ಮುಖ್ಯಮಂತ್ರಿ
ಅಭ್ಯರ್ಥಿ ಹೆಸರು: ಬಿಜೆಪಿಗೆ
ಕೇಜ್ರಿವಾಲ್ ಸವಾಲು
ನವದೆಹಲಿ:
ತನ್ನ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಘೋಷಿಸುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು 2020 ಫೆಬ್ರುವರಿ 04ರ ಮಂಗಳವಾರ ಭಾರತೀಯ
ಜನತಾ ಪಕ್ಷಕ್ಕೆ (ಬಿಜೆಪಿ) ರ ಸವಾಲು ಹಾಕಿದರು
ಮತ್ತು ’ಯಾರನ್ನಾದರೂ ಹೆಸರಿಸಿ, ನಾನು ಅವರೊಂದಿಗೆ ಚರ್ಚೆಗೆ ಸಿದ್ಧ’ ಎಂದು ಘೋಷಿಸಿದರು.
ವಿರೋಧ
ಪಕ್ಷವು 2020 ಫೆಬ್ರುವರಿ
05ರ ಬುಧವಾರ ಮಧ್ಯಾಹ್ನ
೧ ಗಂಟೆಯ ಒಳಗಾಗಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಬೇಕು. ಯಾವುದೇ ಹೆಸರು ಪ್ರಕಟವಾಗದೇ ಇದ್ದಲ್ಲಿ ’ನಾನು ಇನ್ನೊಂದು ಪತ್ರಿಕಾಗೋಷ್ಠಿ ನಡೆಸುತ್ತೇನೆ’ ಎಂದು
ಆಮ್ ಆದ್ಮಿ ಪಕ್ಷದ ನಾಯಕ ಹೇಳಿದರು.
ಬಿಜೆಪಿಯು
ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಘೋಷಿಸಬೇಕು ಎಂದು ದೆಹಲಿಯ ಜನತೆ ಬಯಸುತ್ತಾರೆ ಮತ್ತು ನಾನು ಆ ಮುಖ್ಯಮಂತ್ರಿ ಅಭ್ಯರ್ಥಿಯ
ಜೊತೆಗೆ ಚರ್ಚೆ ನಡೆಸಲು ಸಿದ್ಧನಿದ್ದೇನೆ. ಚರ್ಚೆ ಅವರು ಆಯ್ಕೆ ಮಾಡುವ ಯಾವುದೇ ಸ್ಥಳದಲ್ಲಿ ನಡೆಯಬಹುದು’
ಎಂದು ಅರವಿಂದ ಕೇಜ್ರಿವಾಲ್ ಅವರು ಆಮ್ ಆದ್ಮಿ ಪಕ್ಷದ (ಆಪ್) ಚುನಾವಣಾ ಪ್ರಣಾಳಿಕೆ ಬಿಡುಗಡೆಗಾಗಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಫೆಬ್ರುವರಿ
೮ರಂದು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಆಪ್ ನಾಯಕ ಈ ಸವಾಲು ಎಸೆದರು.
‘ಅವರ
ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದಾಗಿ ತಿಳಿಯಲು ಜನರು ಬಯಸಿದ್ದಾರೆ. ಅವರ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದು ಗೊತ್ತಿಲ್ಲದೇ ಇದ್ದರೆ ಅವರಿಗೆ ತಾವು ಯಾಕೆ ವೋಟು ನೀಡಬೇಕು ಎಂದು ಜನರು ಪ್ರಶ್ನಿಸುತ್ತಿದ್ದಾರೆ. ನೀವು ನಮಗೆ ವೋಟು ಕೊಡಿ, ನಾವು ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂದು ನಿರ್ಧರಿಸುತ್ತೇವೆ ಎಂದು ಅಮಿತ್ ಶಾ ಹೇಳುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ
ಯಾರು ಎಂದು ನಿರ್ಧರಿಸುವುದು ಜನತೆ’ ಎಂದು ಕೇಜ್ರಿವಾಲ್ ಹೇಳಿದರು.
ಪಕ್ಷದ
ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ತಡೆ ಹಿಡಿಯುವ ಮೂಲಕ ಅಮಿತ್ ಶಾ ಅವರು ದೆಹಲಿಯ
ಜನತೆಯನ್ನು ’ಖಾಲಿ ಚೆಕ್’ ನೀಡುವಂತೆ ಆಗ್ರಹಿಸುತ್ತಿದ್ದಾರೆ ಎಂದು ಆಪ್ ನಾಯಕ ಟೀಕಿಸಿದರು.
ಬಿಜೆಪಿಗೆ
ಮತ ನೀಡಿದ ಬಳಿಕ ಅಮಿತ್ ಶಾ ಯಾರಾದರೂ ಒಬ್ಬ
ಅವಿದ್ಯಾವಂತ ಮತ್ತು ಅದಕ್ಷ ವ್ಯಕ್ತಿಯನ್ನು ಹೆಸರಿಸಿದರೆ ನಾವು ಏನು ಮಾಡುವುದು ಎಂದು ದೆಹಲಿಯ ಜನರು ಹೇಳುತ್ತಿದ್ದಾರೆ. ಹಾಗೆ ಮಾಡುವುದು ದೆಹಲಿಯ ಜನತೆಗೆ ಬಗೆಯುವ ದ್ರೋಹವಾಗುತ್ತದೆ ಎಂದು ಕೇಜ್ರಿವಾಲ್ ನುಡಿದರು.
