My Blog List

Saturday, January 25, 2020

ಮಾರಕ ಕೊರೋನಾವೈರಸ್: ಚೀನಾದಲ್ಲಿ ಹಾಹಾಕಾರ

ಮಾರಕ ಕೊರೋನಾವೈರಸ್: ಚೀನಾದಲ್ಲಿ ಹಾಹಾಕಾರ
೧೩ ನಗರಗಳು, ಮಹಾಗೋಡೆಯ ಕೆಲಭಾಗ ಬಂದ್, ಸಾವಿನ ಸಂಖ್ಯೆ ೨೬ಕ್ಕೆ ಏರಿಕೆ
ಬೀಜಿಂಗ್: ಮಾರಣಾಂತಿಕವಾಗಿ ಪರಿಣಮಿಸಿರುವ ನೂತನಕೊರೋನಾವೈರಸ್ಚೀನಾ ದೇಶದಲ್ಲಿ ಹಾಹಾಕಾರ ಉಂಟು ಮಾಡಿದ್ದು, ವೈರಸ್ ಹರಡುವುದನ್ನು ತಡೆಯುವುದಕ್ಕಾಗಿ ೧೩ ನಗರಗಳು ಮತ್ತು ವಿಶ್ವ ವಿಖ್ಯಾತಮಹಾಗೋಡೆ ಕೆಲವು ಭಾಗಗಳು ಸೇರಿದಂತೆ ಪ್ರಮುಖ ತಾಣಗಳನ್ನು ಸರ್ಕಾರ 2020 ಜನವರಿ 24ರ ಶುಕ್ರವಾರ ಬಂದ್ ಮಾಡಿದೆ.

ಸಾರ್ಸ್ (ಸಿವಿಯರ್ ಅಕ್ಯೂಟ್ ರೆಸ್ಪಿರೇಟರಿ ಸಿಂಡ್ರೋಮ್)’ ಹೋಲಿಕೆಗಳು ಇರುವ ನೂತನ ಮಾರಕಕೊರೋನಾ ವೈರಸ್ಈಗಾಗಲೇ ೨೬ ಮಂದಿಯನ್ನು ಬಲಿತೆಗೆದುಕೊಂಡಿದ್ದು, ದೇಶಾದ್ಯಂತ ನೂರಾರು ಮಂದಿಗೆ ಸೋಂಕು ತಗುಲಿದೆ.

ಮಿಂಗ್ ಟೋಂಬ್ಸ್ ಮತ್ತು ಇನ್ಶಾನ್ ಪಗೋಡವನ್ನು ಕೂಡಾ ಶನಿವಾರದಿಂದ ಮುಚ್ಚಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ವೈರಸ್ ಹರಡುವಿಕೆಯನ್ನು ತಡೆಯುವ ಸಲುವಾಗಿ ಬರ್ಡ್ಸ್ ನೆಸ್ಟ್ ಸ್ಟೇಡಿಯಂನ್ನು (ಹಕ್ಕಿಯ ಬಲೆ ಕ್ರೀಡಾಂಗಣ) 2020 ಜನವರಿ 24ರ ಶುಕ್ರವಾರ ಮುಚ್ಚಲಾಯಿತು.
ಮಾರಕ ರೋಗದ ಕೇಂದ್ರ ಬಿಂದುವಾಗಿರುವ ವುಹಾನ್ ನಗರದ ಆಸುಪಾಸಿನ ಇನ್ನೂ ನಾಲ್ಕು ನಗರಗಳಲ್ಲೂ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ಇದರೊಂದಿಗೆ ದೇಶದಲ್ಲಿ ವಾಹನ ಸಂಚಾರ ನಿರ್ಬಂಧಕ್ಕೆ ಒಳಗಾಗಿರುವ ನಗರಗಳ ಸಂಖ್ಯೆ ೧೩ಕ್ಕೆ ಏರಿದೆ. ಅಧಿಕಾರಿಗಳು ರೋಗ ಹರಡುವಿಕೆಯನ್ನು ತಡೆಯಲು ಕ್ರಮಗಳ ಮೂಲಕ ಹರಸಾಹಸ ಪಡುತ್ತಿದ್ದರೆ, ಸುಮಾರು ೪೧ ಮಿಲಿಯನ್ (.೨೦ ಕೋಟಿ) ಜನರು ಸಂಚಾರ ವ್ಯವಸ್ಥೆಗಳಿಲ್ಲದೆ ಚಡಪಡಿಸುವಂತಾಗಿದೆ.

