Wednesday, February 5, 2020

ನಿರ್ಭಯಾ ಪ್ರಕರಣ: ಗಲ್ಲು ಜಾರಿಗೆ ತಡೆ, ಫೆ.05ರ ಬುಧವಾರ ಹೈಕೋರ್ಟ್ ತೀರ್ಪು

ನಿರ್ಭಯಾ ಪ್ರಕರಣ: ಗಲ್ಲು ಜಾರಿಗೆ ತಡೆ,  ಫೆ.05ರ ಬುಧವಾರ ಹೈಕೋರ್ಟ್ ತೀರ್ಪು
ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಶಿಕ್ಷಿತ ಅಪರಾಧಿಗಳ ಮರಣದಂಡನೆ  ಜಾರಿಗೆ ವಿಚಾರಣಾ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರವು ಸಲ್ಲಿಸಿರುವ ಅರ್ಜಿಯ ಮೇಲಿನ ತನ್ನ ತೀರ್ಪನ್ನು ದೆಹಲಿ ಹೈಕೋರ್ಟ್ 2020 ಫೆಬ್ರುವರಿ 05ರ ಬುಧವಾರ ಪ್ರಕಟಿಸಲಿದೆ.

ನ್ಯಾಯಮೂರ್ತಿ ಸುರೇಶ ಕುಮಾರ್ ಕೈಟ್ ಅವರು ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯ ಮೇಲೆ ಶನಿವಾರ ಮತ್ತು ಭಾನುವಾರ ವಿಚಾರಣೆ ನಡೆಸಿದ ಬಳಿಕ ಫೆಬ್ರುವರಿ ೨ರಂದು ತನ್ನ ತೀರ್ಪನ್ನು ಕಾಯ್ದಿರಿಸಿದ್ದರು.

ತಿಹಾರ್ ಸೆರೆಮನೆಯಲ್ಲಿ ಇರಿಸಲಾಗಿರುವ ಪ್ರಕರಣದ ಶಿಕ್ಷಿತ ಅಪರಾಧಿಗಳಾದ ಮುಕೇಶ್ ಕುಮಾರ್ ಸಿಂಗ್ (೩೨), ಪವನ್ ಗುಪ್ತ (೨೫), ವಿನಯ್ ಕುಮಾರ್ ಶರ್ಮ (೨೬) ಮತ್ತು ಅಕ್ಷಯ್ ಕುಮಾರ್ (೩೧) ಅವರ ಮರಣದಂಡನೆಯ ಜಾರಿಯನ್ನು ಮುಂದಿನ ಆದೇಶದವರೆಗೆ ತಡೆ ಹಿಡಿದು ವಿಚಾರಣಾ ನ್ಯಾಯಾಲಯವು ಜನವರಿ ೩೧ರಂದು ನೀಡಿದ ಆದೇಶವನ್ನು ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರ ಹೈಕೋರ್ಟಿನಲ್ಲಿ ಪ್ರಶ್ನಿಸಿವೆ.

ಇದಕ್ಕೆ ಮುನ್ನ ನತದೃಷ್ಟ ಸಂತ್ರಸ್ತೆಯ ಹೆತ್ತವರು ಕೇಂದ್ರದ ಅರ್ಜಿ ಬಗ್ಗೆ ತ್ವರಿತವಾಗಿ ನಿರ್ಧರಿಸುವಂತೆ ನ್ಯಾಯಾಲಯವನ್ನು 2020 ಫೆಬ್ರುವರಿ 04ರ ಮಂಗಳವಾರ  ಆಗ್ರಹಿಸಿದ್ದರು. ಆದಷ್ಟೂ ಬೇಗ ಆದೇಶ ನೀಡುವುದಾಗಿ ನ್ಯಾಯಮೂರ್ತಿ ತಿಳಿಸಿದ್ದರು.

