My Blog List

Saturday, February 1, 2020

ನಿರ್ಭಯಾ ಪ್ರಕರಣ: ಹಂತಕರ ಗಲ್ಲು ಜಾರಿಗೆ ತಡೆ

ನಿರ್ಭಯಾ ಪ್ರಕರಣ: ಹಂತಕರ ಗಲ್ಲು ಜಾರಿಗೆ ತಡೆ
ದೆಹಲಿ ಕೋರ್ಟಿನಲ್ಲೇ  ಬಿಕ್ಕಳಿಸಿದ  ಆಶಾದೇವಿ
ನವದೆಹಲಿ: ೨೦೧೨ರ ದೆಹಲಿ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣದ ನಾಲ್ವರು ಶಿಕ್ಷಿತ ಅಪರಾಧಿಗಳನ್ನು ಫೆಬ್ರುವರಿ ೧ರ ಶನಿವಾರ ಬೆಳಗ್ಗೆ ಗಂಟೆಗೆ ಗಲ್ಲಿಗೇರಿಸಲು ನೀಡಲಾಗಿದ್ದ ಆದೇಶದ ಜಾರಿಗೆ ದೆಹಲಿಯ ವಿಚಾರಣಾ ನ್ಯಾಯಾಲಯವು  2020 ಜನವರಿ 31ರ ಶುಕ್ರವಾರ  ಸಂಜೆ ತಡೆಯಾಜ್ಞೆ ನೀಡಿತು.

ಮರಣದಂಡನೆ ಜಾರಿಯನ್ನು ತಡೆ ಹಿಡಿಯುವಂತೆ ಕೋರಿ ಶಿಕ್ಷಿತ ಅಪರಾಧಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ,  ಅರ್ಜಿಯ ಕುರಿತು ಮುಂದಿನ ಆದೇಶ ನೀಡುವವರೆಗೆ ಗಲ್ಲು ಜಾರಿಯನ್ನು ತಡೆಹಿಡಿದಿರುವುದಾಗಿ ಪ್ರಕಟಿಸಿತು.

ಪ್ರಕರಣದಲ್ಲಿ ದಾರುಣವಾಗಿ ಸಾವನ್ನಪ್ಪಿದ್ದ ನತದೃಷ್ಟ ಯುವತಿಯ ತಾಯಿ ಆಶಾದೇವಿ ಅವರು ನ್ಯಾಯಾಲಯವು ಗಲ್ಲು ಶಿಕ್ಷೆಯ ಜಾರಿಗೆ ತಡೆಯಾಜ್ಞೆ ನೀಡಿದ ಕೆಲವೇ ನಿಮಿಷಗಳಲ್ಲಿ ನ್ಯಾಯಾಲಯದಲ್ಲೇ ಬಿಕ್ಕಳಿಸಿ ಅತ್ತ ಘಟನೆಯೂ ಘಟಿಸಿತು.

ಶಿಕ್ಷಿತ ಅಪರಾಧಿಗಳು ಮರಣದಂಡನೆ ಜಾರಿಯನ್ನು ಅನಿರ್ದಿಷ್ಟ ಅವಧಿಯವರೆಗೆ ಮುಂದೂಡುವಂತೆ ತಮ್ಮ ಅರ್ಜಿಯಲ್ಲಿ ಮನವಿ ಮಾಡಿದ್ದರು ಎಂದು ಶಿಕ್ಷಿತರ ಪರ ವಕೀಲ ಎಪಿ ಸಿಂಗ್ ಹೇಳಿದರು. ’ ಶಿಕ್ಷಿತರು ಭಯೋತ್ಪಾದಕರಲ್ಲಎಂದು ಅವರು ನುಡಿದರು.

ಸೆರೆಮನೆ ನಿಯಮಾವಳಿಯ ೮೩೬ನೇ ನಿಯಮವನ್ನು ಉಲ್ಲೇಖಿಸಿದ ವಕೀಲರುಒಬ್ಬನಿಗಿಂತ ಹೆಚ್ಚು ವ್ಯಕ್ತಿಗಳು ಮರಣದಂಡನೆಗೆ ಗುರಿಯಾಗಿರುವ ಪ್ರಕರಣಗಳಲ್ಲಿ ಎಲ್ಲ ಶಿಕ್ಷಿತರೂ ತಮ್ಮ ಕಾನೂನುಬದ್ಧ ಪರಿಹಾರಗಳ ಆಯ್ಕೆಯನ್ನು ಚಲಾಯಿಸುವವರೆಗೂ ಗಲ್ಲು ಶಿಕ್ಷೆಯನ್ನು ಜಾರಿಗೊಳಿಸುವಂತಿಲ್ಲ ಎಂದು ನಿಯಮ ಹೇಳುತ್ತದೆಎಂದು ವಿವರಿಸಿದರು.

