My Blog List

Wednesday, January 29, 2020

ದೇಶದ್ರೋಹದ ಪ್ರಕರಣ: ಶಾರ್ಜಿಲ್ ಇಮಾಮ್ ಬಂಧನ

ದೇಶದ್ರೋಹದ ಪ್ರಕರಣ:  ಶಾರ್ಜಿಲ್ ಇಮಾಮ್ ಬಂಧನ
ದಿನಗಳ ಶೋಧದ ಬಳಿಕ ಬಿಹಾರದ ಜೆಹಾನಾಬಾದ್ನಲ್ಲಿ ಪತ್ತೆ
ಪಾಟ್ನಾ: ನಾಲ್ಕು ದಿನಗಳ ತೀವ್ರ ಶೋಧದ ಬಳಿಕ ಬಿಹಾರದ ಜೆಹಾನಾಬಾದ್ನಲ್ಲಿ ಜೆಎನ್ಯು ಸಂಶೋಧನಾ ವಿದ್ಯಾರ್ಥಿ ಮತ್ತು ಕಾರ್ಯಕರ್ತ ಶಾರ್ಜೀಲ್ ಇಮಾಮ್ ಅವರನ್ನು ದೇಶದ್ರೋಹ ಪ್ರಕರಣದಲ್ಲಿ ದೆಹಲಿ ಪೊಲೀಸ್ ಅಪರಾಧ ವಿಭಾಗವು  2020 ಜನವರಿ 28ರ ಮಂಗಳವಾರ  ಬಂಧಿಸಿತು.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಶಹೀನ್ ಬಾಗ್ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಚೋದನಕಾರೀ ಭಾಷಣ ಮಾಡಿದ್ದಕ್ಕಾಗಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಐತಿಹಾಸಿಕ ಅಧ್ಯಯನ ಕೇಂದ್ರದ ಪಿಎಚ್ಡಿ ವಿದ್ಯಾರ್ಥಿಯಾದ ಇಮಾಮ್ ವಿರುದ್ಧ ಹಲವಾರು ರಾಜ್ಯಗಳು ದೇಶದ್ರೋಹದ ಪ್ರಕರಣಗಳನ್ನು ದಾಖಲಿಸಿವೆ. 
"ನಾವು ಜೆಹಾನಾಬಾದ್ನಿಂದ ಶಾರ್ಜೀಲ್ ಇಮಾಮ್ನನ್ನು ಬಂಧಿಸಿದ್ದೇವೆ" ಎಂದು ದೆಹಲಿ ಅಪರಾಧ ವಿಭಾಗದ ಪೊಲೀಸ್ ಪೊಲೀಸ್ ಆಯುಕ್ತ ರಾಜೇಶ್ ಡಿಯೋ ಹೇಳಿದರು.

ಮುಂಬೈ, ಪಾಟ್ನಾ ಮತ್ತು ದೆಹಲಿಯಲ್ಲಿ ದಾಳಿ ನಡೆಸಿದ ದೆಹಲಿ ಪೊಲೀಸರು ಬಿಹಾರದ ನಿವಾಸಿ ಇಮಾಮ್ ಪತ್ತೆ ಹಚ್ಚಲು ಐದು ತಂಡಗಳನ್ನು ನಿಯೋಜಿಸಿದ್ದರು.

ಬಂಧನಕ್ಕೆ ಪ್ರತಿಕ್ರಿಯಿಸಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, "ಯಾರಾದರೂ ಏನಾದರೂ ತಪ್ಪು ಮಾಡಿದ್ದರೆ, ಕ್ರಮ ಕೈಗೊಳ್ಳಲಾಗುವುದು. ಯಾರೂ ಕಾನೂನಿಗೆ ವಿರುದ್ಧವಾಗಿ ಹೋಗಬಾರದು. ಅವರು ಏನು ಹೇಳಿದರೂ, ಯಾವ ಕ್ರಮ ತೆಗೆದುಕೊಳ್ಳಲಾಗುವುದು ಎಂದು ನಿರ್ಧರಿಸುವುದು ಪೊಲೀಸರು ಮತ್ತು ನ್ಯಾಯಾಲಯಕ್ಕೆ ಬಿಟ್ಟ ವಿಷಯಎಂದು ಹೇಳಿದರು.