ವಿಚಾರಣಾ ನ್ಯಾಯಾಲಯವ ಜನವರಿ ೭ರಂದುಡೆತ್ ವಾರಂಟ್ಎಂಬುದಾಗಿಯೇ ಪರಿಗಣಿಸಲಾಗುವಬ್ಲ್ಯಾಕ್ ವಾರಂಟ್ನ್ನು ಜಾರಿಗೊಳಿಸಿ ಜನವರಿ ೨೨ರಂದು ಬೆಳಗ್ಗೆ ಗಂಟೆಗೆ ಎಲ್ಲ ನಾಲ್ಕೂ ಮಂದಿ ಶಿಕ್ಷಿತ ಅಪರಾಧಿಗಳನ್ನು ತಿಹಾರ್ ಸೆರೆಮನೆಯಲ್ಲಿ ಗಲ್ಲಿಗೇರಿಸಬೇಕು ಎಂದು ಆಜ್ಞಾಪಿಸಿತ್ತು. ಆದರೆ ಶಿಕ್ಷಿತ ಅಪರಾಧಿಗಳಲ್ಲಿ ಒಬ್ಬನ ಕ್ಷಮಾದಾನ ಕೋರಿಕೆ ಅರ್ಜಿ ಬಾಕಿ ಇದ್ದುದರಿಂದ ಜನವರಿ ೨೨ರಂದು ಅಪರಾಧಿಗಳನ್ನು ಗಲ್ಲಿಗೇರಿಸಲು ಸಾಧ್ಯವಾಗಿರಲಿಲ್ಲ.

ಬಳಿಕ ವಿಚಾರಣಾ ನ್ಯಾಯಾಲಯವು ಫೆಬ್ರುವರಿ ೧ರಂದು ಬೆಳಗ್ಗೆ ಗಂಟೆಗೆ ನಾಲ್ಕೂ ಮಂದಿ ಶಿಕ್ಷಿತ ಅಪರಾಧಿಗಳನ್ನು ಗಲ್ಲಿಗೇರಿಸಲು ದಿನಾಂಕ ಹಾಗೂ ಸಮಯ ನಿಗದಿ ಪಡಿಸಿ ಜನವರಿ ೧೭ರಂದು ಎರಡನೇ ಬಾರಿಗೆಡೆತ್ ವಾರಂಟ್ಜಾರಿಗೊಳಿಸಿತ್ತು.

ಆದರೆ ಪ್ರಕರಣದ ನಾಲ್ವರು ಅಪರಾಧಿಗಳ ಪೈಕಿ ಪವನ್, ವಿನಯ್ ಮತ್ತು ಅಕ್ಷಯ್ ಮೂವರು ತಮ್ಮ ಕಾನೂನುಬದ್ಧ ಪರಿಹಾರಗಳನ್ನು ಚಲಾಯಿಸಿಲ್ಲವಾದ ಕಾರಣ ವಿಷಯವನ್ನು ಅನಿರ್ದಿಷ್ಟ ಕಾಲ ಮುಂದೂಡಬೇಕು ಎಂದು ಆಗ್ರಹಿಸಿದ್ದನ್ನು ಅನುಸರಿಸಿ ವಿಚಾರಣಾ ನ್ಯಾಯಾಲಯವು ಜನವರಿ ೩೧ರಂದು ಸಂಜೆ ಫೆಬ್ರುವರಿ ೧ಕ್ಕೆ ನಿಗದಿಯಾಗಿದ್ದ ಗಲ್ಲು ಶಿಕ್ಷೆ ಜಾರಿಗೆ ಪುನಃ ತಡೆಯಾಜ್ಞೆ ನೀಡಿತು.
ಮುಕೇಶ್ ಮತ್ತು ವಿನಯ್ ಕ್ಷಮಾದಾನ ಕೋರಿಕೆ ಅರ್ಜಿಗಳನ್ನು ರಾಷ್ಟ್ರಪತಿಯವರು ತಿರಸ್ಕರಿಸಿದರೆ, ಪವನ್ ಇನ್ನೂ ಕ್ಷಮಾದಾನ ಕೋರಿಕೆ ಅರ್ಜಿಯನ್ನು ಸಲ್ಲಿಸಿಯೇ ಇಲ್ಲ. ಅಕ್ಷಯ್ ಫೆಬ್ರುವರಿ ೧ರಂದು ಸಲ್ಲಿಸಿದ ಕ್ಷಮಾದಾನ ಕೋರಿಕೆ ಅರ್ಜಿ ಇನ್ನೂ ಬಾಕಿ ಇದೆ.

ಮಧ್ಯೆ, ಫೆಬ್ರುವರಿ ೧ರಂದು ದೆಹಲಿ ಹೈಕೋರ್ಟ್ ಕದ ತಟ್ಟಿದ ಕೇಂದ್ರ ಮತ್ತು ದೆಹಲಿ ಸರ್ಕಾರ ಮರಣದಂಡನೆ ಜಾರಿಗೆ ತಡೆಯಾಜ್ಞೆ ನೀಡಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದವು.