ಶಿಕ್ಷಿತರಲ್ಲಿ ಒಬ್ಬನಾಗಿರುವ ಪವನ್ ಕುಮಾರ್ ಗುಪ್ತ ತನ್ನ ಅಪ್ರಾಪ್ತ ವಯಸ್ಸಿನ ಪ್ರತಿಪಾದನೆಯನ್ನು ತಿರಸ್ಕರಿಸಿದ್ದರ ವಿರುದ್ಧ ಸುಪ್ರಿಂಕೋರ್ಟಿನಲ್ಲಿ ಪುನರ್ ಪರಿಶೀಲನಾ ಅರ್ಜಿಯನ್ನು ಸಲ್ಲಿಸಿದ್ದು, ಅಕ್ಷಯ್ ಕುಮಾರ್ ಸಲ್ಲಿಸಿದ ಕುರೇಟಿವ್ ಅರ್ಜಿ ತಿರಸ್ಕೃತಗೊಂಡಿದೆ. ಸುಪ್ರೀಂಕೋರ್ಟಿನ ಆದೇಶ ಲಭಿಸಿದ ಬಳಿಕ ನಾನು ಕ್ಷಮಾದಾನ ಕೋರಿಕೆ ಅರ್ಜಿಯನ್ನು ಸಲ್ಲಿಸಲಿದ್ದೇನೆಎಂದು ಪವನ್ ಕುಮಾರ್ ಗುಪ್ತನನ್ನು ಪ್ರತಿನಿಧಿಸಿದ ವಕೀಲ ಸಿಂಗ್ ನುಡಿದರು.

ಏನಿದ್ದರೂ, ಪವನ್ ಗುಪ್ತ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ಬಳಿಕ ತಿರಸ್ಕರಿಸಿತು.

ಇನ್ನೊಬ್ಬ ಶಿಕ್ಷಿತ ಅಪರಾಧಿ ಮುಕೇಶ್ ಸಿಂಗ್ನನ್ನು ಪ್ರತಿನಿಧಿಸುತ್ತಿರುವ ವಕೀಲರಾದ ವೃಂದಾ ಗ್ರೋವರ್ ಅವರು ಕೂಡಾ ಎಪಿ ಸಿಂಗ್ ಅವರ ಜೊತೆಗೂಡಿ, ’ಪ್ರಕರಣದಲ್ಲಿ ಸಾಮಾನ್ಯ ಶಿಕ್ಷೆ ವಿಧಿಸಲಾಗಿದ್ದು, ಅದರಲ್ಲಿ ತನ್ನ ಕಕ್ಷಿದಾರ ಆರೋಪಿಯೂ ಸೇರಿದ್ದಾನೆ. ಮರಣದಂಡನೆ ಜಾರಿ ಆದೇಶವು ಜಂಟಿ ಆದೇಶವಾಗಿದೆ. ನನ್ನ ಕಕ್ಷಿದಾರನನ್ನು ಗಲ್ಲಿಗೇರಿಸುವಂತಿಲ್ಲ. ಒಬ್ಬನ ಗಲ್ಲು ಶಿಕ್ಷೆಯನ್ನು ಇನ್ನೊಬ್ಬನ ಶಿಕ್ಷೆಯಿಂದ ಪ್ರತ್ಯೇಕಿಸುವಂತಿಲ್ಲ. ಆದ್ದರಿಂದ ಗಲ್ಲು ಜಾರಿಗೆ ತಡೆ ನೀಡಬೇಕುಎಂದು ಗ್ರೋವರ್ ವಾದಿಸಿದರು.

