My Blog List

Monday, January 6, 2020

ಟೆಹರಾನ್‌ಗೆ ಫೋನ್ ಕರೆ ಮಾಡಿದ ಭಾರತ

ಟೆಹರಾನ್ಗೆ ಫೋನ್ ಕರೆ ಮಾಡಿದ ಭಾರತ
ನವದೆಹಲಿ: ಇರಾನಿನ ಸೇನಾ ಕಮಾಂಡರ್ ಕಾಸಿಂ ಸೊಲೈಮಾನಿ ಹತ್ಯೆಯ ಬಳಿಕ ಹೆಚ್ಚುತ್ತಿರುವ ಅಮೆರಿಕ -ಇರಾನ್ ಪ್ರಕ್ಷುಬ್ಧತೆಯ ಮಧ್ಯೆ, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು 2020 ಜನವರಿ 05ರ ಭಾನುವಾರ  ಇರಾನಿನ ವಿದೇಶಾಂಗ ವ್ಯವಹಾರಗಳ ಸಚಿವ ಜಾವೇದ್ ಝರೀಫ್ ಅವರನ್ನು ಫೋನ್ ಮೂಲಕ ಸಂಪರ್ಕಿಸಿ ಮಾತನಾಡಿದರು. 

ಪ್ರದೇಶದ ಪ್ರಕ್ಷುಬ್ಧತೆಯ ಬಗ್ಗೆ ಭಾರತವು ಅತೀವ ಕಳಕಳಿ ಹೊಂದಿದೆ ಎಂದು ಜೈಶಂಕರ್ ಅವರು ಇರಾನ್ ವಿದೇಶಾಂಗ ಸಚಿವರಿಗೆ ತಿಳಿಸಿದರು.

ಬೆಳವಣಿಗೆಗಳು ಅತ್ಯಂತ ಗಂಭೀರ ತಿರುವು ಪಡೆದುಕೊಂಡಿವೆ ಎಂದು ಸಂದರ್ಭದಲ್ಲಿ ಜೈಶಂಕರ್ ಹೇಳಿದರು. ’ಈಗಷ್ಟೇ ಇರಾನಿನ ವಿದೇಶಾಂಗ ಸಚಿವ ಝರೀಪ್ ಅವರ ಜೊತೆಗೆ ಸಂಭಾಷಣೆ ಮುಗಿಸಿದೆ. ಬೆಳವಣಿಗೆಗಳು ಅತ್ಯಂತ ಗಂಭೀರ ತಿರುವು ಪಡೆದಿವೆ, ಭಾರತವು ಪ್ರಕ್ಷುಬ್ದತೆಯ ಬಗ್ಗೆ ಆಳವಾದ ಕಳಕಳಿ ಹೊಂದಿದೆ. ನಾವು ಪರಸ್ಪರ ಸಂಪರ್ಕದಲ್ಲಿ ಇರಲು ಒಪ್ಪಿದ್ದೇವೆಎಂದು ಜೈಶಂಕರ್ ಟ್ವೀಟ್ ಮಾಡಿದರು.

ಸೊಲೈಮಾನಿ
ಹತ್ಯೆಯ ಕೆಲವು ದಿನಗಳ ಬಳಿಕ ಉಭಯ ನಾಯಕರು ಮಧ್ಯೆ ಸಂಭಾಷಣೆ ನಡೆಯಿತು.
ಇರಾನ್- ಅಮೆರಿಕ ಬಿಕ್ಕಟ್ಟು ತೀವ್ರಗೊಂಡು ಸಮರಕ್ಕೆ ತಿರುಗಿದರೆ ಅದು ಭಾರತದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳಿವೆ. ತೈಲಬೆಲೆ ಹೆಚ್ಚಳ, ಪಶ್ಚಿಮ ಏಷ್ಯಾದಲ್ಲಿ ನೆಲೆಸಿದ ಭಾರತೀಯರಿಂದ ಹಣದ ಹರಿವಿಗೆ ತಡೆ, ಪಶ್ಚಿಮ ಏಷ್ಯಾದಲ್ಲಿ ಇರುವ ಸುಮಾರು ೮೦ ಲಕ್ಷ ಭಾರತೀಯರಿಂದ ಉದ್ಯೋಗ ನಷ್ಟದ ಭೀತಿ ಮನೆ ಮಾಡಿದೆ.

No comments:

Advertisement