My Blog List

Saturday, December 14, 2019

ಪೌರತ್ವ ಕಾಯ್ದೆ ಅನುಷ್ಟಾನಕ್ಕೆ ೫ ರಾಜ್ಯಗಳ ನಕಾರ

ಪೌರತ್ವ ಕಾಯ್ದೆ ಅನುಷ್ಟಾನಕ್ಕೆ ರಾಜ್ಯಗಳ  ನಕಾರ
ಜಾರಿ ನಿರಾಕರಣೆಯ ಹಕ್ಕು ಇಲ್ಲ: ಕೇಂದ್ರ ಸ್ಪಷ್ಟನೆ
ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯು ರಾಷ್ಟ್ರದಜಾತ್ಯತೀತ ಹೊದಿಕೆಕಳಚುವ ಬಿಜೆಪಿ ಯತ್ನ ಎಂಬ ನೆಲೆಯಲ್ಲಿ ವಿವಾದಾತ್ಮಕ ಕಾಯ್ದೆಯ ಜಾರಿಗೆ ನಿರಾಕರಿಸುತ್ತಿರುವ ರಾಜ್ಯ ಸರ್ಕಾರಗಳ ಸಂಖ್ಯೆ ಹೆಚ್ಚುತ್ತಿದ್ದಂತೆಯೇ, ಪೌರತ್ವ ವಿಷಯವು ಕೇಂದ್ರ ಪಟ್ಟಿಯಲ್ಲಿ ಇರುವ ಕಾರಣ ಕಾಯ್ದೆ ಜಾರಿ ವಿಷಯದಲ್ಲಿ ಆಯ್ಕೆಯ ಪ್ರಶ್ನೆ ರಾಜ್ಯಗಳಿಗೆ ಇಲ್ಲ ಎಂದು ಕೇಂದ್ರ ಸರ್ಕಾರ  2019 ಡಿಸೆಂಬರ್ 13ರ ಶುಕ್ರವಾರ ಸ್ಪಷ್ಟ ಪಡಿಸಿತು.
ಪೌರತ್ವ ಕಾಯ್ದೆ ಜಾರಿಗೊಳಿಸುವುದಿಲ್ಲ ಎಂಬ ಇಂಗಿತವನ್ನು ಈಗಾಗಲೇ ವ್ಯಕ್ತಪಡಿಸಿರುವ ಕೇರಳ, ಪಂಜಾಬ್ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳ ಸಾಲಿಗೆ ಮಧ್ಯಪ್ರದೇಶ ಮತ್ತು ಛತ್ತೀಸ್ ಗಢ ರಾಜ್ಯಗಳ ಮುಖ್ಯಮಂತ್ರಿಗಳೂ ಈದಿನ ಸೇರ್ಪಡೆಯಾಗುತ್ತಿದ್ದಂತೆಯೇ ಕೇಂದ್ರ  ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಕಾಯ್ದೆ ಜಾರಿ ಅಧಿಕಾರದ ವಿಚಾರವನ್ನು ಸ್ಪಷ್ಟ ಪಡಿಸಿದರು.

ಕೇಂದ್ರ ಪಟ್ಟಿಯಲ್ಲಿ ಇರುವ ಕೇಂದ್ರೀಯ ಕಾನೂನುಗಳ ಅನುಷ್ಠಾನಕ್ಕೆ ನಿರಾಕರಿಸುವ ಅಧಿಕಾರಗಳು ರಾಜ್ಯಗಳಿಗೆ ಇಲ್ಲಎಂದು ಅವರು ಪಶ್ಚಿಮ ಬಂಗಾಳ, ಕೇರಳ ಮತ್ತು ಪಂಜಾಬ್ ಮುಖ್ಯಮಂತ್ರಿಗಳು ತಾವು ತಮ್ಮ ರಾಜ್ಯಗಳಲ್ಲಿ ಕಾನೂನು ಜಾರಿಗೊಳಿಸುವುದಿಲ್ಲ  ಎಂಬುದಾಗಿ ಘೋಷಿಸಿದ ಬಳಿಕ ಸುದ್ದಿ ಸಂಸ್ಥೆಯೊಂದರ ಜೊತೆ ಮಾತನಾಡುತ್ತಾ ಹೇಳಿದರು.