ಮುಕೇಶ್ ಸಲ್ಲಿಸಿದ್ದ ಕ್ಷಮಾದಾನ ಕೋರಿಕೆ ಅರ್ಜಿಯನ್ನು ತಿರಸ್ಕರಿಸಿದ ರಾಷ್ಟ್ರಪತಿಯವರ ಆದೇಶವನ್ನು ಪ್ರಶ್ನಿಸಿದ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಬುಧವಾರ ತಿರಸ್ಕರಿಸಿದ್ದು, ಬಳಿಕ ಮುಕೇಶ್ಗೆ ಯಾವುದೇ ಕಾನೂನುಬದ್ಧ ಪರಿಹಾರದ ಮಾರ್ಗ ಉಳಿದಿಲ್ಲ.

ಫೆಬ್ರುವರಿ ೧ರ ಮರಣದಂಡನೆ ಜಾರಿಯನ್ನು ತಡೆ ಹಿಡಿಯುವಂತೆ ಕೋರಿ ಸಲ್ಲಿಸಿದ ಅರ್ಜಿ ಸ್ವೀಕಾರಾರ್ಹವೇ ಅಲ್ಲ ಎಂಬುದಾಗಿ ಪ್ರಾಸೆಕ್ಯೂಷನ್ ಮಂಡಿಸಿದ ವಾದಕ್ಕೆ ವಿರುದ್ಧವಾಗಿ ಶಿಕ್ಷಿತರ ಪರವಾಗಿ ವಾದಗಳನ್ನು ಮಂಡಿಸಿದರು.

ಫೆಬ್ರುವರಿ ೧ರಂದು ಮರಣದಂಡನೆ ಜಾರಿಗೆ ದಿನಾಂಕ ನಿಗದಿಗೊಳಿಸಿದ ಆದೇಶವು, ರಾಷ್ಟ್ರಪತಿಯವರ ಮುಂದೆ ಕ್ಷಮಾದಾನ ಕೋರಿಕೆ ಸಲ್ಲಿಸಿರುವ ವಿನಯ್ ಶರ್ಮನನ್ನು ಹೊರತು ಪಡಿಸಿ, ಇತರ ಶಿಕ್ಷಿತರಿಗೆ ಈಗಲೂ ಅನ್ವಯಯೋಗ್ಯವಾಗಿಯೇ ಇದೆ. ವಿನಯ್ ಶರ್ಮನನ್ನು ಹೊರತು ಪಡಿಸಿ ಉಳಿದವರನ್ನು ಗಲ್ಲಿಗೇರಿಸದಂತೆ ಯಾವ ಕಾನೂನೂ ಪ್ರತಿಬಂಧಿಸುವುದಿಲ್ಲ ಎಂದು ಪಬ್ಲಿಕ್ ಪ್ರಾಸೆಕ್ಯೂಟರ್ ಇರ್ಫಾನ್ ಅಹ್ಮದ್ ನ್ಯಾಯಾಲಯಕ್ಕೆ ತಿಳಿಸಿದ್ದರು.

ನಾಲ್ಕೂ ಮಂದಿ ಶಿಕ್ಷಿತರನ್ನು ತಿಹಾರ್ ಸೆರೆಮನೆಯಲ್ಲಿ ಗಲ್ಲಿಗೇರಿಸಲು ಫೆಬ್ರುವರಿ ೧ರ ದಿನಾಂಕ ಬೆಳಗಿನ೬ ಗಂಟೆಯನ್ನು ನಿಗದಿಪಡಿಸಿ ಡೆತ್ ವಾರಂಟ್ ಎಂಬುದಾಗಿ ಪರಿಗಣಿಸಲಾಗುವಬ್ಲ್ಯಾಕ್ ವಾರಂಟ್ನ್ನು ವಿಚಾರಣಾ ನ್ಯಾಯಾಲಯವು ಜನವರಿ ೧೭ರಂದು ಎರಡನೇ ಬಾರಿಗೆ ಹೊರಡಿಸಿತ್ತು.
ನಾಲ್ಕು ಮಂದಿ ಅಪರಾಧಿಗಳಾದ ಮುಕೇಶ್ ಕುಮಾರ್ ಸಿಂಗ್ (೩೨), ಪವನ್ ಗುಪ್ತ (೨೫), ವಿನಯ್ ಕುಮಾರ್ ಶರ್ಮ (೨೬) ಮತ್ತು ಅಕ್ಷಯ್ ಕುಮಾರ್ ಸಿಂಗ್ (೩೧) ಅವರಿಗೆ ೨೦೧೨ರಲ್ಲಿ ಕ್ರೂರ ಕೃತ್ಯ ನಡೆದ ಒಂದು ವರ್ಷದ ಒಳಗಾಗಿಯೇ ತ್ವರಿತ ನ್ಯಾಯಾಲಯವು ಮರಣದಂಡನೆಯನ್ನು ವಿಧಿಸಿತ್ತು. ಕ್ರೂರ ಘಟನೆಯನ್ನು ಪ್ರತಿಭಟಿಸಿ, ಇಡೀ ದೇಶದಲ್ಲಿ ಜನರು ಬೀದಿಗಳಿಗೆ ಇಳಿದಿದ್ದರು.

