My Blog List

Monday, January 6, 2020

ಟಾಟಾ ಸಮೂಹಕ್ಕೆ ಮರಳುವ ಇಚ್ಛೆ ಇಲ್ಲ: ಸೈರಸ್ ಮಿಸ್ತ್ರಿ ಘೋಷಣೆ

ಟಾಟಾ ಸಮೂಹಕ್ಕೆ ಮರಳುವ ಇಚ್ಛೆ ಇಲ್ಲ: ಸೈರಸ್ ಮಿಸ್ತ್ರಿ 
ನವದೆಹಲಿ: ಟಾಟಾ ಸನ್ಸ್ ಸಮೂಹದ ಕಾರ್ಯಕಾರಿ ಅಧ್ಯಕ್ಷರಾಗಿ ರಾಷ್ಟ್ರೀಯ ಕಂಪೆನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯಿಂದ (ಎನ್ಸಿಎಲ್ ಎಟಿ) ಪುನಃಸ್ಥಾಪನೆಗೊಂಡಿರುವ ಸೈರಸ್ ಮಿಸ್ತ್ರಿ ಅವರುಟಾಟಾ ಸನ್ಸ್ ಸಮೂಹಕ್ಕೆ ಮರಳುವ ಇಚ್ಛೆ ನನಗೆ ಇಲ್ಲಎಂದು 2020 ಜನವರಿ 05ರ ಭಾನುವಾರ  ಪ್ರಕಟಿಸಿದರು.

ಟಾಟಾ ಅವರ ಪೂರ್ವಾಗ್ರಹ ವರ್ತನೆಯನ್ನು ಎನ್ಸಿಎಲ್ಎಟಿ ಗುರುತಿಸಿರುವುದಕ್ಕಾಗಿ ನಾನು ಅದಕ್ಕೆ ವಿನೀತನಾಗಿದ್ದೇನೆಎಂದು ಅವರು ಹೇಳಿದರು.

ತನ್ನ ಮುಂದಿದ್ದ ದಾಖಲೆಗಳ ರಾಶಿಯ ವಿಮರ್ಶೆಯ ಬಳಿಕ ನನ್ನನ್ನು ಅಕ್ರಮವಾಗಿ ಕಿತ್ತು ಹಾಕಿದ್ದನ್ನು ಮತ್ತು ಟಾಟಾ ಮತ್ತು ಇತರ ಟ್ರಸ್ತಿಗಳ ದಮಕಾರೀ ಮತ್ತು ಪೂರ್ವಾಗ್ರಹದ ವರ್ತನೆಯನ್ನು ಗುರುತಿಸಿದ ಎನ್ಸಿಎಲ್ಎಟಿಯ ಅದೇಶಕ್ಕೆ ನಾನು ಅತ್ಯಂತ ವಿನೀತನಾಗಿದ್ದೇನೆಎಂದು ಮಿಸ್ತ್ರಿ ಅವರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿತು.

ಸೈರಸ್ ಮಿಸ್ತ್ರಿ ಅವರನ್ನು ಎನ್ಸಿಎಲ್ಎಟಿಯು ಡಿಸೆಂಬರ್ ೧೮ರಂದು ಟಾಟಾ ಸನ್ಸ್ ಸಮೂಹದ ಕಾರ್ಯಕಾರಿ ಅಧ್ಯಕ್ಷರನ್ನಾಗಿ ಪುನಃಸ್ಥಾಪನೆ ಮಾಡಿ ಆದೇಶ ನೀಡಿತ್ತು. ಮಿಸ್ತ್ರ್ರಿ ಅವರನ್ನು ಸಮೂಹದಿಂದ ಮೂರು ವರ್ಷಗಳ ಹಿಂದೆ ವಜಾಗೊಳಿಸಲಾಗಿತ್ತು. ’ಮಿಸ್ತ್ರಿ  ವಿರುದ್ಧದ ರತನ್ ಟಾಟಾ ಅವರ ಕ್ರಮಗಳು ದಮನಕಾರಿಯಾಗಿದ್ದವು ಮತ್ತು ನೂತನ ಅಧ್ಯಕ್ಷನ ನೇಮಕಾತಿಯು ಅಕ್ರಮಎಂದು ನ್ಯಾಯಮಂಡಳಿಯು ತನ್ನ ಆದೇಶದಲ್ಲಿ ತಿಳಿಸಿತ್ತು.