ಕೇಂದ್ರ ಮತ್ತು ದೆಹಲಿ ಸರ್ಕಾರವನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ತುಷಾರ ಮೆಹ್ತ ಅವರುಕಾನೂನಿನ ಆದೇಶವನ್ನು ವಿಫಲಗೊಳಿಸಲು ಶಿಕ್ಷಿತ ಅಪರಾಧಿಗಳು ಗಲ್ಲು ಜಾರಿಯನ್ನು ವಿಳಂಬಗೊಳಿಸುವ ಉದ್ದೇಶಪೂರ್ವಕ ಸಂಚು ಹೆಣೆದಿದ್ದಾರೆ. ಇನ್ನಷ್ಟು ಸಮಯ ವಿಸ್ತರಣೆಗೆ ಅವರು ಅರ್ಹರಲ್ಲಎಂದು ಪ್ರತಿಪಾದಿಸಿದ್ದರು.

ಶಿಕ್ಷಿತ ಅಪರಾಧಿಗಳ ಪರ ಹಾಜರಾಗಿದ್ದ ವಕೀಲರುಕೇಂದ್ರವು ಎಂದೂ ವಿಚಾರಣಾ ನ್ಯಾಯಾಲಯದಲ್ಲಿ ಪ್ರಕರಣದ  ಕಲಾಪಗಳಲ್ಲಿ ಕಕ್ಷಿದಾರನಾಗಿ ಇರಲೇ ಇಲ್ಲ. ಮತ್ತು ವಿಳಂಬಕ್ಕೆ ಕಕ್ಷಿದಾರರನ್ನು ಆಪಾದಿಸುತ್ತಿರುವ ಸರ್ಕಾರ ಈಗಷ್ಟೇ ಎಚ್ಚೆತ್ತುಕೊಂಡಿದೆ. ಆದ್ದರಿಂದ ಅರ್ಜಿ ವಿಚಾರಣಾರ್ಹವೇ ಅಲ್ಲಎಂದು ವಾದಿಸಿದ್ದರು.

೨೩ರ ಹರೆಯದ ಅರೆ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ೨೦೧೨ರ ಡಿಸೆಂಬರ್ ೧೬-೧೭ರ ರಾತ್ರಿ ದಕ್ಷಿಣ ದೆಹಲಿಯ ಚಲಿಸುವ ಬಸ್ಸೊಂದರಲ್ಲಿ ಮಂದಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಲ್ಲದೆ ಕ್ರೂರವಾಗಿ ಚಿತ್ರಹಿಂಸೆ ನೀಡಿ ರಸ್ತೆಗೆ ಎಸೆದಿದ್ದರು. ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಜೀವನ್ಮರಣ ಹೋರಾಟದ ಬಳಿಕ ೨೦೧೨ರ ಡಿಸೆಂಬರ್ ೨೯ರಂದು ಸಿಂಗಾಪುರ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಮೃತರಾಗಿದ್ದರು.

ಮಂದಿ ಆರೋಪಿಗಳಲ್ಲಿ ಒಬ್ಬನಾದ ರಾಮ್ ಸಿಂಗ್ ವಿಚಾರಣಾ ಕಾಲದಲ್ಲೇ ತಿಹಾರ್ ಸೆರೆಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದನೆಂದು ಆಪಾದಿಸಲಾಗಿದ್ದು, ೬ನೇ ಆರೋಪಿಯನ್ನು ಅಪ್ರಾಪ್ತ ಬಾಲಕ ಎಂಬ ನೆಲೆಯಲ್ಲಿ ಮೂರುವರ್ಷಗಳ ಸುಧಾರಣಾ ಕಸ್ಟಡಿಗೆ ಗುರಿಪಡಿಸಿ ಬಳಿಕ ಅಜ್ಞಾತ ಸ್ಥಳದಲ್ಲಿ ಬಿಡುಗಡೆ ಮಾಡಲಾಗಿತ್ತು.

ದೆಹಲಿ ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯ ನಾಲ್ವರು ಅಪರಾಧಿಗಳಿಗೆ ನೀಡಿದ್ದ ಮರಣದಂಡನೆಯನ್ನು ಸುಪ್ರೀಂಕೋರ್ಟ್ ೨೦೧೭ರಲ್ಲಿ ಎತ್ತಿ ಹಿಡಿದಿತ್ತು.

ದೇಶಾದ್ಯಂತ ಪ್ರತಿಭಟನೆಗಳಿಗೆ ಕಾರಣವಾಗಿದ್ದ ಪ್ರಕರಣ ಅತ್ಯಾಚಾರ ಸಂಬಂಧಿತ ಕಾನೂನು ಪರಿಷ್ಕರಣೆಗೂ ದಾರಿ ಮಾಡಿತ್ತು.

No comments:

Advertisement