Thursday, December 5, 2019

ಅಯೋಧ್ಯಾ ಪ್ರಕರಣ: ಮುಸ್ಲಿಮರ ಪರ ವಕೀಲ ರಾಜೀವ್ ಧವನ್‌ಗೆ ಅರ್ಧಚಂದ್ರ

ಅಯೋಧ್ಯಾ ಪ್ರಕರಣ: ಮುಸ್ಲಿಮರ ಪರ ವಕೀಲ
ರಾಜೀವ್ ಧವನ್ಗೆ ಅರ್ಧಚಂದ್ರ
ನವದೆಹಲಿ: ಅಯೋಧ್ಯಾ ರಾಮಜನ್ಮಭೂಮಿ- ಬಾಬರಿ ಮಸೀದಿ ಭೂ ವಿವಾದ ಪ್ರಕರಣದಲ್ಲಿ ಮುಸ್ಲಿಮ್ ಕಕ್ಷಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ರಾಜೀವ್ ಧವನ್ ಅವರನ್ನು ಮುಸ್ಲಿಮ್ ಕಕ್ಷಿದಾರರುಅಸ್ವಾಸ್ಥ್ಯಎಂಬ ಬುದ್ಧಿಗೇಡಿ’ ನೆಲೆಯಲ್ಲಿ ವಕಾಲತ್ತಿನಿಂದ ಕಿತ್ತು ಹಾಕಿದ್ದಾರೆ.

ಹಿರಿಯ ವಕೀಲ ರಾಜೀವ್ ಧವನ್ ಅವರು ಸ್ವತಃ ಫೇಸ್ ಬುಕ್ನಲ್ಲಿ 2019 ಡಿಸೆಂಬರ್ 04ರ ಬುಧವಾರ ವಿಷಯವನ್ನು ಬಹಿರಂಗ ಪಡಿಸಿದ್ದು, ತಾವು ಈಗ ಅಯೋಧ್ಯಾ ಪ್ರಕರಣದಲ್ಲಾಗಲೀ,, ಪುನರ್ ಪರಿಶೀಲನಾ ಕೋರಿಕೆ ಪ್ರಕರಣದಲ್ಲಾಗಲೀ  ಇಲ್ಲ ಎಂದು ಸ್ಪಷ್ಟ ಪಡಿಸಿದರು.

ಜಮೀಯತ್ನ್ನು ಪ್ರತಿನಿಧಿಸುತ್ತಿರುವ ಬಾಬರಿ ಪ್ರಕರಣದ ಎಒಆರ್ (ಅಡ್ವೋಕೇಟ್ ಆನ್ ರೆಕಾರ್ಡ್) ಎಜಾಜ್ ಮಖ್ಬೂಲ್ ಅವರಿಂದ ಈಗಷ್ಟೇ ವಜಾಗೊಂಡಿದ್ದೇನೆ. ಯಾವುದೇ ಅಡ್ಡಿ ಇಲ್ಲದೆ ವಜಾಗೊಳಿಸಿದ್ದನ್ನು ಅಂಗೀಕರಿಸಿದ ಔಪಚಾರಿಕ ಪತ್ರವನ್ನು ಕಳುಹಿಸಿದ್ದೇನೆ. ಪುನರ್ ಪರಿಶೀಲನೆ ಅಥವಾ ಪ್ರಕರಣದಲ್ಲಿ ಇನ್ನು ನಾನು ಇಲ್ಲಎಂದು ರಾಜೀವ್ ಧವನ್ ಅವರು ಬರೆದರು.

ನಾನು ಅಸ್ವಸ್ಥನಾಗಿದ್ದೇನೆ ಎಂಬ ಕಾರಣಕ್ಕಾಗಿ ನನ್ನನ್ನು ಕಿತ್ತು ಹಾಕಲಾಗಿದೆ ಎಂಬುದಾಗಿ ಮದನಿ ತಿಳಿಸಿದ್ದಾಗಿ ನನಗೆ ತಿಳಿಸಲಾಗಿದೆ. ಇದು ಸಂಪೂರ್ಣ ಅಸಂಬದ್ಧ. ಅವರ ವಕೀಲ ಎಒಆರ್ ಎಜಾಜ್ ಮಖ್ಬೂಲ್ ಅವರಿಗೆ ನನ್ನನ್ನು ವಜಾಗೊಳಿಸಲು ಸೂಚಿಸುವ ಹಕ್ಕು ಅವರಿಗೆ ಇದೆ. ಸೂಚನೆ ಪ್ರಕಾರ ಅವರು ಅದನ್ನು ಮಾಡಿದ್ದಾರೆ. ಆದರೆ ಇದಕ್ಕಾಗಿ ಕೊಟ್ಟ ಕಾರಣ ದುರುದ್ದೇಶದ್ದು ಮತ್ತು ಸುಳ್ಳುಎಂದು ಧವನ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದರು.