ಟಾಟಾ ಕನಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಮಿಸ್ತ್ರಿ ಪರವಾಗಿ ಎನ್ಸಿಎಲ್ಎಟಿ ನೀಡಿದ ಆದೇಶದ ವಿರುದ್ಧ ಶುಕ್ರವಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.

ಟಾಟಾ ಸಮೂಹದ ಒಟ್ಟಾರೆ ಹಿತಾಸಕ್ತಿ ದೃಷ್ಟಿಯಿಂದ ನಾನು ನಿರ್ಧಾರ ಕೈಗೊಂಡಿದ್ದೇನೆ. ಯಾವುದೇ ವ್ಯಕ್ತಿಗಿಂತ ಸಮೂಹದ ಹಿತಾಸಕ್ತಿಗಳು ಅತ್ಯಂತ ಮಹತ್ವವಾದವುಗಳುಎಂದು ಮಿಸ್ತ್ರಿ ಭಾನುವಾರ ಸಂಜೆ ಹೇಳಿದರು.

ನಡೆಯುತ್ತಿರುವ ಅಪಪ್ರಚಾರಕ್ಕೆ ತೆರೆ ಎಳೆಯುವ ಸಲವಾಗಿ, ಎನ್ಸಿಎಲ್ಎಟಿ ಆದೇಶವು ನನ್ನ ಪರವಾಗಿ ಇರುವುದರ ಹೊರತಾಗಿಯೂ ನಾನು ಟಾಟಾ ಸನ್ಸ್ ಕಾರ್ಯಕಾರಿ  ಅಧ್ಯಕ್ಷ ಸ್ಥಾನವನ್ನು ಅಥವಾ ಟಿಸಿಎಸ್, ಟಾಟಾ ಟೆಲಿ ಸರ್ವೀಸ್, ಟಾಟಾ ಇಂಡಸ್ಟ್ರೀಸ್ ನಿರ್ದೇಶಕ ಸ್ಥಾನವನ್ನು ವಹಿಸಿಕೊಳ್ಳುವುದಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಬಯಸಿದ್ದೇನೆ. ಆದಾಗ್ಯೂ, ಮಂಡಳಿಯಲ್ಲಿ ಸ್ಥಾನ ಸೇರಿದಂತೆ ಅಲ್ಪಸಂಖ್ಯಾತ ಷೇರುದಾರರ ಹಕ್ಕುಗಳ ಸಂರಕ್ಷಣೆಗಾಗಿ ಎಲ್ಲ ಆಯ್ಕೆಗಳನ್ನು ಮುಕ್ತವಾಗಿ ಇಟ್ಟುಕೊಂಡು ನಾನು ಹೋರಾಡುವೆಎಂದು ಮಿಸ್ತ್ರಿ ನುಡಿದರು.

ನ್ಯಾಯಮಂಡಳಿಯ
ಡಿಸೆಂಬರ್ ೧೮ರ ತೀರ್ಪಿನ ವಿರುದ್ಧ ರತನ್ ಟಾಟಾ ಅವರು ತಮ್ಮ ವೈಯಕ್ತಿಕ ನೆಲೆಯಲ್ಲಿ ಕೂಡಾ ಶುಕ್ರವಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಮಿಸ್ತ್ರಿ ಅವರು ಟಾಟಾ ಸನ್ಸ್ ಅಧ್ಯಕ್ಷರಾದ ಬಳಿಕವೂ ತಮ್ಮ ಕೌಟುಂಬಿಕ ವ್ಯವಹಾರದಿಂದ ತಮ್ಮನ್ನು ತಾವು ಹೊರತುಪಡಿಸಿಕೊಳ್ಳಲು ಸಿದ್ಧರಿರಲಿಲ್ಲ, ಇದು ಹಿತಾಸಕ್ತಿಗಳ ಘರ್ಷಣೆಗೆ ಕಾರಣವಾಗಿತ್ತು ಎಂದು ಟಾಟಾ ಸಮೂಹ ಆಪಾದಿಸಿತ್ತು.

No comments:

Advertisement