ಮೊತ್ತ ಮೊದಲಿಗೆ ವೈರಸ್ ಪತ್ತೆಯಾದ ಹುಬೀ ಪ್ರಾಂತದಲ್ಲಿರುವ ಕ್ಷಿಯಾನ್ನಿಂಗ್, ಕ್ಷಿಯಾವೊಗನ್, ಎನ್ಶಿ ಮತ್ತು ಝಿಜಿಯಾಂಗ್ ನಗರಗಳಲ್ಲಿ ಬಸ್ಸು ಮತ್ತು ರೈಲುಗಾಡಿ ಸೇರಿದಂತೆ ಸಾಮೂಹಿಕ ಸಾರಿಗೆಯನ್ನು ರದ್ದುಪಡಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

೮೦೦ಕ್ಕೂ ಹೆಚ್ಚು ಮಂದಿಗೆ ತಗುಲಿರುವ ಕೊರೋನಾ ವೈರಸ್ನ್ನು ನಿಯಂತ್ರಿಸುವ ಸಲುವಾಗಿ ಕಳೆದ ೨೪ ಗಂಟೆಗಳಲ್ಲಿ ಸಂಚಾರ ನಿರ್ಬಂಧಕ್ಕೆ ಒಳಗಾಗಿರುವ ಹೊಸ ನಗರಗಳು ಇವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹುಬೀ ಪ್ರಾಂತದ ವುಹಾನ್ ನಗರದಲ್ಲಿ ಮೊತ್ತ ಮೊದಲಿಗೆ ವೈರಸ್ ಪತ್ತೆಯಾಯಿತು. ನಗರದ ಸಮುದ್ರ ಆಹಾರ ಮತ್ತು ಜೀವಂತ ಪ್ರಾಣಿಗಳ ಮಾರುಕಟ್ಟೆಯನ್ನು ರೋಗ ಜನ್ಯ ಕೇಂದ್ರ ಎಂಬುದಾಗಿ ಗುರುತಿಸಲಾಗಿದೆ.

ಮಾರಕ ರೋಗವು ಈವರೆಗೆ ೨೬ ಜನರನ್ನು ಬಲಿತೆಗೆದುಕೊಂಡಿದೆ. ಕೆಲ ಸಮಯದ ಹಿಂದೆ ಚೀನಾವನ್ನು ನಡುಗಿಸಿದ್ದ ಸಾರ್ಸ್ ರೋಗಕ್ಕೆ ಹೋಲಿಕೆ ಇರುವುದರಿಂದ ಇದೀಗ ಚೀನಾ ಮತ್ತೊಮ್ಮೆ ಬೆಚ್ಚಿ ಬಿದ್ದಿದೆ.

೨೦೦೨-೨೦೦೩ರಲ್ಲಿ ಸಾರ್ಸ್ ರೋಗವು ಚೀನಾದ ಹೃದಯ ಭಾಗ ಮತ್ತು ಹಾಂಕಾಂಗ್ನಲ್ಲಿ ಸುಮಾರು ೬೫೦ ಮಂದಿಯನ್ನು ಬಲಿ ತೆಗೆದುಕೊಂಡಿತ್ತು.

.೫೦ ಲಕ್ಷ ಜನಸಂಖ್ಯೆ ಇರುವ ಝಿಜಿಯಾಂಗ್ ನಗರದಲ್ಲಿ ಫಾರ್ಮೆಸಿಗಳನ್ನು ಬಿಟ್ಟು ಉಳಿದೆಲ್ಲ ವಹಿವಾಟುಗಳನ್ನೂ ಸರ್ಕಾರ ಬಂದ್ ಮಾಡಿದ್ದರೆ, ಲಕ್ಷ ಜನಸಂಖ್ಯೆ ಇರುವ ಎನ್ಶಿ ನಗರದಲ್ಲಿ ಎಲ್ಲ ಮನರಂಜನಾ ತಾಣಗಳನ್ನೂ ಈಗ ಮುಚ್ಚಲಾಗಿದೆ.

ಇದಕ್ಕೂ ಮುನ್ನ ಶುಕ್ರವಾರ . ಮಿಲಿಯನ್ (೬೪ ಲಕ್ಷ) ಜನಸಂಖ್ಯೆಯ ಜಿಂಗ್ಜೌಹು ನಗರದ ಸಾರಿಗೆ ಮಾರ್ಗಗಳನ್ನು ರದ್ದು ಪಡಿಸಲಾಗಿತು.  ಯಾಂಗ್ಟಜೆ ನದಿಯ ಮೇಲಿನ ಸೇತುವೆಯಲ್ಲಿ ಸಾರ್ವಜನಿಕ ಸಂಚಾರ ಬಂದ್ ಮಾಡುವುದರ ಜೊತೆಗೆ ಜಲಮಾರ್ಗದ ಪಯಣವನ್ನೂ ಅಮಾನತುಗೊಳಿಸಲಾಗಿದೆ.

