ದೆಹಲಿಯ
ಭಜನ್ಪುರದಲ್ಲಿ ಕಟ್ಟಡ ಕುಸಿತ: ೪
ವಿದ್ಯಾರ್ಥಿಗಳು ಸೇರಿ ೫ ಜನರ ಸಾವು
ನವದೆಹಲಿ:
ದೆಹಲಿಯ ಭಜನ್ಪುರ ಪ್ರದೇಶದಲ್ಲಿ ಕಟ್ಟಡವೊಂದು ಕುಸಿದು ಬಿದ್ದ ಪರಿಣಾಮವಾಗಿ 2020 ಜನವರಿ 25ರ ಶನಿವಾರ ೪ ಮಂದಿ ವಿದ್ಯಾರ್ಥಿಗಳು
ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ ಎಂದು ಅಗ್ನಿಶಾಮಕ ಮೂಲಗಳು ತಿಳಿಸಿವೆ.
೧೦-೧೫ ವಯೋಮಾನದ ನಾಲ್ವರು
ವಿದ್ಯಾರ್ಥಿಗಳು ಮತ್ತು ಒಬ್ಬ ಬೋಧಕ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಇತರ ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಈಶಾನ್ಯ ದೆಹಲಿಯ ಡಿಸಿಪಿ ವೇದ ಪ್ರಕಾಶ ಸೂರ್ಯ ತಿಳಿಸಿದರು.
ಇದಕ್ಕೆ
ಮುನ್ನ ಕಟ್ಟಡ ಕುಸಿತದಿಂದ ಗಾಯಗೊಂಡ ೧೩ ಮಂದಿಯನ್ನು ಆಸ್ಪತ್ರೆಗೆ
ಸೇರಿಸಲಾಗಿತ್ತು. ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ಕೋಚಿಂಗ್ ಕೇಂದ್ರ ಇತ್ತು. ಹೀಗಾಗಿ ಕೇಂದ್ರದ ವಿದ್ಯಾರ್ಥಿಗಳು ಮತ್ತು ಬೋಧಕರು ದುರಂತದಲ್ಲಿ ಸಿಕ್ಕಿಹಾಕಿಕೊಂಡರು ಎಂದು ಸುದ್ದಿ ಮೂಲಗಳು ಹೇಳಿವೆ.
ಕನಿಷ್ಠ
೧೩ ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರು ವಿದ್ಯಾರ್ಥಿಗಳು ಕಣ್ಮರೆಯಾಗಿದ್ದಾರೆ ಎಂದು ದೆಹಲಿ ಅಗ್ನಿಶಾಮಕ ಸೇವೆಯ ಮುಖ್ಯಸ್ಥ ಅತುಲ್ ಗಾರ್ಗ್ ಇದಕ್ಕೆ ಮುನ್ನ ಹೇಳಿದ್ದರು.
ದುರಂತದ
ಬಗ್ಗೆ ಅಗ್ನಿಶಾಮಕದ ದಳಕ್ಕೆ ಸಂಜೆ ೪.೩೦ರ ಸುಮಾರಿಗೆ
ಕರೆ ಬಂತು. ತತ್ ಕ್ಷಣವೇ ೭ ಅಗ್ನಿಶಾಮಕ ವಾಹನಗಳು
ಸ್ಥಳಕ್ಕೆ ಧಾವಿಸಿದವು. ರಕ್ಷಣಾ ಕಾರ್ಯಾಚರಣೆಗಳು ಇನ್ನೂ ಮುನ್ನಡೆದಿವೆ ಎಂದು ಅಗ್ನಿಶಾಮಕ ಮೂಲಗಳು ಹೇಳಿದವು.
No comments:
Post a Comment