ಗ್ರಾಹಕರ ಸುಖ-ದುಃಖ

My Blog List

Tuesday, January 21, 2020

ಸುಪ್ರೀಂನಿಂದ ಪವನ್ ಕುಮಾರ್ ಗುಪ್ತ ಅರ್ಜಿ ವಜಾ

ಸುಪ್ರೀಂನಿಂದ ಪವನ್ ಕುಮಾರ್ ಗುಪ್ತ ಅರ್ಜಿ ವಜಾ
ನಿರ್ಭಯಾ ಹಂತಕರಿಗೆ ಫೆ.೧ರಂದು ಗಲ್ಲು ಖಚಿತ
ನವದೆಹಲಿ: ೨೦೧೨ರ ದೆಹಲಿಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಲ್ಲಿ ಒಬ್ಬನಾದ ಪವನ್ ಕುಮಾರ್ ಗುಪ್ತ ಸಲ್ಲಿಸಿದ್ದ ಅರ್ಜಿಯನ್ನು 2020 ಜನವರಿ 20ರ ಸೋಮವಾರ ತಿರಸ್ಕರಿಸಿದ ಸುಪ್ರೀಂಕೋರ್ಟ್ ಆತ ಅಪರಾಧ ಸಂಭವಿಸಿದ ವೇಳೆಯಲ್ಲಿ ಅಪ್ರಾಪ್ತ ವಯಸ್ಕನಾಗಿದ್ದ ಎಂಬುದಾಗಿ ಪರಿಗಣಿಸಬೇಕಾದ ಅಗತ್ಯವಿಲ್ಲ ಎಂದು ತೀರ್ಪು ನೀಡಿತು.

ಇದರೊಂದಿಗೆ ನಿರ್ಭಯಾ ಪ್ರಕರಣದ ನಾಲ್ಕೂ ಮಂದಿ ಅಪರಾಧಿಗಳು ಗಲ್ಲಿಗೆ ಏರುವುದು ಖಚಿತವಾಯಿತು.

ಫೆಬ್ರುವರಿ ೧ರಂದು ಬೆಳಗ್ಗೆ ಗಂಟೆಗೆ ತನ್ನನ್ನು ಗಲ್ಲಿಗೆ ಏರಿಸುವುದನ್ನು ಸ್ಥಗಿತಗೊಳಿಸಬೇಕು ಎಂಬುದಾಗಿ ಕೋರಿ ಪವನ್ ಕುಮಾರ್ ಗುಪ್ತ ಸಲ್ಲಿಸಿದ್ದ ವಿಶೇಷ ಅರ್ಜಿಯನ್ನು  (ಎಸ್ಎಲ್ಪಿ) ನ್ಯಾಯಮೂರ್ತಿ ಆರ್. ಭಾನುಮತಿ ನೇತೃತ್ವತ್ವ ಪೀಠವು ಈದಿನ ಬೆಳಗ್ಗೆ ವಿಚಾರಣೆಗೆ ಎತ್ತಿಕೊಂಡಿತ್ತು.

೨೩ರ ಹರೆಯದ ಫಿಸಿಯೋಥೆರೆಪಿ ವಿದ್ಯಾರ್ಥಿನಿ ಮನೆಗೆ ಹೋಗುತ್ತಿದ್ದ ವೇಳೆಯಲ್ಲಿ ಆಕೆಯ ಮೇಲೆ ೨೦೧೨ರ ಡಿಸೆಂಬರ್ ೧೬ರಂದು ಚಲಿಸುವ ಬಸ್ಸಿನಲ್ಲಿ ಮಂದಿಯಿಂದ ನಡೆದ ಸಾಮೂಹಿಕ ಅತ್ಯಾಚಾರ, ಕೊಲೆ ಅಪರಾಧದ ಘಟನೆ ಘಟಿಸಿತ್ತು. ತಾನು ಅಪ್ರಾಪ್ತ ವಯಸ್ಕನಾಗಿದ್ದುನಾಗಿ ಅಪರಾಧಿಗಳಲ್ಲಿ ಒಬ್ಬನಾದ ಪವನ್ ಕುಮಾರ್ ಗುಪ್ತ ಅರ್ಜಿಯಲ್ಲಿ ಪ್ರತಿಪಾದಿಸಿದ್ದ.