ಪರಿಣಾಮವಾಗಿ
ಲೈಂಗಿಕ ಹಲ್ಲೆಗೆ ಸಂಬಂಧಿಸಿದ ಕಾನೂನುಗಳು ಕೂಡಾ ಪರಿಷ್ಕರಣೆಗೊಂಡಿದ್ದವು.
ಪ್ರಕರಣದಲ್ಲಿ ದಾರುಣವಾಗಿ ಸಾವನ್ನಪ್ಪಿದ ೨೩ರ ಹರೆಯದ ಫಿಸಿಯೋಥೆರೆಪಿ ವಿದ್ಯಾರ್ಥಿನಿ ೨೦೧೨ರ ಡಿಸೆಂಬರ್ ೧೬ರ ಮಧ್ಯರಾತ್ರಿ ದೆಹಲಿಯ ಚಲಿಸುವ ಬಸ್ಸಿನಲ್ಲಿ ಮಂದಿಯಿಂದ ಸಾಮೂಹಿಕ ಅತ್ಯಾಚಾರ ಮತ್ತು ಕ್ರೂರ ಚಿತ್ರಹಿಂಸೆಗೆ ಈಡಾಗಿದ್ದಳು. ತೀವ್ರವಾಗಿ ಗಾಯಗೊಂಡ ಸ್ಥಿತಿಯಲ್ಲಿ ರಸ್ತೆಗೆ ಎಸೆಯಲ್ಪಟ್ಟಿದ್ದ ಆಕೆ ಜೀವನ್ಮರಣ ಹೋರಾಟದ ಬಳಿಕ ಸಿಂಗಾಪುರದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು.

ಕೋರ್ಟಿನಲ್ಲಿ ಅತ ತಾಯಿ: ಗಲ್ಲು ಜಾರಿಗೆ ತಡೆ ನೀಡಿ ವಿಚಾರಣಾ ನ್ಯಾಯಾಲಯವು ಶುಕ್ರವಾರ ಸಂಜೆ ಆದೇಶ ನೀಡಿದ ಕೆಲವೇ ಕ್ಷಣಗಳಲ್ಲಿ, ಹತಭಾಗ್ಯ ತರುಣಿಯ ತಾಯಿ ಆಶಾದೇವಿ ಅವರು ನ್ಯಾಯಾಲಯದಲ್ಲೇ ಬಿಕ್ಕಳಿಸಿ ಅತ್ತರು.

'ಶಿಕ್ಷಿತರ ವಕೀಲ ಎಪಿ ಸಿಂಗ್ ಎಂದಿಗೂ ಗಲ್ಲು ಶಿಕ್ಷೆ ಜಾರಿಯಾಗುವುದಿಲ್ಲ’ ನನ್ನತ್ತ ಬೆರಳು ತೋರಿಸಿ ಅಪಹಾಸ್ಯ ಮಾಡಿದರು ಎಂದು  ದುಃಖಿಸಿದರು.
ಗಲ್ಲು ಶಿಕ್ಷೆ ತಪ್ಪಿಸಕೊಳ್ಳಲು ಶಿಕ್ಷಿತ ಅಪರಾಧಿಗಳು ಹಲವಾರು ಅರ್ಜಿಗಳನ್ನು ಸಲ್ಲಿಸುವ ಮೂಲಕ ನಡೆಸಿದ್ದ ಪ್ರಯತ್ನಗಳ ಮಧ್ಯೆಯೇ ವಧಾಕಾರರು ಗುರುವಾರವೇ ಶಿಕ್ಷಿತರನ್ನು ಗಲ್ಲಿಗೇ ಏರಿಸುವ ಸಲುವಾಗಿ ತಿಹಾರ್ ಜೈಲಿಗೆ ಆಗಮಿಸಿದ್ದರು.

No comments:

Advertisement