Tuesday, January 14, 2020

ಉತ್ತರ ಪ್ರದೇಶ: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯ ಮೊದಲ ರಾಜ್ಯ

ಉತ್ತರ ಪ್ರದೇಶ: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯ ಮೊದಲ ರಾಜ್ಯ
೨೧ ಜಿಲ್ಲೆಗಳಲ್ಲಿ ೩೨ ಸಾವಿರ ವಲಸಿಗರಿಗೆ  ಇಷ್ಟರಲ್ಲೇ ಪೌರತ್ವ
ಲಕ್ನೋ: ಪೌರತ್ವ ತಿದ್ದುಪಡಿ ಕಾಯ್ದೆಯ ಅಡಿಯಲ್ಲಿ ಅರ್ಹ ವಲಸಿಗರಿಗೆ ಭಾರತದ ನಾಗರಿಕತೆಯನ್ನು ನೀಡುವ ಪ್ರಕ್ರಿಯೆಗೆ ಚಾಲನೆ ನೀಡುವುದರೊಂದಿಗೆ ಉತ್ತರ ಪ್ರದೇಶವು ಪೌರತ್ವ (ತಿದ್ದುಪಡಿ) ಜಾರಿಗೊಳಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ರಾಜ್ಯದಲ್ಲಿರುವ ಒಟ್ಟು ೭೫ ಜಿಲ್ಲೆಗಳ ಪೈಕಿ ೨೧ ಜಿಲ್ಲೆಗಳಲ್ಲಿ ಒಟ್ಟು ೩೨ ಸಾವಿರ ವಲಸಿಗರನ್ನು ಗುರುತಿಸಲಾಗಿದೆ ಎಂದು ಉತ್ತರಪ್ರದೇಶ ಸಚಿವ ಶ್ರೀಕಾಂತ ಶರ್ಮಾ ಅವರು  2020 ಜನವರಿ 13ರ ಸೋಮವಾರ ತಿಳಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಸೂಚನೆಯನ್ನು ಎಲ್ಲಾ ಜಿಲ್ಲಾಧಿಕಾರಿಗಳಿಗೆ ರವಾನಿಸಲಾಗಿದೆ ಎಂದು ಶರ್ಮಾ ಸುದ್ದಿ ಸಂಸ್ಥೆಗೆ ತಿಳಿಸಿದರು.

ಇವರಲ್ಲಿ ಹೆಚ್ಚಿನವರು ಅಫ್ಘಾನಿಸ್ಥಾನ, ಪಾಕಿಸ್ಥಾನ ಮತ್ತು ಬಾಂಗ್ಲಾದೇಶದಿಂದ ಭಾರತಕ್ಕೆ ವಲಸೆ ಬಂದವರಾಗಿದ್ದಾರೆ ಎಂಬ ಮಾಹಿತಿಯನ್ನೂ ಸಹ ಸಚಿವರು ಇದೇ ಸಂದರ್ಭದಲ್ಲಿ ನೀಡಿದರು.

ಸಹರಣಪುರ, ಗೋರಖ್ ಪುರ, ಅಲಿಗಢ, ರಾಂ ಪುರ, ಪ್ರತಾಪಗಢ, ಪಿಲಿಭಿತ್, ಲಕ್ನೋ, ವಾರಣಾಸಿ, ಬಹ್ರೈಚ್, ಲಖಿಂಪುರ, ಮೀರತ್ ಮತ್ತು ಆಗ್ರಾ ಜಿಲ್ಲೆಗಳಿಂದ ವಲಸಿಗರಿಗೆ ಸಂಬಂಧಿಸಿದ ಮೊದಲ ಪಟ್ಟಿ ರಾಜ್ಯ ಸರ್ಕಾರದ  ಕೈ ಸೇರಿದೆ ಎಂದು ಸಚಿವರು ತಿಳಿಸಿದರು.

ಪಿಲಿಭಿಟ್  ಜಿಲ್ಲೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯ ವಲಸಿಗರಿದ್ದಾರೆ ಆದರೆ ಇವರ ನಿಖರ ಸಂಖ್ಯೆ ಇನ್ನಷ್ಠ ಲಭ್ಯವಾಗಬೇಕಾಗಿದೆ ಎಂದು ತಿಳಿದುಬಂದಿದೆ.

No comments:

Advertisement