಿದರು.

ತಮ್ಮ ವಿರುದ್ಧದ ಪ್ರಕರಣ ಬಗ್ಗೆ ಮಾತನಾಡಬಾರದು ಎಂಬ ಷರತ್ತು ಸೇರಿದಂತೆ ವಿವಿಧ ಷರತ್ತುಗಳ ಅಡಿಯಲ್ಲಿ ಬುಧವಾರ ಬಿಡುಗಡೆಯಾಗಿರುವ ಚಿದಂಬರಂ ಆರ್ಥಿಕತೆಯ ವಿಚಾರವಾಗಿ ತಮ್ಮ ತೀವ್ರ ದಾಳಿಯನ್ನು ನಡೆಸಿದರು. ’ಸಚಿವನಾಗಿ  ನನ್ನ ದಾಖಲೆಯು ಅತ್ಯಂತ ಸ್ವಚ್ಛವಾಗಿದೆ ಎಂಬುದು ನನ್ನ ಪ್ರಜ್ಞೆಗೆ ಗೊತ್ತಿದೆಎಂದು ಅವರು ನುಡಿದರು.

ತ್ರೈಮಾಸಿಕ ಸಮಗ್ರ ಆಂತರಿಕ ಉತ್ಪನ್ನ (ಜಿಡಿಪಿ) ಪ್ರಗತಿ ದರವು ಕಳೆದ ಆರು ತ್ರೈಮಾಸಿಕಗಳಲ್ಲಿ ಶೇಕಡಾ ೮ರಿಂದ ಶೇಕಡಾ .೫ಕ್ಕೆ ಕುಸಿದಿರುವುದರತ್ತ ಬೊಟ್ಟು ಮಾಡಿದ ಮಾಜಿ ವಿತ್ತ ಸಚಿವ ಕುಸಿತವು ದೇಶದ ಆರ್ಥಿಕ ಸ್ಥಿತಿಯನ್ನು ಬಿಂಬಿಸುತ್ತದೆಎಂದು ಹೇಳಿದರು.

ಆರ್ಥಿಕತೆಯನ್ನು ಕುಸಿತದಿಂದ ಹಿಂದಕ್ಕೆ  ತರಬಹುದು. ಆದರೆ, ಸರ್ಕಾರವು ಅದನ್ನು ಮಾಡಲು ಅಸಮರ್ಥಎಂದು ಮಾಜಿ ವಿತ್ತ ಸಚಿವ ಹೇಳಿದರು.

ಕಾಂಗ್ರೆಸ್ ಮತ್ತು ಇತರ ಕೆಲವು ಪಕ್ಷಗಳು ಕುಸಿಯುತ್ತಿರುವ ಆರ್ಥಿಕತೆಯನ್ನು ಹಿಂದಕ್ಕೆ ಎಳೆದು ಪ್ರಗತಿಯತ್ತ ತಳ್ಳಬಲ್ಲವು. ಆದರೆ ನಾವು ಒಳ್ಳೆಯ ದಿನಗಳಿಗಾಗಿ ಕಾಯಬೇಕಾಗುತ್ತದೆಎಂದು ಅವರು ನುಡಿದರು.

No comments:

Advertisement