My Blog List

Sunday, January 26, 2020

ಕೇರಳ, ಪಂಜಾಬ್ ಹಾದಿಯಲ್ಲಿ ರಾಜಸ್ಥಾನ, ಸಿಎಎ ವಿರೋಧೀ ನಿರ್ಣಯಕ್ಕೆ ಅಸೆಂಬ್ಲಿ ಅಸ್ತು

ಕೇರಳ, ಪಂಜಾಬ್ ಹಾದಿಯಲ್ಲಿ ರಾಜಸ್ಥಾನ, ಸಿಎಎ ವಿರೋಧೀ ನಿರ್ಣಯಕ್ಕೆ ಅಸೆಂಬ್ಲಿ ಅಸ್ತು
ಜೈಪುರ: ಭಾರತೀಯ ಜನತಾ ಪಕ್ಷದ (ಬಿಜೆಪಿ) ಪ್ರಬಲ ಪ್ರತಿಭಟನೆಯ ಮಧ್ಯೆ ಕಾಂಗ್ರೆಸ್ ನೇತೃತ್ವದ ರಾಜಸ್ಥಾನ ಸರ್ಕಾರವು 2020 ಜನವರಿ 25ರ ಶನಿವಾರ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರೋಧೀ ನಿರ್ಣಯಕ್ಕೆ ರಾಜ್ಯ ವಿಧಾನಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿತು.

ಇದರೊಂದಿಗೆ ರಾಜಸ್ಥಾನವು ತಿದ್ದುಪಡಿಯಾಗಿರುವ ಪೌರತ್ವ ಕಾಯ್ದೆ ವಿರುದ್ಧ ನಿರ್ಣಯ ಅಂಗೀಕರಿಸಿದ ದೇಶದ ಮೂರನೇ ರಾಜ್ಯವಾಯಿತು. ಈಗಾಗಲೇ ಕೇರಳ ಮತ್ತು ಪಂಜಾಬ್ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧೀ ನಿರ್ಣಯ ಅಂಗೀಕರಿಸಿವೆ.

ರಾಜ್ಯದ ಸಂಸದೀಯ ವ್ಯವಹಾರಗಳ ಸಚಿವರಾದ ಶಾಂತಿ ಧರಿವಾಲ್ ಅವರು ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ ತತ್ ಕ್ಷಣವೇ ಬಿಜೆಪಿ ಶಾಸಕರು ಸರ್ಕಾರದ ವಿರುದ್ಧ ತೀವ್ರ ದಾಳಿ ನಡೆಸಿದರು.

ಅವರ
ಪೈಕಿ ಕೆಲವರು ವಿಧಾನಸಭಾಧ್ಯಕ್ಷರ ಪೀಠದ ಮುಂಭಾಗಕ್ಕೆ ನುಗ್ಗಿ ಘೋಷಣೆಗಳನ್ನು ಕೂಗಿದರು.

ಪೌರತ್ವ ತಿದ್ದುಪಡಿ ಕಾಯ್ದೆಯು (ಸಿಎಎ) ಸಂವಿಧಾನದ ಮೂಲರಚನೆಯನ್ನೇ ಗಾಳಿಗೆ ತೂರಿದೆ ಮತ್ತು ಜನಸಂಖ್ಯೆ ಗಣನೀಯ ಪ್ರಮಾಣದ ವರ್ಗವು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ಮತ್ತು ರಾಷ್ಟ್ರೀಯ ಪೌರ ನೋಂದಣಿಗೆ (ಎನ್ ಆರ್ಸಿ) ಕೂಡಾ ಇದೇ ನೆಲೆ ಹೊಂದಿವೆ ಎಂದು ನಿರ್ಣಯ ಹೇಳಿದೆ.

ನೂತನ ವಿಧಿಗಳನ್ನು ಹಿಂಪಡೆದ ಬಳಿಕ ಮಾತ್ರವೇ ರಾಷ್ಟ್ರೀಯ ಜನಸಂಖ್ಯಾ ಗಣತಿ ಮುಂದುವರೆಯಬೇಕು ಎಂದು ನಿರ್ಣಯ ತಿಳಿಸಿದೆ.

No comments:

Advertisement