Wednesday, January 29, 2020

ನಿರ್ಭಯಾ ಪ್ರಕರಣ: ಜೈಲಿನಲ್ಲಿ ಲೈಂಗಿಕ ಹಲ್ಲೆ ಆರೋಪ

ನಿರ್ಭಯಾ ಪ್ರಕರಣ: ಜೈಲಿನಲ್ಲಿ ಲೈಂಗಿಕ ಹಲ್ಲೆ ಆರೋಪ
ಅಪರಾಧಿ ಮುಕೇಶ್ ಸಿಂಗ್ ಅರ್ಜಿ, ಸುಪ್ರೀಂ ತೀರ್ಪು ಇಂದು
ನವದೆಹಲಿ: ೨೦೧೨ರ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ನಾಲ್ವರು ಅಪರಾಧಿಗಳ ಪೈಕಿ ಒಬ್ಬನಾಗಿರುವ ಮುಕೇಶ್ ಸಿಂಗ್, ಸೆರೆಮನೆಯಲ್ಲಿ ತನ್ನ ಮೇಲೆ ಲೈಂಗಿಕ ಹಲ್ಲೆ ನಡೆದಿದೆ ಎಂದು ಮಂಗಳವಾರ ಸುಪ್ರೀಂಕೋರ್ಟಿಗೆ ತಿಳಿಸಿದ್ದು, ಕ್ಷಮಾದಾನ ಕೋರಿಕೆ ಅರ್ಜಿ ತಿರಸ್ಕರಿಸಿದ್ದನ್ನು ಪ್ರಶ್ನಿಸಿದ ಆತನ ಅರ್ಜಿಯ ಮೇಲೆ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠವು 2020 ಜನವರಿ 29ರ  ಬುಧವಾರ ತನ್ನ ತೀರ್ಪು ನೀಡಲಿದೆ.

ವಿಚಾರಣಾ ನ್ಯಾಯಾಲಯದ ತೀರ್ಪು ಸೇರಿದಂತೆ ದಾಖಲೆಗಳನ್ನು ನೋಡುವ ಅವಕಾಶವನ್ನು ರಾಷ್ಟ್ರಪತಿ ಭವನಕ್ಕೆ ನಿರಾಕರಿಸಿದ ಹಾಗೂ ತನ್ನ ಕ್ಷಮಾದಾನ ಕೋರಿಕೆ ಅರ್ಜಿಯನ್ನು ತಿರಸ್ಕರಿಸಿದ ರಾಷ್ಟ್ರಪತಿಯವರ ಕ್ರಮ ನಿರಂಕುಶವಾದದ್ದು  ಎಂಬುದಾಗಿ ಮುಕೇಶ್ ಸಿಂಗ್  2020 ಜನವರಿ 28ರ ಮಂಗಳವಾರ  ಸುಪ್ರಿಂಕೋರ್ಟಿನಲ್ಲಿ ಪ್ರತಿಪಾದಿಸಿದ.

ನ್ಯಾಯಮೂರ್ತಿ ಆರ್. ಭಾನುಮತಿ ನೇತೃತ್ವದ ತ್ರಿಸದಸ್ಯ ನ್ಯಾಯಪೀಠದ ಮುಂದೆ ಮುಕೇಶ್ ಸಿಂಗ್ ಪರವಾಗಿ ಹಾಜರಾದ ಹಿರಿಯ ವಕೀಲರರಾದ ಅಂಜನಾ ಪ್ರಕಾಶ್ ಅವರ ವಾದ ಮಂಡನೆಯ ಬಳಿಕ ಪೀಠವು ತನ್ನ ತೀರ್ಪನ್ನು ಬುಧವಾರಕ್ಕೆ ಕಾಯ್ದಿರಿಸಿತು.

ಮುಕೇಶ್ ಸಿಂಗ್ ಮತ್ತು ಆತನ ಇತರ ಮೂವರು ಸಹಚರರಿಗೆ, ೨೦೧೨ರಲ್ಲಿ ದೆಹಲಿಯ ಚಲಿಸುವ ಬಸ್ಸಿನಲ್ಲಿ ೧೩ರ ಹರೆಯದ ಫಿಸಿಯೋಥೆರೆಪಿ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿದೆ. ತಿಂಗಳ ಆದಿಯಲ್ಲಿ ದೆಹಲಿ ನ್ಯಾಯಾಲಯವು ನಾಲ್ಕೂ ಮಂದಿ ಶಿಕ್ಷಿತ ಅಪರಾಧಿಗಳನ್ನು ಫೆಬ್ರುವರಿ ೧ರಂದು ಗಲ್ಲಿಗೇರಿಸುವಂತೆ ಆಜ್ಞಾಪಿಸಿ ಡೆತ್ ವಾರಂಟ್ ಹೊರಡಿಸಿದೆ.

