My Blog List

Thursday, January 16, 2020

ಎನ್‌ಐಎಯಿಂದ ದೇವಿಂದರ್ ಸಿಂಗ್ ತನಿಖೆ

ಎನ್ಐಎಯಿಂದ  ದೇವಿಂದರ್  ಸಿಂಗ್ ತನಿಖೆ
ನವದೆಹಲಿ: ಭಯೋತ್ಪಾದಕ ಸಂಪರ್ಕಗಳಿಗಾಗಿ ಬಂಧಿಸಲ್ಪಟ್ಟಿರುವ  ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಅಧಿಕಾರಿ ದೇವಿಂದರ್ ಸಿಂಗ್ ಅವರನ್ನು ರಾಷ್ಟ್ರದ ಮುಂಚೂಣಿಯ ಭಯೋತ್ಪಾದನಾ ತನಿಖಾ ಸಂಸ್ಥೆಯಾಗಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ಐಎ) ವಿಚಾರಣೆಗೆ ಗುರಿ ಪಡಿಸಲಿದೆ.

ಸಿಂಗ್ ಪ್ರಕರಣದ ತನಿಖೆ ನಡೆಸಿ ಭಯೋತ್ಪಾದಕ ಗುಂಪುಗಳ ಜೊತೆಗಿನ ಅವರ ಸಂಬಂಧಗಳ ಬಗ್ಗೆ ಪರಿಶೀಲಿಸುವಂತೆ ಗೃಹ ಸಚಿವಾಲಯವು 2020 ಜನವರಿ 16ರ ಗುರುವಾರ ಎನ್ಐಎಗೆ ಆದೇಶ ನೀಡಿತು.
ದೇವಿಂದರ್ ಸಿಂಗ್ ಅವರನ್ನು ಜಮ್ಮುವಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೂವರು ವ್ಯಕ್ತಿಗಳ ಜೊತೆಗೆ ತಮ್ಮ ವಾಹನದಲ್ಲಿ ಪ್ರಯಾಣ ಮಾಡುತ್ತಿದ್ದಾಗ ಅಡ್ಡಗಟ್ಟಲಾಗಿತ್ತು. ಸಿಂಗ್ ಅವರು ಹುಂಡೈ ವಾಹನದ ಮುಂಭಾಗದ ಆಸನದಲಿ ಇದ್ದರು.

ಅದೇ ವಾಹನದಲ್ಲಿ ಭದ್ರತಾ ಸಂಸ್ಥೆಗಳು ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ಗಳು ಎಂಬುದಾಗಿ ಗುರುತಿಸಿರುವ ನವೀದ್ ಬಾಬು ಮತ್ತು ಅಸಿಫ್ ಅಹ್ಮದ್ ಮತ್ತು ವಕೀಲ ರಫಿ ಅಹ್ಮದ್ ಇದ್ದರು.
ಬಳಿಕ ಸಿಂಗ್ ಅವರನ್ನು ಭಯೋತ್ಪಾದನಾ ನಿಗ್ರಹ ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ ಅಥವಾ ಯುಎಪಿಎ ಅಡಿಯಲ್ಲಿ ಬಂಧಿಸಲಾಗಿತ್ತು.

ಮಧ್ಯೆ, ದೇವಿಂದರ್ ಸಿಂಗ್ ಗೆ ಹಿಂದೆ ನೀಡಲಾಗಿದ್ದಶೇರ್ ಕಾಶ್ಮೀರ್ಪೊಲೀಸ್ ಪದಕವನ್ನೂ ಜಮ್ಮು ಮತ್ತು ಕಾಶ್ಮೀರ ಸರ್ಕಾರವು ವಾಪಸ್ ಪಡೆಯಿತು.

೨೦೧೮ರಲ್ಲಿ ನೀಡಲಾಗಿದ್ದ ಪೊಲೀಸ್ ಶೌರ್ಯ ಪದಕವನ್ನು ಸಿಂಗ್ ಅವರು ಉಗ್ರರ ಜೊತೆ ಗುರುತಿಸಿಕೊಂಡು ಅಮಾನತು ಶಿಕ್ಷೆಗೆ ಗುರಿಯಾಗಿರುವುದರ ಜೊತೆಗೆ ನಂಬಿಕೆ ದ್ರೋಹ ಎಸಗಿ, ಪೊಲೀಸ್ ಪಡೆಗೆ ಅಪಖ್ಯಾತಿ ತಂದಿದ್ದಾರೆ ಎಂಬ ಕಾರಣಕ್ಕಾಗಿ ಹಿಂದಕ್ಕೆ ಪಡೆಯಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರ ತಿಳಿಸಿದೆ.

No comments:

Advertisement