Sunday, January 12, 2020

ಹಿರಿಯ ಸಂಶೋಧಕ, ಬರಹಗಾರ ಡಾ. ಚಿದಾನಂದ ಮೂರ್ತಿ ಇನ್ನಿಲ್ಲ

 ಹಿರಿಯ ಸಂಶೋಧಕ, ಬರಹಗಾರ ಡಾ. ಚಿದಾನಂದ ಮೂರ್ತಿ ಇನ್ನಿಲ್ಲ
ಬೆಂಗಳೂರು: ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಸಾಹಿತಿ, ಸಂಶೋಧಕ, ಕನ್ನಡ ಹೋರಾಟಗಾರ ಡಾ. ಎಂ.ಚಿದಾನಂದಮೂರ್ತಿ ಅವರು 2020 ಜನವರಿ 11ರ  ಶನಿವಾರ ಮುಂಜಾನೆ :೪೫ ಸಮಯದಲ್ಲಿ ವಿಧಿವಶರಾದರು. ಚಿ.ಮೂ. ಎಂಬುದಾಗಿಯೇ ಅವರು ಜನಪ್ರಿಯರಾಗಿದ್ದರು.
ಇಂದು ಬೆಳಗ್ಗೆ ಗಂಟೆಯ ನಂತರ ವಿಜಯನಗರದ ಆರ್ ಪಿಸಿ ಲೇಔಟಿನ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು.
ಚಿದಾನಂದಮೂರ್ತಿ ೧೯೩೧ ಮೇ ೧೦ರಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ  ಹಿರೆಕೊಗಳೂರಿ ನಲ್ಲಿ ಜನಿಸಿದ್ದರು. ಅವರಿಗೆ ೮೮ ವರ್ಷ ವಯಸ್ಸಾಗಿತ್ತು, ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಈದಿನ  ಕೊನೆಯುಸಿರೆಳೆದರು.
ಸಾಹಿತ್ಯ, ಸಂಶೋಧನೆ ಮತ್ತು ಇತಿಹಾಸ ಕ್ಷೇತ್ರದಲ್ಲಿ  ಸೇವೆ ಸಲ್ಲಿಸಿರುವ ಚಿದಾನಂದಮೂರ್ತಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಲಭಿಸಿದ್ದವು.  ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಬೇಕೆಂದು ಹೋರಾಟ ಮಾಡಿದವರಲ್ಲಿ ಚಿ.ಮೂ ಪ್ರಮುಖರು.

 ಹಂಪಿ ಸ್ಮಾರಕಗಳ ರಕ್ಷಣೆಗಾಗಿ ಚಿದಾನಂದಮೂರ್ತಿ ನಿರಂತರ ಹೋರಾಟ ಮಾಡಿದ್ದರು. ಸಂಶೋಧಕರಾಗಿ ಹಲವು ಸಾಧನೆಗಳನ್ನು ಮಾಡಿದ್ದಾರೆಪ್ರಾಧ್ಯಾಪಕರಾಗಿಯೂ ಚಿಮೂ  ಸೇವೆ ಸಲ್ಲಿಸಿದ್ದರು.

No comments:

Advertisement