ನ್ಯಾಯಮೂರ್ತಿಗಳಾದ ಅಶೋಕ ಭೂಷಣ್ ಮತ್ತು ಎಎಸ್ ಬೋಪಣ್ಣ ಅವರನ್ನು ಒಳಗೊಂಡಿರುವ ತ್ರಿಸದಸ್ಯ ಪೀಠದ ಮುಂದೆ ತಮ್ಮ ವಾದವನ್ನು ಮಂಡಿಸಿದ ಅಂಜನಾ ಪ್ರಕಾಶ್, ’ಸರ್ಕಾರವು ದಾಖಲೆಗಳನ್ನು ರಾಷ್ಟ್ರಪತಿಯವರ ಮುಂದೆ ಇರಿಸಬೇಕಾಗಿತ್ತು, ಆದರೆ ನಿಟ್ಟಿನಲ್ಲಿ ಅದು ಜಾರಿತುಎಂದು ಹೇಳಿದರು.

ಉದಾಹರಣೆಗೆಶಿಕ್ಷಿತರಿಗೆ ಕಾನೂನು ನೆರವು ನೀಡುವಲ್ಲಿನ ವಿಳಂಬವನ್ನು ಸೂಚಿಸುವ ದಾಖಲೆಗಳು ಅಥವಾ ರಾಮ್ ಸಿಂಗ್ ಮತ್ತು ಅಕ್ಷಯ್ ಥಾಕೂರ್ ಇಬ್ಬರ ಡಿಎನ್ ಮಾತ್ರವೇ ಅತ್ಯಾಚಾರ ಸಂತ್ರಸ್ಥೆಯ ಮೇಲಿದ್ದುದನ್ನು ಸೂಚಿಸುವ ದಾಖಲೆಗಳು ಎಂದು ಅಂಜನಾ ಪ್ರಕಾಶ್ ವಿವರಿಸಿದರು.
ಕ್ಷಮಾದಾನ ಅರ್ಜಿ ವಜಾಗೊಳ್ಳುವುದಕ್ಕೂ ಮುನ್ನವೇ ಮುಕೇಶ್ ಸಿಂಗ್ನನ್ನುಏಕಾಂತ ಬಂಧನಕ್ಕೆ ಗುರಿಪಡಿಸಲಾಗಿತ್ತು ಎಂದೂ ಮುಕೇಶ್ ಪರ ವಕೀಲರು ದೂರಿದರು. ಇದು ನಿಯಮಾವಳಿಗಳ ಉಲ್ಲಂಘನೆ ಮತ್ತು ಆತನಿಗೆ ಮಾಡಿದ ಅಪಮಾನಎಂದು ಅವರು ವಾದಿಸಿದರು.

ನ್ಯಾಯಾಲಯಗಳು ನನಗೆ ಮರಣದಂಡನೆಯನ್ನು ಮಾತ್ರ ವಿಧಿಸಿವೆ, ನನಗೆ ಲೈಂಗಿಕ ದುರುಪಯೋಗದ ಶಿಕ್ಷೆ ವಿಧಿಸಲಾಗಿದೆಯೇ?’ ಎಂದು ಮುಕೇಶ್ ಸಿಂಗ್ ಅವರನ್ನು ಪ್ರತಿನಿಧಿಸಿದ ಇನ್ನೊಬ್ಬ ವಕೀಲ ರೆಬೆಕ್ಕಾ ಜಾನ್, ಕ್ಷಮಾದಾನ ಕೋರಿಕೆ ಅರ್ಜಿಯನ್ನು ರಾಷ್ಟ್ರಪತಿಯವರು ತಿರಸ್ಕರಿಸಿದವೇಗದತ್ತ ಬೊಟ್ಟು ಮಾಡಿದರು.

ಕೇಂದ್ರ ಸರ್ಕಾರದ ಎರಡನೆಯ ಅತ್ಯಂತ ಹಿರಿಯ ಕಾನೂನು ಅಧಿಕಾರಿ ತುಷಾರ ಮೆಹ್ತ ಅವರು ಮುಕೇಶ್ ಸಿಂಗ್ ವಾದವನ್ನು ವಿರೋಧಿಸಿದರು.  ’ಶಿಕ್ಷಿತ ಅಪರಾಧಿಯು ಬದುಕಿನ ಪಾವಿತ್ರ್ಯ ಕುರಿತ ಪ್ರಶ್ನೆಗಳನ್ನು ಎತ್ತುತ್ತಿರುವುದು ವಿಚಿತ್ರಎಂದು ಅವರು ಹೇಳಿದರು.