ಪೌರತ್ವ ಕಾಯ್ದೆಗೆ ತರಲಾಗಿರುವ ತಿದ್ದುಪಡಿ ವಿರುದ್ಧದ ಪ್ರಚಾರ ಅಭಿಯಾನಕ್ಕೆ ಶುಕ್ರವಾರ ಸೇರ್ಪಡೆಯಾದ ಮಧ್ಯಪ್ರದೇಶ ಮತ್ತು ಛತ್ತೀಸ್ ಗಢ ಮುಖ್ಯಮಂತ್ರಿಗಳು ತಾವು ನೂತನ ಕಾನೂನನ್ನು ಅನುಷ್ಠಾನಕ್ಕೆ ತರುವುದಿಲ್ಲ ಎಂದು ಘೋಷಿಸಿದರು. ಆದರೆ ವಿರೋಧ ಪಕ್ಷಗಳ ಆಳ್ವಿಕೆ ಇರುವ ಐದೂ ರಾಜ್ಯಗಳ ವಿರೋಧವನ್ನು ತಳ್ಳಿಹಾಕಿದ ಗೃಹ ಸಚಿವಾಲಯವುಅದು ನಿಮ್ಮ ಕೈಯಲ್ಲಿ ಇಲ್ಲಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿತು.

ನೂತನ ತಿದ್ದುಪಡಿಗಳನ್ನು ಜಾರಿಗೆ ತರಲು ಕೇಂದ್ರವು ಒಮ್ಮೆ ಅಧಿಸೂಚನೆ ಹೊರಡಿಸಿದ ಬಳಿಕ ರಾಜ್ಯ ಸರ್ಕಾರಗಳಿಗೆ ನೆಲದ ಕಾನೂನಿಗೆ ಬದ್ಧವಾಗದ ಹೊರತು ಬೇರೆ ದಾರಿ ಇಲ್ಲ ಎಂದು ಹಿರಿಯ ಅಧಿಕಾರಿ ನುಡಿದರು.

ಇದು ಸಾಂವಿಧಾನಿಕ ವ್ಯವಸ್ಥೆ. ಸಂವಿಧಾನಕ್ಕೆ ಅನುಗುಣವಾದ ಮಾರ್ಗವನ್ನು ಬಿಟ್ಟು ಬೇರೆ ದಾರಿಗೆ ಓಡಲು ಯಾವುದೇ ಸರ್ಕಾರಕ್ಕೆ ಸಾಧ್ಯವಿಲ್ಲಎಂದು ಅಧಿಕಾರಿ ಹೇಳಿದರು.

ರಾಜ್ಯ ಮುಖ್ಯಮಂತ್ರಿಗಳು ಪತ್ರಿಕೆಗಳಲ್ಲಿ ದಪ್ಪಕ್ಷರದ ಶೀರ್ಷಿಕೆಗಳಲ್ಲಿ ರಾರಾಜಿಲು ಯತ್ನಗಳನ್ನು ನಡೆಸಿದ್ದಾರೆ ಹೊರತು ಬೇರೇನಲ್ಲಎಂದು ಅಧಿಕಾರಿ ನುಡಿದರು.

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮೊತ್ತ ಮೊದಲಿಗರಾಗಿ ತಮ್ಮ ಸರ್ಕಾರವು ಸಂವಿಧಾನ ಬಾಹಿರ ಎಂಬುದಾಗಿ ಪರಿಗಣಿಸಲಾಗಿರುವ ನೂತನ ಪೌರತ್ವ ಕಾಯ್ದೆಯನ್ನು ಜಾರಿಗೊಳಿಸುವುದಿಲ್ಲ ಎಂಬುದಾಗಿ ಘೋಷಿಸಿದ್ದರು.

