My Blog List

Wednesday, January 29, 2020

ಪವನ್ ಸುಖ ದೇವ್ ಗೆ ‘ಪರಿಸರ ನೊಬೆಲ್’

ಪವನ್ ಸುಖ ದೇವ್  ಗೆ ‘ಪರಿಸರ ನೊಬೆಲ್’
ವಿಶ್ವಸಂಸ್ಥೆ: ಭಾರತದ ಪರಿಸರ ತಜ್ಞ, ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ರಾಯಭಾರಿ ಪವನ್ ಸುಖದೇವ್  ಅವರಿಗೆ  2020 ಜನವರಿ 28ರ ಮಂಗಳವಾರ ‘ಟೇಲರ್ ಪುರಸ್ಕಾರ ಪ್ರಕಟಿಸಲಾಯಿತು.
ಅದನ್ನು ಪರಿಸರ ಸಂರಕ್ಷಣೆಗಾಗಿ ನೀಡಲಾಗುವ ನೊಬೆಲ್ ಎಂದೇ ಪರಿಗಣಿಸಲಾಗುತ್ತದೆ.

‘ಹಸಿರು ಪರಿಸರ ಕ್ಷೇತ್ರಕ್ಕೆ ಅವರು ಕೊಟ್ಟ  ಕೊಡುಗೆಯನ್ನು  ಪರಿಗಣಿಸಿ ಈ ಗೌರವ ನೀಡಲಾಯಿತು.

ಪವನ್ ಜತೆಗೆ ಜೀವ ವಿಜ್ಞಾನಿ ಗ್ರೆಚೆಕನ್ ದೇವ್ ಅವರಿಗೂ ಈ ಪ್ರಶಸ್ತಿ ಲಭಿಸಿದೆ. ಪರಿಸರ ವಿನಾಶದಿಂದ ಆರ್ಥಿಕ ಕ್ಷೇತ್ರಕ್ಕೂ ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಈ ಬಗ್ಗೆ ರಾಜಕೀಯ ಮತ್ತು ಕಾರ್ಪೊರೇಟ್ ಕ್ಷೇತ್ರದ ನಾಯಕರು ಚಿಂತನೆ ನಡೆಸಬೇಕು ಎಂದು ಅವರಿಬ್ಬರು ಸಲಹೆ ಮಾಡಿದ್ದಾರೆ.

ಮೇ ೧ರಂದು ಅವರಿಬ್ಬರಿಗೆ ೨ ಲಕ್ಷ ಅಮೆರಿಕನ್ ಡಾಲರ್ ನಗದು, ಚಿನ್ನದ ಪದಕ ನೀಡಿ ಗೌರವಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿತು.

No comments:

Advertisement