ಸಿಎಎ ಮತ್ತು ಎನ್ಆರ್ಸಿಗೆ ವಿರೋಧವಾಗಿ ಇಮಾಮ್ ಜನರನ್ನು ಕೆರಳಿಸುವಂತಹ ಪ್ರಚೋದನಕಾರೀ ಭಾಷಣಗಳನ್ನು ಮಾಡಿರುವುದಾಗಿ ಪೊಲೀಸರು ತಿಳಿಸಿದರು.

ಕಳೆದ ವರ್ಷ ಡಿಸೆಂಬರ್ ೧೩ ರಂದು ಜಾಮಿಯಾ ಮಿಲಿಯಾ ಇಸ್ಲಾಮಿಯಾದಲ್ಲಿ ಇಮಾಮ್ ಇಂತಹ ಒಂದು ಭಾಷಣ ಮಾಡಿದ್ದು, ಬಳಿಕ ಸರ್ಕಾರದ ವಿರುದ್ಧ ಮತ್ತೊಂದು ಪ್ರಚೋದನಾಕಾರಿ ಭಾಷಣವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಡಲಾಗಿದೆಎಂದು  ಪೊಲೀಸರು ನುಡಿದರು.

ಅಸ್ಸಾಮನ್ನು ಭಾರತದ ಉಳಿದ ಭಾಗಗಳಿಂದ ಕತ್ತರಿಸಬೇಕು, ಬಂಗಾಳಿಗಳು - ಹಿಂದೂಗಳು ಮತ್ತು ಮುಸ್ಲಿಮರನ್ನು ಕೊಲ್ಲಲಾಗುತ್ತಿದೆ ಇಲ್ಲವೇ ಬಂಧನ ಕೇಂದ್ರಗಳಲ್ಲಿ ಇರಿಸಲಾಗುತ್ತಿದೆಎಂದು ಧ್ವನಿ ಸುರುಳಿಯಲ್ಲಿ (ಆಡಿಯೋ ಕ್ಲಿಪ್) ಇಮಾಮ್ ಹೇಳಿರುವುದು ವೈರಲ್ ಆಗಿದೆ ಎಂದು ಪೊಲೀಸರು ತಿಳಿಸಿದರು.

ಐದು ಲಕ್ಷ ಜನರನ್ನು ಸಂಘಟಿಸಲು ಸಾಧ್ಯವಾದರೆ, ಅಸ್ಸಾಮನ್ನು ಭಾರತದ ಉಳಿದ ಭಾಗಗಳಿಂದ ಶಾಶ್ವತವಾಗಿ ಕತ್ತರಿಸಲು ಸಾಧ್ಯವಿದೆ ... ಶಾಶ್ವತವಾಗಿ ಅಲ್ಲದಿದ್ದರೂ, ಕನಿಷ್ಠ ಕೆಲವು ತಿಂಗಳುಗಳವರೆಗೆ ಪ್ರತ್ಯೇಕಿಸಲು ಸಾಧ್ಯ" ಎಂದು ಇಮಾಮ್ ಧ್ವನಿ ಸುರುಳಿಯಲ್ಲಿ ಪ್ರಸಾರವಾಗಿರುವ ಭಾಷಣದಲ್ಲಿ ಹೇಳಿರುವುದಾಗಿ ಆಪಾದಿಸಲಾಗಿದೆ.

ಇಮಾಮ್ ವಿರುದ್ಧ ಐಪಿಸಿ ಸೆಕ್ಷನ್ಗಳು ೧೨೪ , ೧೫೩ ಮತ್ತು ೫೦೫ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ  ಎಂದು ದೆಹಲಿ ಪೊಲೀಸರು ತಿಳಿಸಿದರು.

