ಗ್ರಾಹಕರ ಸುಖ-ದುಃಖ

My Blog List

Wednesday, January 29, 2020

ಭಾರತಕ್ಕೆ ನಮೀಬಿಯಾ ಚಿರತೆ: ಸುಪ್ರೀಂಕೋರ್ಟ್ ಅಸ್ತು

ಭಾರತಕ್ಕೆ  ನಮೀಬಿಯಾ  ಚಿರತೆ: ಸುಪ್ರೀಂಕೋರ್ಟ್  ಅಸ್ತು
ನವದೆಹಲಿ: ಅಳಿವಿನ ಅಂಚಿನಲ್ಲಿರುವ ಆಫ್ರಿಕಾದ ನಮೀಬಿಯಾ ದೇಶದಿಂದ ಚಿರತೆಗಳನ್ನು  ಭಾರತದ ನಿರ್ದಿಷ್ಟ ಪ್ರದೇಶಗಳಲ್ಲಿ ತಂದು ಬಿಡಲು ಸುಪ್ರಿಂ ಕೋರ್ಟ್  2020 ಜನವರಿ 28ರ ಮಂಗಳವಾರ  ಅನುಮತಿ ನೀಡಿತು.

ಈ ನಿರ್ಧಿಷ್ಟ ತಳಿಯ ಚಿರತೆಯು ಅಳಿವಿನಂಚಿನಲ್ಲಿರುವುದರಿಂದ ಅದನ್ನು ಭಾರತದಲ್ಲಿ ತಂದು ಸಾಕಲು ಅನುಮತಿ ನೀಡಬೇಕೆಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಸಲ್ಲಿಸಿದ್ದ ಮನವಿಯ ಪರಿಶೀಲನೆಯ ಸಂದರ್ಭದಲ್ಲಿ  ಭಾರತದ ಮುಖ್ಯ ನ್ಯಾಯಮೂರ್ತಿ ಶರತ್ ಅರವಿಂಧ  ಬೋಬ್ಡೆ ನೇತೃತ್ವದ ನ್ಯಾಯಪೀಠವು ಈ ಒಪ್ಪಿಗೆ ನೀಡಿತು.

ಈ ಚಿರತೆಗಳ ಆಹಾರ ಕ್ರಮ, ಜೀವನ ಶೈಲಿಗಳನ್ನು ವಿವರವಾಗಿ ಅಧ್ಯಯನ ನಡೆಸಿದ ಬಳಿಕ ಇವುಗಳನ್ನು ಮಧ್ಯಪ್ರದೇಶದ ಕುನೋ ಉದ್ಯಾನದಲ್ಲಿ ಅಥವಾ ಅವುಗಳಿಗೆ ಸೂಕ್ತವೆನಿಸುವ ದೇಶದ ಯಾವುದೇ ಭಾಗದಲ್ಲಿ ಇರಿಸಬಹುದು  ಎಂದು ನ್ಯಾಯಪೀಠವು ಸೂಚನೆ ನೀಡಿತು.

ಪ್ರಾಯೋಗಿಕ ನೆಲೆಯಲ್ಲಿ ಆಫ್ರಿಕಾದ ಚಿರತೆಗಳನ್ನು ಭಾರತಕ್ಕೆ ತರಿಸಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ತಜ್ಞರ ಸಮಿತಿಯಿಂದ ಪ್ರತೀ ನಾಲ್ಕ ತಿಂಗಳಿಗೊಮ್ಮೆ ಪ್ರಗತಿ ವರದಿಯನ್ನು ತನಗೆ ಸಲ್ಲಿಸುವಂತೆಯೂ ನ್ಯಾಯಪೀಠ ಇದೇ ಸಂದರ್ಭದಲ್ಲಿ ಆದೇಶ ನೀಡಿತು.

No comments:

Advertisement