My Blog List

Sunday, December 8, 2019

ಮಧ್ಯಪ್ರದೇಶದ ಸರದಿ, ಸಿಧಿ ಶಾಲಾ ಶಿಕ್ಷಕಿ ಮೇಲೆ ಸಾಮೂಹಿಕ ಅತ್ಯಾಚಾರ

ಮಧ್ಯಪ್ರದೇಶದ ಸರದಿ, ಸಿಧಿ ಶಾಲಾ ಶಿಕ್ಷಕಿ ಮೇಲೆ
ಸಾಮೂಹಿಕ ಅತ್ಯಾಚಾರ
ಲೈಂಗಿಕ ಕಿರುಕುಳ: ಬೇಸತ್ತ  ದಾಮೋಹ್ ಯುವತಿಯ ಆತ್ಮಹತ್ಯೆ
ಸಿಧಿ/ ದಾಮೋಹ್/ ಮೊವ್: ತೆಲಂಗಾಣದ ಹೈದರಾಬಾದ್ ಮತ್ತು ಉತ್ತರ ಪ್ರದೇಶದ ಉನ್ನಾವೋದಲ್ಲಿ ಯುವತಿಯರ ಮೇಲಿನ ಅತ್ಯಾಚಾರ ಹಾಗೂ ಭಯಾನಕ ಹತ್ಯೆ ಘಟನೆಗಳ ವಿರುದ್ಧ ರಾಷ್ಟ್ರವ್ಯಾಪಿ ಆಕ್ರೋಶ ವ್ಯಕ್ತವಾಗಿರುವಂತೆಯೇ ಮಧ್ಯಪ್ರದೇಶ ಸೇರಿದಂತೆ ಇತರೆಡೆಗಳಿಂದಲೂ ಅಂತಹುದೇ ಘಟನೆಗಳು ಘಟಿಸಿರುವ ವರದಿಗಳು ಬಂದವು.

ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಯುವ ಶಾಲಾ ಶಿಕ್ಷಕಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದರೆ, ದಾಮೋಹ್ ಜಿಲ್ಲೆಯಲ್ಲಿ ಹದಿ ಹರೆಯದ ಬಾಲಕಿಯೊಬ್ಬಳು ಸ್ಥಳೀಯ ಯುವಕರ ನಿರಂತರ ಲೈಂಗಿಕ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಎರಡೂ ಘಟನೆಗಳು ಗುರುವಾರ ಘಟಿಸಿವೆ ಎಂದು ವರದಿಗಳು ತಿಳಿಸಿದವು.

ಇದಕ್ಕೂ ಹೆಚ್ಚಾಗಿ ಸಿಧಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್ ಎಸ್ ಬೆಳ್ವಂಶಿ ಅವರು ಶುಕ್ರವಾರ ರಾತ್ರಿ ಟಿವಿಯೊಂದಕ್ಕೆಬೈಟ್ನೀಡುತ್ತಾ ಸಂತ್ರಸ್ಥರ ಹೆಸರು ಮತ್ತು ವಿಳಾಸವನ್ನು ಬಹಿರಂಗ ಪಡಿಸಿದ ದುರದೃಷ್ಟಕರ ಘಟನೆಯೂ ಘಟಿಸಿತು.

ಇವೆಲ್ಲದರ ಮಧ್ಯೆ ಇಂದೋರಿಗೆ ಸಮೀಪದ ಮೊವ್ನಲ್ಲಿ ನಾಲ್ಕು ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಕೊಂದು ಹಾಕಿದ ಆರೋಪಿಯೊಬ್ಬನನ್ನು ಪೊಲೀಸರು ನ್ಯಾಯಾಲಯಕ್ಕೆ ಕರೆ ತರುತ್ತಿದ್ದಾಗ ವಕೀಲರು ಹಿಗ್ಗಾಮುಗ್ಗ ಥಳಿಸಿದ ಘಟನೆಯೂ ಘಟಿಸಿತು.

ಸಿಧಿ ಘಟನೆ: ಸಿಧಿಯಲ್ಲಿ ಶಾಲಾ ಶಿಕ್ಷಕಿಯೊಬ್ಬರು 2019 ಡಿಸೆಂಬರ್ 05ಗುರುವಾರ ಸಂಜೆ ಗಂಟೆ ಸುಮಾರಿಗೆ ಕೆಲಸ ಮುಗಿಸಿ ಶಾಲೆಯಿಂದ ಮನೆಗೆ ವಾಪಸಾಗುತ್ತಿದ್ದಾಗ, ನಾಲ್ಕು ಮಂದಿ ಸ್ಥಳೀಯರು ಆಕೆಯನ್ನು ದಾರಿಯಲ್ಲಿ ಅಡ್ಡಗಟ್ಟಿ ಸಮೀಪದ ಫಾರ್ಮ್ ಹೌಸ್ ಒಂದಕ್ಕೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದರು.