ಸೋಮವಾರ, ಜೆಎನ್ಯು ಮುಖ್ಯ ಪ್ರೊಕ್ಟರ್ ಅವರು ತಮ್ಮ ಮುಂದೆ ಹಾಜರಾಗುವಂತೆ ಮತ್ತು ಪ್ರಚೋದನಕಾರಿ ಭಾಷಣಗಳ ಬಗೆಗಿನ ತನ್ನ ನಿಲುವನ್ನು ವಿವರಿಸುವಂತೆ ಇಮಾಮ್ಗೆ ಸೂಚಿಸಿದ್ದರು. ಫೆಬ್ರುವರಿ ರೊಳಗೆ ಪ್ರೊಕ್ಟೊರಿಯಲ್ ಸಮಿತಿಯ ಮುಂದೆ ಹಾಜರಾಗುವಂvಯೂ ಇಮಾಮ್ ಗೆ ಸೂಚನೆ ನೀಡಲಾಗಿತ್ತು.

ಶಾರ್ಜೀಲ್ ಇಮಾಮ್ ಬಂಧನದ ಬಳಿಕ ಇಮಾಮ್ ಕಿರಿಯ ಸಹೋದರ ಸಹೋದರ ಮುಝಮ್ಮಿಲ್ ಇಮಾಮ್ ಅವರನ್ನು ಪ್ರಶ್ನಿಸುವ ಸಲುವಾಗಿ ಪೊಲೀಸರು ವಶಕ್ಕೆ ಪಡೆದರು.

ದೆಹಲಿಯ ಹೊರತಾಗಿ,ಅಸ್ಸಾಂ, ಅರುಣಾಚಲ ಪ್ರದೇಶ ಮತ್ತು ಉತ್ತರಪ್ರದೇಶದಲ್ಲೂ ಶಾರ್ಜೀಲ್ ಇಮಾಮ್ ವಿರುದ್ಧ ದೇಶದ್ರೋಹದ ಪ್ರಕರಣಗಳು ದಾಖಲಾಗಿವೆ.

ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ ೧೨೪ ಅಡಿಯಲ್ಲಿ ಅಪರಾಧ ಸಾಬೀತಾದರೆ ಆತನನ್ನು ಜೀವಾವಧಿ ಶಿಕ್ಷೆಗೆ ಗುರಿಪಡಿಸಬಹುದು.

ಪೌರತ್ವ ವಿರೋಧಿ ಕಾಯ್ದೆ ಕಾರ್ಯಕರ್ತ ಶಾರ್ಜೀಲ್ ಇಮಾಮ್ ಶೋಧಕ್ಕಾಗಿ ದೆಹಲಿ ಮತ್ತು ಬಿಹಾರದ ಪೊಲೀಸ್ ತಂಡ ಸೋಮವಾರ ಜೆಹಾನಾಬಾದ್ ನಿಂದ ಪಾಟ್ನಾವರೆಗಿನ ಹಲವಾರು ಸ್ಥಳಗಳಲ್ಲಿ ದಾಳಿ ನಡೆಸಿದ ಒಂದು ದಿನದ ಬಳಿಕ ಶಾರ್ಜಿಲ್ ಇಮಾಮ್ ಬಂಧನವಾಗಿದೆ.

ಮಾಜಿ ಜನತಾದಳ (ಯುನೈಟೆಡ್) ನಾಯಕ ದಿವಂಗತ ಅಕ್ಬರ್ ಇಮಾಮ್ ಅವರ ಪುತ್ರನಾಗಿರುವ ಶಾರ್ಜೀಲ್ ಮುಂಬೈ ಐಐಟಿಯ ಹಳೆಯ ವಿದ್ಯಾರ್ಥಿಯಾಗಿದ್ದು, ಆಧುನಿಕ ಇತಿಹಾಸದಲ್ಲಿ ಸಂಶೋಧನಾ ಅಧ್ಯಯನಕ್ಕಾಗಿ ೨೦೧೭ ರಲ್ಲಿ ಜೆಎನ್ಯು ಸೇರಿದ್ದರು.

No comments:

Advertisement