ಪೊಲೀಸರು ಆತನ ವಯಸ್ಸಿಗೆ ಸಂಬಂಧಿಸಿದ ದಾಖಲೆಗಳನ್ನು ಬಚ್ಚಿಟ್ಟಿದ್ದರು ಎಂದು ಸುಪ್ರೀಂಕೋರ್ಟಿನಲ್ಲಿ ವಿಚಾರಣೆಯ ವೇಳೆಯಲ್ಲಿ ಗುಪ್ತ ಪರ ವಕೀಲ ಎಪಿ ಸಿಂಗ್ ಆಪಾದಿಸಿದರು.

ಪವನ್ ಜನ್ಮದಿನ ೧೯೯೬ರ ಅಕ್ಟೋಬರ್ . ದಾಖಲೆಗಳನ್ನು ದೆಹಲಿ ಪೊಲೀಸರು ಬಚ್ಚಿಟ್ಟಿದ್ದರು. ಇದೊಂದು ದೊಡ್ಡ ಸಂಚು ಎಂದು ವಕೀಲರು ಪ್ರತಿಪಾದಿಸಿದರು.

ಹೊಸ ಮಾಹಿತಿ ಲಭಿಸಿದೆ ಮತ್ತು ಗುಪ್ತನ ವಯಸ್ಸು ಸಾಬೀತು ಪಡಿಸುವಂತಹ ಶಾಲಾ ಸರ್ಟಿಫಿಕೇಟ್ಗಳನ್ನು ಹಾಜರುಪಡಿಸಲಾಗಿದೆ ಎಂದು ಅವರು ಹೇಳಿದರು.

ಆದಾಗ್ಯೂ, ಸರ್ಟಿಫಿಕೇಟ್ಗಳು ೨೦೧೭ರ ದಿನಾಂಕದ್ದಾಗಿರುವುದರತ್ತ ಪೀಠ ಬೊಟ್ಟು ಮಾಡಿತು. ಪ್ರಕರಣದಲ್ಲಿ ಗುಪ್ತನಿಗೆ ಶಿಕ್ಷೆ ವಿಧಿಸಿದ ಬಳಿಕ ದಿನಾಂಕ ಇದು ಎಂದು ಪೀಠ ಹೇಳಿತು.

ಪವನ್ ವಯಸ್ಸಿಗೆ ಸಂಬಂಧಿಸಿದ ವಿಷಯವನ್ನು ಸುಪ್ರೀಂಕೋರ್ಟಿನಲ್ಲಿ ಪುನರ್ ಪರಿಶೀಲನಾ ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿತ್ತು ಮತ್ತು ಅರ್ಜಿ ವಜಾಗೊಂಡಿದೆ. ಹೊಸ ವಾಸ್ತವಾಂಶಗಳು ಬೆಳಕಿಗೆ ಬಂದಿವೆ ಎಂಬ ನೆಲೆಯಲ್ಲಿ ನೀವು ಹೊಸ ಅರ್ಜಿಗಳನ್ನು ಸಲ್ಲಿಸುತ್ತಾ ಇರುತ್ತೀರಾ?’ ಎಂದು ನ್ಯಾಯಮೂರ್ತಿ ಅಶೋಕ ಭೂಷಣ್ ಪ್ರಶ್ನಿಸಿದರು.

ಎಪಿ ಸಿಂಗ್ ವಾದವನ್ನು ವಿರೋಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ ಅವರುಪವನ್ ಗುಪ್ತ ತನ್ನ ಜನ್ಮದಿನಾಂಕ ೧೯೯೬ರ ಅಕ್ಟೋಬರ್ ಎಂಬುದಾಗಿ ತಿಳಿಸಿದ್ದ ಅರ್ಜಿಯನ್ನು  ದೆಹಲಿ ನ್ಯಾಯಾಲಯವು ಪರಿಗಣಿಸಿದೆ. ಅದು ಅರ್ಜಿಯನ್ನು ದಾಖಲಿಸಿದೆ ಮತ್ತು ತಿರಸ್ಕರಿಸಿದೆ ಎಂದು ಹೇಳಿದರು.