ಮುಕೇಶ್ ಸಿಂಗ್ ಕ್ಷಮಾದಾನ ಕೋರಿಕೆ ಅರ್ಜಿ ಸಲ್ಲಿಸಿದ ಬಳಿಕ ಅದನ್ನು ನಿಯಮಾವಳಿಗಳಿಗೆ ಅನುಗುಣವಾಗಿ ತುರ್ತಾಗಿ ಪರಿಶೀಲಿಸಿ ಶಿಫಾರಸುಗಳ ಸಹಿತವಾಗಿ ಕಳುಹಿಸಿಲಾಗಿತ್ತು.

ನ್ಯಾಯಾಲಯಗಳು ನೀಡುವ ನ್ಯಾಯಾಂಗ ನಿರ್ಣಯಗಳ ಮೇಲಿನ ಮೇಲ್ಮನವಿಗಳ ವಿಚಾರಣೆಗಾಗಿ ರಾಷ್ಟ್ರಪತಿಯವರು ಕುಳಿತಿರುವುದಲ್ಲಎಂದು ಮೆಹ್ತ ವಿವರಿಸಿದರು.

ತಿಹಾರ್ ಸೆರೆಮನೆಯಲ್ಲಿ ತನ್ನನ್ನು ಲೈಂಗಿಕವಾಗಿ ದುರುಪಯೋಗ ಮಾಡಿಕೊಳ್ಳಲಾಯಿತು ಎಂಬ ಮುಕೇಶ್ ಸಿಂಗ್ ದೂರನ್ನು ಪ್ರಸ್ತಾಪಿಸಿದ ತುಷಾರ ಮೆಹ್ತಸೆರೆಮನೆಯಲ್ಲಿ ಕೆಟ್ಟದಾಗಿ ನಡೆಸಿಕೊಂಡರೆ, ಶಿಕ್ಷಿತನು ಸೂಕ್ತ ವೇದಿಕೆಯಲ್ಲಿ ಅದನ್ನು ಪ್ರಶ್ನಿಸಬಹುದು, ಆದರೆ ಅದು ಕ್ಷಮಾದಾನಕ್ಕೆ ಆಧಾರವಾಗುವುದಿಲ್ಲಎಂದು ಹೇಳಿದರು. ’ನಾನು ಹೀನಾಯ ಅಪರಾಧದ ತಪ್ಪಿತಸ್ಥನಾಗಿದ್ದರೂ ನನ್ನನ್ನು ಕೆಟ್ಟದಾಗಿ ನಡೆಸಿಕೊಂಡಿರುವುದರಿಂದನನಗೆ ಕ್ಷಮಾದಾನ ನೀಡಬೇಕು ಎಂದು ಹೇಳಲು ಇದೇನೂ ಐಷಾರಾಮೀ ವ್ಯಾಪ್ತಿಯಲ್ಲಎಂದು ಸಾಲಿಸಿಟರ್ ಜನರಲ್ ಹೇಳಿದರು.

ತಾನು ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯ ಬಗ್ಗೆ ನಿರ್ಧರಿಸಲು ರಾಷ್ಟ್ರಪತಿಯವರು ಹೆಚ್ಚಿನ ಸಮಯ ತೆಗೆದುಕೊಂಡಿಲ್ಲ ಎಂಬ ದೂರನ್ನೂ ತುಷಾರ ಮೆಹ್ತ ವಿರೋಧಿಸಿದರು.

ಸುಪ್ರೀಂಕೋರ್ಟ್ ಹೇಳಿದಂತೆ ಕ್ಷಮಾದಾನ ಕೋರಿಕೆ ಅರ್ಜಿಯ ಬಗ್ಗೆ ನಿರ್ಧರಿಸುವಲ್ಲಿನ ವಿಳಂಬವು ಶಿಕ್ಷಿತನ ಮೇಲೆ ಅಮಾನವೀಯ ಪರಿಣಾಮ ಬೀರುತ್ತದೆಯಾದ ಕಾರಣ ರಾಷ್ಟ್ರಪತಿಯವರು ತ್ವರಿತ ನಿರ್ಧಾರ ಕೈಗೊಂಡಿದ್ದಾರೆಎಂದು ಮೆಹ್ತ ವಿವರಿಸಿದರು.

No comments:

Advertisement