ಸುಪ್ರಿಂಕೋರ್ಟಿನ ಅಯೋಧ್ಯಾ ತೀರ್ಪನ್ನು ಪ್ರಶ್ನಿಸಿ ಮೌಲಾನಾ ಅರ್ಶದ್ ಮದನಿ ನೇತೃತ್ವದ ಜಮೀಯತ್ ಉಲೇಮಾ--ಹಿಂದ್  2019 ಡಿಸೆಂಬರ್ 2ರ ಸೋಮವಾರ ಪುನರ್ ಪರಿಶೀಲನಾ ಅರ್ಜಿಯನ್ನು ಸಲ್ಲಿಸಿತ್ತು.

ನಾನು ಮುಸ್ಲಿಮ್ ಕಕ್ಷಿದಾರರನ್ನು ಒಡೆಯಲು ಬಯಸುವುದಿಲ್ಲ ಎಂದು  ಧವನ್ ಅವರು ಬಳಿಕ ಹೇಳಿದರು.

ನಾನು ಮುಸ್ಲಿಮ್ ಕಕ್ಷಿದಾರರ ಪರವಾಗಿ ಒಗ್ಗಟ್ಟಿನೊಂದಿಗೆ ವಾದಿಸಿದ್ದೇನೆ ಮತ್ತು ಅದೇ ಮಾರ್ಗವನ್ನು ಇಷ್ಟ ಪಡುತ್ತೇನೆ. ಮುಸ್ಲಿಮ್ ಕಕ್ಷಿದಾರರು ತಮ್ಮ ಭಿನ್ನಾಭಿಪ್ರಾಯಗಳನ್ನು ಮೊದಲು ಬಗೆ ಹರಿಸಿಕೊಳ್ಳಬೇಕುಎಂದು ಧವನ್ ಸುದ್ದಿ ಸಂಸ್ಥೆಯೊಂದರ ಜೊತೆ ಮಾತನಾಡುತ್ತಾ ಹೇಳಿದರು.

ತಾನು ಅಸ್ವಸ್ಥನಾಗಿರುವುದರಿಂದ ವಜಾ ಮಾಡಲಾಗಿದೆ ಎಂಬುದಾಗಿ ಮಖ್ಬೂಲ್ ಅವರು ಬಹಿರಂಗವಾಗಿ ಹೇಳಿದ ಬಳಿಕ ಮಾತ್ರವೇ ತಾನು ಫೇಸ್ ಬುಕ್ನಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿರುವುದಾಗಿ ಅವರು ನುಡಿದರು.

ನಾನು ಅಸ್ವಸ್ಥನಾಗಿದ್ದರೆ, ಇತರ ಪ್ರಕರಣಗಳಿಗೆ ಸಂಬಂಧಿಸಿದಂತೆ ನಾನು ನ್ಯಾಯಾಲಯಗಳಲ್ಲಿ ಹಾಜರಾಗುತ್ತಿರುವುದು ಹೇಗೆ?’ ಎಂದು ಧವನ್ ಪ್ರಶ್ನಿಸಿದರು.

ನಾನು ನಿರ್ದಿಷ್ಟ ಉದ್ದೇಶಕ್ಕೆ ಬದ್ಧನಾಗಿದ್ದೇನೆ ಮತ್ತು ಮುಸ್ಲಿಮ್  ಕಕ್ಷಿದಾರರು  ಇಂತಹ ಹೇಳಿಕೆಗಳನ್ನು ನೀಡುತ್ತಿರುವುದು ಸಂಪೂರ್ಣ ತಪ್ಪುಎಂದು ಅವರು ಹೇಳಿದರು.

ಡಿಸೆಂಬರ್ ೨ರಂದು ಪುನರ್ ಪರಿಶೀಲನಾ ಅರ್ಜಿಯಲ್ಲಿ ಎಒಆರ್ ಆಗಿರುವ ಮಖ್ಬೂಲ್ ಅವರನ್ನು ಉದ್ದೇಶಿಸಿ ಬರೆದ ಪ್ರತ್ಯೇಕ ಪತ್ರದಲ್ಲಿ ಧವನ್ ಅವರು ಪುನರ್ ಪರಿಶೀಲನಾ ಅರ್ಜಿಯನ್ನು ತಯಾರಿಸಲು ಘಟನಾವಳಿಗಳನ್ನು ವಿವರಿಸಿದ್ದರು.

No comments:

Advertisement