೨೦೧೨ರ ಡಿಸೆಂಬರ್ ತಿಂಗಳಲ್ಲಿ ಅಪರಾಧ ಘಟಿಸಿದಾಗ ತಾನು ಅಪ್ರಾಪ್ತ ವಯಸ್ಕನಾಗಿದ್ದುದಾಗಿ ಪವನ್ ಗುಪ್ತ ಮಾಡಿದ್ದ ಪ್ರತಿಪಾದನೆಯನ್ನು ದೆಹಲಿ ಹೈಕೋರ್ಟ್ ೨೦೧೯ರ ಡಿಸೆಂಬರ್ ೧೯ರಂದು ವಜಾಗೊಳಿಸಿತ್ತು  ಮತ್ತು ನ್ಯಾಯಾಲಯದಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿ ನ್ಯಾಯಾಲಯಕ್ಕೆ ಹಾಜರಾಗದೇ ಇದ್ದುದಕ್ಕಾಗಿ ಆತನ ವಕೀಲ ಎಪಿ ಸಿಂಗ್ ವರ್ತನೆಗೆ ಅಸಮ್ಮತಿ ವ್ಯಕ್ತ ಪಡಿಸಿತ್ತು.
ದೆಹಲಿಯ ವಿಚಾರಣಾ ನ್ಯಾಯಾಲಯವು ಅಪರಾಧಿಗಳಾದ ಪವನ್ ಗುಪ್ತ (೨೫), ವಿನಯ್ ಶರ್ಮ (೨೬), ಮುಖೇಶ್ ಕುಮಾರ್ (೩೨) ಮತ್ತು ಅಕ್ಷಯ್ ಕುಮಾರ್ ಸಿಂಗ್ (೩೧) ಅವರನ್ನು ಗಲ್ಲಿಗೇರಿಸಲು ಫೆಬ್ರುವರಿ ೧ರ ದಿನಾಂಕವನ್ನು ನಿಗದಿ ಪಡಿಸಿ ಹೊಸದಾಗಿ ಡೆತ್ ವಾರಂಟ್ಗಳನ್ನು ಶುಕ್ರವಾರ ಹೊರಡಿಸಿತ್ತು.

ಫಿಸಿಯೋಥೆರೆಪಿ ವಿದ್ಯಾರ್ಥಿನಿ ೨೦೧೨ರಲ್ಲಿ ಚಲನಚಿತ್ರವನ್ನು ವೀಕ್ಷಿಸಿ ಗೆಳೆಯನ ಜೊತೆಗೆ ಮನೆಗೆ ವಾಪಸಾಗಲು ಬಸ್ಸನ್ನು ಏರಿದಾಗ ಬಸ್ಸಿನಲ್ಲಿ ಇದ್ದ ಮಂದಿ ಅಪರಾಧಿಗಳಲ್ಲಿ ಪವನ್ ಗುಪ್ತ ಒಬ್ಬನಾಗಿದ್ದಾನೆ.

ಪ್ರಕರಣದಲ್ಲಿ ಪವನ್, ವಿನಯ್, ಮುಖೇಶ್ ಮತ್ತು ಅಕ್ಷಯ್ ನಾಲ್ವರು ತಪ್ಪಿತಸ್ಥರು ಎಂಬುದಾಗಿ ಸಾಬೀತಾಗಿದ್ದು ಅವರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಐದನೇ ಆರೋಪಿ ರಾಮ್ ಸಿಂಗ್ ವಿಚಾರಣಾ ವೇಳೆಯಲ್ಲಿಯೇ  ತಿಹಾರ್ ಸೆರೆಮನೆಯಲ್ಲಿ ಆತ್ಮಹತ್ಯ ಮಾಡಿಕೊಂಡಿದ್ದ. ಆರನೇ ಆರೋಪಿಯನ್ನು ಅಪ್ರಾಪ್ತ ವಯಸ್ಕ ಎಂಬ ನೆಲೆಯಲ್ಲಿ ಮೂರು ವರ್ಷಗಳ ಸುಧಾರಣಾ ಸೆರೆವಾಸದ ಬಳಿಕ ಅಜ್ಞಾತ ಸ್ಥಳದಲ್ಲಿ ಬಿಡುಗಡೆ ಮಾಡಲಾಗಿತ್ತು.

No comments:

Advertisement