Thursday, January 2, 2020

ಕರ್ನಾಟಕ ಸಹಿತ ೧೨ ರಾಜ್ಯಗಳಲ್ಲಿ ಒಂದು ದೇಶ, ಒಂದು ರೇಷನ್ ಕಾರ್ಡ್

ಕರ್ನಾಟಕ  ಸಹಿತ ೧೨ ರಾಜ್ಯಗಳಲ್ಲಿ ಒಂದು ದೇಶ, ಒಂದು ರೇಷನ್ ಕಾರ್ಡ್
ನವದೆಹಲಿ: ಕರ್ನಾಟಕ ಮಹಾರಾಷ್ಟ್ರ ಸೇರಿದಂತೆ ದೇಶದ ಹನ್ನೆರಡು ರಾಜ್ಯಗಳಲ್ಲಿ ಕೇಂದ್ರ ಸರ್ಕಾರಒಂದು ದೇಶ, ಒಂದು ರೇಷನ್ ಕಾರ್ಡ್ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ. ಇದರಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ಹರ್ಯಾಣ, ರಾಜಸ್ಥಾನ, ಕೇರಳ, ಮಧ್ಯಪ್ರದೇಶ, ಗೋವಾ, ಜಾರ್ಖಂಡ್ ಮತ್ತು ತ್ರಿಪುರಾ ರಾಜ್ಯಗಳು ಕೂಡಾ ಸೇರಿವೆ.

ಒನ್ ನೇಶನ್, ಒನ್ ರೇಷನ್ ಕಾರ್ಡ್ಯೋಜನೆ ೨೦೨೦ರ ಜನವರಿ ೧ರಿಂದ ಜಾರಿಯಾಗಲಿದ್ದು, ರಾಜ್ಯಗಳಲ್ಲಿರುವ ಫಲಾನುಭವಿಗಳಿಗೆ ಅವರ ಹಾಲಿ ರೇಷನ್ ಕಾರ್ಡಿನಲ್ಲಿಯೇ ಅವರ ಪಾಲಿನ ರೇಷನ್ ಲಭ್ಯವಾಗಲಿದೆ ಎಂದು ವರದಿ ತಿಳಿಸಿದೆ. ೨೦೨೦ರ ಜೂನ್ ವೇಳೆಗೆ ದೇಶದ ಎಲ್ಲಾ ರಾಜ್ಯಗಳಲ್ಲಿಯೂಒನ್ ನೇಷನ್, ಒನ್ ರೇಷನ್ ಕಾರ್ಡ್ಯೋಜನೆ ಜಾರಿಯಾಗಲಿದೆ ಎಂದು 2020 ಜನವರಿ 01ರ ಬುಧವಾರ ವರದಿ ಹೇಳಿದೆ.

ನೂತನ ಆಹಾರ ಸರಬರಾಜು ಪ್ರಕಾರ, ನೂತನ ರೇಷನ್ ಕಾರ್ಡಿಗಾಗಿ ಉತ್ತಮ ಗುಣಮಟ್ಟದ ವಿನ್ಯಾಸವನ್ನು ಒದಗಿಸುವಂತೆ ರಾಜ್ಯಗಳ ಬಳಿ ಕೇಳಲಾಗಿದ್ದು, ಅದನ್ನು ೨೦೨೦ರ ಜೂನ್ ೧ರಂದು ಬಿಡುಗಡೆಗೊಳಿಸಲಾಗುವುದು. ವಿವಿಧ ರಾಜ್ಯಗಳ ರೇಷನ್ ಕಾರ್ಡುಗಳನ್ನು ಮತ್ತು ಕೇಂದ್ರಾಡಳಿತ ಪ್ರದೇಶಗಳು ಗುಣಮಟ್ಟದ ವಿನ್ಯಾಸದಲ್ಲಿ ವಿತರಿಸಲಿವೆ ಎಂದು ವರದಿ ತಿಳಿಸಿದೆ.

No comments:

Advertisement