ಗ್ರಾಹಕರ ಸುಖ-ದುಃಖ

My Blog List

Monday, January 6, 2020

ಜೆಎನ್‌ಯುನಲ್ಲಿ ಭುಗಿಲೆದ್ದ ಹಿಂಸಾಚಾರ; ಮುಸುಕುದಾರಿಗಳಿಂದ ಹಲ್ಲೆ ಆರೋಪ

ಜೆಎನ್ಯುನಲ್ಲಿ ಭುಗಿಲೆದ್ದ ಹಿಂಸಾಚಾರ;  ಹಲ್ಲೆ ಆರೋಪ
ನವದೆಹಲಿ: ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವ ವಿದ್ಯಾಲಯದಲ್ಲಿ 2020 ಜನವರಿ 05ರ ಭಾನುವಾರ ಸಂಜೆ ಹಿಂಸಾಚಾರ ಭುಗಿಲೆದ್ದಿದ್ದು, ಮುಸುಕುಧಾರಿ ವ್ಯಕ್ತಿಗಳು ವಿಶ್ವವಿದ್ಯಾಲಯದ ಆವರಣಕ್ಕೆ ಶಸ್ತ್ರಾಸ್ತ್ರಗಳೊಂದಿಗೆ ನುಗ್ಗಿ ವಿದ್ಯಾರ್ಥಿಗಳು ಮತ್ತು ಬೋಧಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಶೆ ಘೋಷ್ ಆಪಾದಿಸಿದರು.

ಆಕೆ
ಮಾಧ್ಯಮಗಳಿಗೆ ನೀಡಿದ ಸಂಕ್ಷಿಪ್ತ ವಿಡಿಯೋ ಒಂದರಲ್ಲಿ ಘೋಷ್ ಅವರ ಮುಖದಲ್ಲಿ ರಕ್ತದ ಕಲೆ ಇದ್ದು ದಾಳಿಯ ವಿವರ ನೀಡುವಾಗ ಅವರು ಬಿಕ್ಕಳಿಸಿದ್ದು ಕಾಣುತ್ತಿದೆ ಎಂದು ವರದಿಗಳು ಹೇಳಿವೆ.

ಘೋಷ್ ಅವರು ಎಸ್ಎಫ್ (ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ) ಸಂಘಟನೆಗೆ ಸೇರಿದವರಾಗಿದ್ದು, ಸಂಘಟನೆಯು ಮಾರ್ಕ್ಸವಾದಿ ಕಮ್ಯೂನಿಸ್ಟ್ ಪಕ್ಷಕ್ಕೆ ಸಂಯೋಜಿತವಾಗಿರುವ ವಿದ್ಯಾರ್ಥಿ ಸಂಘಟನೆಯಾಗಿದೆ. ಹಲ್ಲೆಯ ಬಳಿಕ ಅವರಿಗೆ ರಕ್ತಸ್ರಾವವಾಗುತಿದ್ದ ದೃಶ್ಯ ವಿಡಿಯೋದಲ್ಲಿ ಇದೆ. ದಾಳಿ ನಡೆಸಿದವರು ಯಾರೆಂಬುದು ತಮಗೆ ಗೊತ್ತಿಲ್ಲ ಎಂದು ಘೋಷ್ ಹೇಳಿದರು.
ಇನ್ನೊಂದು
ವಿಡಿಯೋ ದೃಶ್ಯಾವಳಿಯಲ್ಲಿ ಕೆಲವು ವಿದ್ಯಾರ್ಥಿಗಳುಎಬಿವಿಪಿ ಗೋ ಬ್ಯಾಕ್ಎಂಬುದಾಗಿ ಘೋಷಣೆ ಕೂಗುವ ದೃಶ್ಯವಿದೆ.

ಸುಮಾರು ೫೦ ಮಂದಿ ಅಪರಿಚಿತ ಮುಸುಕುಧಾರಿಗಳು ವಿಶ್ವವಿದ್ಯಾಲಯ ಆವರಣ ಪ್ರವೇಶಿಸಿ ದಾಂಧಲೆ ನಡೆಸಿದರು. ಜನರ ಮೇಲೆ ದಾಳಿ ನಡೆಸಿದ್ದಲ್ಲದೆ ಅಲ್ಲಿ ನಿಂತಿದ್ದ ಕಾರುಗಳ ಮೇಲೂ ದಾಳಿ ನಡೆಸಿದರು ಎಂದು ಆಪಾದಿಸಲಾಗಿದೆ.

ದಾಳಿ ನಡೆಸಿದ್ದು ಅಪರಿಚಿತ ಎಬಿವಿಪಿ ಗೂಂಡಾಗಳು, ಅವರೆಲ್ಲರೂ ವಿದ್ಯಾರ್ಥಿಗಳಲ್ಲ, ಅವರು ಮುಖಗಳನ್ನು ಮುಚ್ಚಿಕೊಂಡಿದ್ದರು ಅವರು ಪಶ್ಚಿಮ ದ್ವಾರದ ಹೋಟೆಲುಗಳತ್ತ ತೆರಳಿದರು. ಮಾನವ ಸರಪಣಿ ರಚಿಸಿ ಪರಸ್ಪರ ರಕ್ಷಿಸಿಕೊಳ್ಳಿಎಂದು ವಿದ್ಯಾರ್ಥಿ ಸಂಘದ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಲಾಗಿದೆ.

No comments:

Advertisement