ವಿಚಾರಕ್ಕೆ ಸಂಬಂಧಿಸಿದಂತೆ ಕೇರಳದಲ್ಲಿ ಯಾರೂ ಭೀತಿ ಪಡಬೇಕಾಗಿಲ್ಲ. ನಾವು ಸಮತೂಕವಿಲ್ಲದ, ಜನರನ್ನು ಒಡೆಯುವ ಕಾನೂನನ್ನು  ಅನುಷ್ಠಾನಗೊಳಿಸುವುದಿಲ್ಲಎಂದು ವಿಜಯನ್ ಅವರು ಗುರುವಾರ ರಾಜ್ಯ ರಾಜಧಾನಿಯಲ್ಲಿ ಹೇಳಿದ್ದರು. ಪಂಜಾಬ್ ಮತು ಪಶ್ಚಿಮ ಬಂಗಾಳ ಇದೇ ಹಾದಿಯನ್ನು ಹಿಡಿದವು. ಶುಕ್ರವಾರ ಕ್ರಮವಾಗಿ ಮಧ್ಯಪ್ರದೇಶ ಮತ್ತು ಛತೀಸ್ ಗಢದ ಮುಖ್ಯಮಂತ್ರಿಗಳಾದ ಕಮಲ್ ನಾಥ್ ಮತ್ತು ಭೂಪೇಶ್ ಬಘೆಲ್ ಕೂಡಾ ಇಂತಹುದೇ ಹೇಳಿಕೆ ನೀಡಿದರು.

ಪೌರತ್ವ ತಿದ್ದುಪಡಿ ಕಾಯ್ದೆಯು ೨೦೧೪ರ ಡಿಸೆಂಬರ್ ೩೧ ಅಥವಾ ಅದಕ್ಕೆ ಮುನ್ನ ಭಾರತವನ್ನು ಪ್ರವೇಶಿಸಿದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನದ ಹಿಂದು, ಸಿಖ್, ಪಾರ್ಸಿ, ಕ್ರೈಸ್ತ, ಜೈನ ಮತ್ತು ಬೌದ್ಧರಿಗೆ ಸಂಬಂಧಿಸಿದಂತೆ ಅಕ್ರಮ ವಲಸೆಯ ವಿವರಣೆಯನ್ನು ತಿದ್ದುಪಡಿ ಮಾಡಿದೆ.

ಬದಲಾವಣೆಗಳ ಪ್ರಕಾರ, ಸಮುದಾಯಗಳ ಜನರು ೧೨ ವರ್ಷಗಳ ಬದಲಿಗೆ ವರ್ಷಗಳ ಭಾರತೀಯ ಪೌರತ್ವ ಪಡೆಯಲು ಅರ್ಹರಾಗುತ್ತಾರೆ ಮತ್ತು ಇದಕ್ಕೆ ೨೦೧೪ರ ಡಿಸೆಂಬರ್ ೩೧ರ ಕಟ್ ಆಫ್ ದಿನಾಂಕವಾಗಿದೆ. ಅಲ್ಲದೆ, ಒಮ್ಮೆ ಅರ್ಜಿ ಸಲ್ಲಿಸಿದರೆ ಅವರನ್ನು ದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಂತೆ ಸಂಬಂಧಿಸಿದ ಎಲ್ಲ ನಡಾವಳಿಗಳಿಂದ ಮುಕ್ತಗೊಳಿಸಲಾಗುವುದು.

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಸಂಬಂಧಿಸಿದಂತೆ ರಾಜ್ಯಸರ್ಕಾರಗಳಿಗೆ ಸೀಮಿತ ಪಾತ್ರ ಇರುತ್ತದೆ ಎಂದೂ ಗೃಹ ಸಚಿವಾಲಯವು ತಿಳಿಸಿದೆ.