೧೦ ಲಕ್ಷ ಜನಸಂಖ್ಯೆ ಇರುವ ಕೇಂದ್ರ ಹುಬೀಯ ಕಿಯಾನ್ಜಿಯಾಂಗ್ ನಗರದಲ್ಲಿ ಗುರುವಾರ ರಾತ್ರಿಯಿಂದ ದೂರ ಪಯಣದ ಬಸ್ಸುಗಳು, ಪ್ರವಾಸೀ ಬೋಗಿಗಳು ಮತ್ತು ಸಾರ್ವಜನಿಕ ಸಾರಿಗೆಯನ್ನು ಅಮಾನತುಗೊಳಿಸಲಾಗಿದೆ.

ವುಹಾನ್ ನಗರಕ್ಕೆ ಬರುವ ಮತ್ತು ಅಲ್ಲಿಂದ ಹೊರಡುವ ರೈಲುಗಾಡಿಗಳ ಪಯಣ  ಮತ್ತು ವಿಮಾನಗಳ ಹಾರಾಟವನ್ನೂ ಗುರುವಾರದಿಂದ ಸ್ಥಗಿತಗೊಳಿಸಲಾಗಿದೆ. ಇಡೀ ವುಹಾನ್ ನಗರದಲ್ಲಿ ಬಂದ್ ಘೋಷಿಸಲಾಗಿದ್ದು, ಪ್ಯಾಸೆಂಜರ್ ದೋಣಿಗಳು ಮತ್ತು ಬಸ್ಸುಗಳನ್ನು ನಗರ ಪ್ರವೇಶಿಸದಂತೆ ನಿಷೇಧಿಸಲಾಗಿದೆ..

ಚೀನಾದ ಹೊಸ ಚಾಂದ್ರ ವರ್ಷಾರಂಭದ ಸಡಗರಕ್ಕೆ ಕತ್ತರಿ ಬಿದ್ದಿದ್ದು, ಕೌಟುಂಬಿಕ ಸಂತೋಷ ಕೂಟಗಳು ಮತ್ತು ಸಾರ್ವಜನಿಕ ಹೊಸ ವರ್ಷಾಚರಣೆ ರದ್ದಾಗಿದೆ.

ಸಂಚಾರ ನಿರ್ಬಂಧಗಳು ಜಾರಿಯಾಗಿರುವ ಇತರ ನಗರಗಳಲ್ಲಿ ೧೫ ಲಕ್ಷ ಜನಸಂಖ್ಯೆಯ ಕ್ಷಿಯಾಟಾವೊ ಮತ್ತು ಲಕ್ಷ ಜನಸಂಖ್ಯೆಯ ಚಿಬಿ ಸೇರಿದ್ದು, ಇಲ್ಲಿನ ಎಲ್ಲ ಪ್ರವೇಶ ದ್ವಾರಗಳನ್ನು ಮುಚ್ಚಲಾಗಿದೆ. ಎಝೊವು, ಹುವಾನ್ಗ್ಗಾಂಗ್ ಮತ್ತು ಲಿಚುವಾನ್ ನಗರಗಳಲ್ಲೂ ಸಂಚಾರ ನಿರ್ಬಂಧಗಳು ಜಾರಿಯಾಗಿವೆ.

ಸಾರ್ವಜನಿಕ ತಾಣಗಳಲ್ಲಿನ ಎಲ್ಲ ಸಾಂಸ್ಕೃತಿಕ ಪ್ರದರ್ಶನಗಳನ್ನು ರದ್ದು ಪಡಿಸಲಾಗಿದೆ ಎಂದು ಹುಬೀ ಪ್ರಾಂತದ ಅಧಿಕಾರಿಗಳು ತಿಳಿಸಿದ್ದಾರೆ.

ಟ್ಯಾಕ್ಸಿ ಸೇವೆಗಳನ್ನು ಕೂಡಾ ನಿರ್ಬಂಧಿಸಲಾಗಿದ್ದು, ಪ್ರಾಂತದ ಪ್ರವಾಸೀ ಸಂಸ್ಥೆಗಳು ತಮ್ಮ ಚಟುವಟಿಕೆಗಳನ್ನು ಸ್ತಬ್ಧಗೊಳಿಸಿವೆ. ಯಾರೂ ಯಾವುದೇ ಸಮೂಹ ಪ್ರವಾಸಗಳನ್ನು ಸಂಘಟಿಸುವಂತಿಲ್ಲ ಎಂದು ಅಧಿಕಾರಿಗಳು ಶುಕ್ರವಾರ ಪ್ರಕಟಿಸಿದ್ದಾರೆ.

No comments:

Advertisement