‘ಆದ್ದರಿಂದ
ನಾವು ಅವರಿಗೆ ನಾಳೆ ಮಧ್ಯಾಹ್ನ ೧ ಗಂಟೆಯವರೆಗೆ ಕಾಲಾವಕಾಶ
ನೀಡುತ್ತೇವೆ. ಅಷ್ಟರ ಒಳಗಾಗಿ ಅವರು ತಮ್ಮ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಘೋಷಿಸಿದರೆ, ನಾನು ಆ ವ್ಯಕ್ತಿಯ ಜೊತೆಗೆ
ಚರ್ಚೆ ನಡೆಸಲು ಸಿದ್ಧನಿದ್ದೇನೆ. ಚರ್ಚೆಯ ರೂಪುರೇಷೆಗಳನ್ನು ನಾವು ಸಿದ್ಧ ಪಡಿಸುತ್ತೇವೆ. ಮತ್ತು ಅವರು ಹೆಸರನ್ನು ಪ್ರಕಟಿಸದೇ ಇದ್ದಲ್ಲಿ, ನಾನು ಇದೇ ಜಾಗದಲ್ಲಿ ನಿಮ್ಮನ್ನು ಭೇಟಿ ಮಾಡಲಿದ್ದೇನೆ ಮತ್ತು ಇನ್ನೊಂದು ಪತ್ರಿಕಾಗೋಷ್ಠಿ ನಡೆಸಲಿದ್ದೇನೆ’ ಎಂದು
ದೆಹಲಿ ಮುಖ್ಯಮಂತ್ರಿ ಹೇಳಿದರು.
ಸೋಮವಾರ
ಆಮ್ ಆದ್ಮಿ ಪಕ್ಷವು ಅಮೆರಿಕದ ಕುಸ್ತಿಪಟು ಮತ್ತು ನಟ ಜಾನ್ ಚೆನಾ
ಅವರ ಭಾವಚಿತ್ರವನ್ನು ಟ್ವಿಟರಿನಲ್ಲಿ ಪ್ರಕಟಿಸಿ ಇದೇ ವಿಷಯದ ಮೇಲೆ ಬಿಜೆಪಿಯನ್ನು ಅಣಕಿಸಿತ್ತು.
’ಕೊನೆಗೂ ಬಿಜೆಪಿಗೆ ಮುಖ್ಯಮಂತ್ರಿ ಅಭ್ಯರ್ಥಿ ಲಭಿಸಿದರು.. ಅದು ಜಾನ್ ಚೆನಾ!! ಏಕೆಂದರೆ ನೀವು ಅವರನ್ನು ನೋಡಲಾರಿರಿ’
ಎಂದು ಆಮ್ ಆದ್ಮಿ ಪಕ್ಷವು ’ಕೇಜ್ರಿವಾಲ್ ವರ್ಸಸ್ ಕೌನ್’ ಶೀರ್ಷಿಕೆಯ ಅಡಿಯಲ್ಲಿ ಪ್ರಕಟಿಸಿದ ಟ್ವೀಟಿನಲ್ಲಿ ಚೆನಾ ಭಾವಚಿತ್ರದ ಕೆಳಗೆ ಅಡಿಬರಹ ಪ್ರಕಟಿಸಿತ್ತು.
ರಾಷ್ಟ್ರೀಯ
ರಾಜಧಾನಿಯ ಅಭಿವೃದ್ಧಿ ಮತ್ತು ನಗರದ ವಿವಿಧ ಕಡೆಗಳಲ್ಲಿ ನಡೆಯುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆಗಳು ಸೇರಿದಂತೆ ಹಲವಾರು ವಿಷಯಗಳ ವಿಚಾರವಾಗಿ ಬಿಜೆಪಿ ಮತ್ತು ಕೇಜ್ರಿವಾಲ್ ವಾಕ್ ಸಮರ ನಡೆಸುತ್ತಿದ್ದಾರೆ.
ಹಲವಾರು
ಸಂದರ್ಭಗಳಲ್ಲಿ ಕೇಸರಿ ಪಕ್ಷವು ಕೇಜ್ರಿವಾಲ್ ಅವರನ್ನು ’ಭಯೋತ್ಪಾದಕ’
ಎಂಬುದಾಗಿ ಬಣ್ಣಿಸಿ ತರಾಟೆಗೆ ತೆಗೆದುಕೊಂಡಿದೆ.
ಸೋಮವಾರ
ಹನುಮಾನ್ ಚಾಲೀಸಾವನ್ನು ಪಠಿಸಿದ ದೆಹಲಿ ಮುಖ್ಯಮಂತ್ರಿ ಹಿಂದುತ್ವದ ಬಗ್ಗೆ ತಾನು ಬಿಜೆಪಿಯಿಂದ ಅನುಮೋದನೆ ಪಡೆಯಬೇಕಾದ ಅಗತ್ಯ ಇಲ್ಲ ಎಂದು ಹೇಳಿದ್ದರು.
ಶಾಹೀನ್
ಬಾಗ್ ರಸ್ತೆ ತಡೆ ಚಳವಳಿ ವಿಚಾರವಾಗಿಯೂ ಕೇಜ್ರಿವಾಲ್ ಅವರು ಬಿಜೆಪಿಯನ್ನು ಟೀಕಿಸಿದ್ದರು. ಪ್ರತಿಭಟನೆಯನ್ನು ತನ್ನ ಲಾಭಕ್ಕೆ ಬಳಸಿಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ ಎಂದು ಅವರು ಆಪಾದಿಸಿದ್ದರು.
No comments:
Post a Comment