ಮಹಿಳೆ ಪ್ರಜ್ಞೆ ತಪ್ಪಿ ಬಿದ್ದ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾದರು. ಬಳಿಕ ಎಚ್ಚರಗೊಂಡ ಮಹಿಳೆ ಮನೆಗೆ ತೆರಳಿ ಮನೆಯಲ್ಲಿ ವಿಷಯ ತಿಳಿಸಿದರು. ಕುಟುಂಬ ಸದಸ್ಯರು ರಾಮಪುರ ನಾಯ್ಕಿನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.

ಕ್ಷಿಪ್ರ ಕ್ರಮ ಕೈಗೊಂಡ ಹಿರಿಯ ಪೊಲೀಸ್ ಅಧಿಕಾರಿಗಳು ಬಚ್ಚು ಲೋನಿಯಾ, ಬೀರು ಲೋನಿಯಾ, ನರೇಂದ್ರ ಲೋನಿಯಾ ಮತ್ತು ಶಿವ ಶಂಕರ ಲೋನಿಯಾ ಎಂಬುದಾಗಿ ಗುರುತಿಸಲಾದ ನಾಲ್ವರು ವ್ಯಕ್ತಿಗಳನ್ನು ಬಂಧಿಸಿದರು. ನಾಲ್ಕೂ ಮಂದಿಯ ವಿರುದ್ಧ ಹಿಂದೆಯೂ ಅಪರಾಧ ಪ್ರಕರಣಗಳು ಸ್ಥಳೀಯ ಠಾಣೆಗಳಲ್ಲಿ ದಾಖಲಾಗಿದ್ದವು.

ದಾಮೋಹ್ ನಲ್ಲಿ: ದಾಮೋಹ್ನಲ್ಲಿ ೧೭ರ ಹರೆಯದ ಬಾಲಕಿ 2019 ಡಿಸೆಂಬರ್ 05ರ ಗುರುವಾರ ಕೆರೆಯೊಂದಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಗೆ ಕೆಲವು ಸ್ಥಳೀಯ ವ್ಯಕ್ತಿಗಳು ಕೆಲ ಸಮಯದಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಹೇಳಲಾಯಿತು.

ದಾಮೋಹ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಸಿಂಗ್ ಅವರು ಆತ್ಮಹತ್ಯೆ  ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದ್ದು ಕುಟುಂಬ ಮತ್ತು ನೆರೆಹೊರೆಯವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ ಎಂದು ವರದಿಗಾರರಿಗೆ ತಿಳಿಸಿದರು. ಆರೋಪಿಗಳನ್ನು ಇನ್ನೂ ಬಂಧಿಸಲಾಗಿಲ್ಲ ಎಂದು ವರದಿ ಹೇಳಿತು.

ಕೆಲವು ಸ್ಥಳೀಯ ಯುವಕರು ಬಾಲಕಿಗೆ ನಿರಂತರ ಕಿರುಕುಳ ನೀಡಿದ್ದು ಆಕೆಯನ್ನು ಮನೆಯಿಂದ ಅಪಹರಿಸುವುದಾಗಿಯೂ ಬೆದರಿಕೆ ಹಾಕಿದ್ದರು ಎಂದು ಕುಟುಂಬದ ಸದಸ್ಯರೊಬ್ಬರು ತಿಳಿಸಿದರು.
ಮಧ್ಯಪ್ರದೇಶವು ಮಹಿಳೆಯರ ಪಾಲಿಗೆ ಅಸುರಕ್ಷಿತ ಪ್ರದೇಶವಾಗಿ ಬದಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಮುಖ್ಯಮಂತ್ರಿ ಕಮಲ್ ನಾಥ್ ಅವರುರಾಜ್ಯವು ಇನ್ನೊಂದು ಉತ್ತರ ಪ್ರದೇಶವಾಗಿಲ್ಲ  ಎಂಬ ಖಚಿತತೆಯನ್ನು ನಾನು ನೀಡುತ್ತೇನೆ ಮತ್ತು ರಾಜ್ಯ ಮಹಿಳೆಯರ ಹಿತಾಸಕ್ತಿ ರಕ್ಷಣೆಗೆ ತಮ್ಮ ಸರ್ಕಾರ ಕೈಗೊಳ್ಳುವ ಕ್ರಮಗಳನ್ನು ಕಾದು ನೋಡುವಂತೆ ಪ್ರತಿಯೊಬ್ಬರನ್ನೂ ಒತ್ತಾಯಿಸುತ್ತೇನೆಎಂದು ಉತ್ತರಿಸಿದರು.

No comments:

Advertisement