ಕಾನೂನನ್ನು ಯಾವ ರೀತಿ ವಿನ್ಯಾಸಗೊಳಿಸಲಾಗಿದೆ ಎಂದರೆ ಅದರ ಯಶಸ್ಸು ಅದರಿಂದ ನೆರವು ಪಡೆಯಬಯಸುವ ವ್ಯಕ್ತಿಗಳನ್ನು ಅವಲಂಬಿಸುವಂತೆ ಮಾಡಲಾಗಿದೆ.

ಸಂವಿಧಾನದ ೭ನೇ ಶೆಡ್ಯೂಲಿನಲ್ಲಿ ಮೂರು ಪಟ್ಟಿಗಳಿವೆ. ರಾಜ್ಯಗಳಿಗೆ ರಾಜ್ಯಪಟ್ಟಿಯಲ್ಲಿನ ವಿಷಯಗಳ ಮೇಲೆ ಅಧಿಕಾರವಿದ್ದರೆ, ಸಹವರ್ತಿ ಪಟ್ಟಿಯಲ್ಲಿನ ವಿಷಯಗಳಲ್ಲಿ ಕೇಂದ್ರ ಮತ್ತು ರಾಜ್ಯಗಳೆರಡಕ್ಕೂ ಅಧಿಕಾರವಿದೆ. ಸಂಸತ್ತಿನಲ್ಲಿ ಅಂಗೀಕಾರಗೊಳ್ಳುವ ಯಾವುದೇ ಕಾಯ್ದೆಯು ಕೇಂದ್ರ ಪಟ್ಟಿಯ ವ್ಯಾಪ್ತಿಯಲ್ಲಿದ್ದು ರಾಷ್ಟ್ರಾದ್ಯಂತ ಜಾರಿಯಾಗುತ್ತದೆ ಎಂದು ಅಧಿಕಾರಿ ನುಡಿದರು.
ರಕ್ಷಣೆ, ವಿದೇಶಾಂಗ ವ್ಯವಹಾರ, ರೈಲ್ವೇ ಮತ್ತು ಪೌರತ್ವ ಸೇರಿದಂತೆ ೯೭ ವಿಷಯಗಳು ಕೇಂದ್ರ ಪಟ್ಟಿಯ ವ್ಯಾಪ್ರಿಗೆ ಬರುತ್ತವೆ.

ಪೌರತ್ವ ಮಸೂದೆಯು ಬುಧವಾರ ಸಂಸತ್ತಿನಲ್ಲಿ ಅನುಮೋದನೆ ಪಡೆಯುವುದಕ್ಕೂ ಮುನ್ನ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅದಕ್ಕೆ ತೀವ್ರ ವಿರೋಧ ವ್ಯಕ್ತ ಪಡಿಸಿದ್ದರು.

ಕ್ರಮವಾಗಿ
ಕೇರಳ ಮತ್ತು ಪಂಜಾಬಿನ ಮುಖ್ಯಮಂತ್ರಿಗಳಾದ        ಪಿಣರಾಯಿ ವಿಜಯನ್ ಮತ್ತು ಅಮರೀಂದರ್ ಸಿಂಗ್ ಗುರುವಾರ ತಾವು ತಮ್ಮ ರಾಜ್ಯಗಳಲ್ಲಿ ಕಾಯ್ದೆಯನ್ನು ಜಾರಿಗೊಳಿಸುವುದಿಲ್ಲ ಎಂದುಹೇಳಿದ್ದರು.

ಇದೇ ಮೊತ್ತ ಮೊದಲ ಬಾರಿಗೆ ಭಾರತೀಯ ಪೌರತ್ವ ಪಡೆಯಲು ಧರ್ಮವನ್ನು ಆಧರಿಸಿದ ಮಸೂದೆಯು, ಸಂಸತ್ತಿನ ಉಭಯ ಸದನಗಳ ಅನುಮೋದನೆಯ ಬಳಿಕ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಸಹಿಯೊಂದಿಗೆ ಗುರುವಾರ ಮಧ್ಯರಾತ್ರಿ ಜಾರಿಗೆ ಬಂದಿದೆ.

No comments:

Advertisement