Wednesday, January 8, 2020

ಇರಾನ್ : ಸೊಲೈಮಾನಿ ಅಂತ್ಯಕ್ರಿಯೆ ವೇಳೆ ಕಾಲ್ತುಳಿತ: 40 ಸಾವು

ಇರಾನ್ : ಸೊಲೈಮಾನಿ ಅಂತ್ಯಕ್ರಿಯೆ ವೇಳೆ ಕಾಲ್ತುಳಿತ: 40 ಸಾವು
ಟೆಹರಾನ್: ಅಮೆರಿಕದಿಂದ ಕೊಲ್ಲಲ್ಪಟ್ಟ ಇರಾನಿನ ಹಿರಿಯ ಸೇನಾಧಿಕಾರಿ ಜನರಲ್ ಖಾಸಿಂ  ಸೊಲೈಮಾನಿ ಅಂತ್ಯಯಾತ್ರೆ -ಅಂತ್ಯಕ್ರಿಯೆಯ   ವೇಳೆ  2020 ಜನವರಿ 07ರ ಮಂಗಳವಾರ ಕಾಲ್ತುಳಿತ ಉಂಟಾಗಿ ಕನಿಷ್ಠ ೪೦ ಮಂದಿ ಅಸುನೀಗಿ, ಹಲವರು ಗಾಯಗೊಂಡರು.

ಸೊಲೈಮಾನಿ ಅವರ ಹುಟ್ಟೂರು ಕೆರ್ಮಾನಿಯಲ್ಲಿ ಅಂತ್ಯಕ್ರಿಯೆಗಾಗಿ ಲಕ್ಷಾಂತರ ಮಂದಿ ನೆರೆದಿದ್ದ ಕಾರಣ ಈ ದುರ್ಘಟನೆ ಸಂಭವಿಸಿತು. ಇರಾನಿನ ತುರ್ತು ವೈದ್ಯಕೀಯ ಸೇವಾ ಮುಖ್ಯಸ್ಥ ಪಿಹ್ಸೋಸ್ಸಿನ್ ಕೊಲಿವಾಂಡ್ ಕೂಡ ಸರ್ಕಾರಿ ವಾಹಿನಿ ಜತೆಗೆ ಮಾತನಾಡಿ, ದುರಂತ ನಡೆದದ್ದು ಹೌದು ಎಂದು ಖಚಿತಡಿಸಿದರು.

ಹಿಂದಿನ ದಿನ ಸೊಲೈಮಾನಿ ಪಾರ್ಥಿವ ಶರೀರದ ಮೆರವಣಿಗೆ ವೇಳೆ ಟೆಹರಾನ್ನಲ್ಲಿ ೧೦ ಲಕ್ಷಕ್ಕೂ ಅಧಿಕ ಮಂದಿ ಸೇರಿದ್ದರು.

ಅಂತ್ಯಸಂಸ್ಕಾರಕ್ಕೆ ಸೇರಿರುವ ಜನರ ಸಂಖ್ಯೆ ಇರಾನ್ ಇತಿಹಾಸದಲ್ಲಿಯೇ ಅತ್ಯಂತ ಹೆಚ್ಚು ಎಂದು ಹೇಳಲಾಯಿತು. ಟೆಹರಾನ್, ಖೂಮ್, ಮಶ್ಘಾಡ್ ಮತ್ತು ಅಹ್ವಾಝ್ ನಗರಗಳಲ್ಲೂ ಅಷ್ಟೇ ಸಂಖ್ಯೆಯ ಜನರು ಸೇರಿ, ಸೇನಾಧಿಕಾರಿಗೆ ಗೌರವ ಅರ್ಪಿಸಿದರು ಮತ್ತು ಅಮೆರಿಕದ ವಿರುದ್ಧ ಘೋಷಣೆ ಕೂಗಿದರು.

No comments:

Advertisement