ರಾಜೀವ್
ಬನ್ಸಲ್ ಏರ್ ಇಂಡಿಯಾ ಮುಖ್ಯಸ್ಥ
ನವದೆಹಲಿ:
ಹಿರಿಯ ಅಧಿಕಾರಿ ರಾಜೀವ್ ಬನ್ಸಲ್ ಅವರನ್ನು 2020 ಫೆಬ್ರುವರಿ 13ರ ಗುರುವಾರ ಏರ್
ಇಂಡಿಯಾದ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕರಾಗಿ (ಸಿಎಂಡಿ) ನೇಮಿಸಲಾಗಿದೆ ಎಂದು ಸಿಬ್ಬಂದಿ ಸಚಿವಾಲಯದ ಆದೇಶವೊಂದು ತಿಳಿಸಿತು.
ನಾಗಾಲ್ಯಾಂಡ್
ಕೇಡರಿನ ೧೯೮೮ರ ತಂಡದ ಐಎಎಸ್ ಅಧಿಕಾರಿ ಬನ್ಸಲ್ ಅವರು ಪ್ರಸ್ತುತ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದಲ್ಲಿ ಅಡಿಷನಲ್ ಕಾರ್ಯದರ್ಶಿಯಾಗಿದ್ದಾರೆ.
ಸಂಪುಟದ
ನೇಮಕಾತಿ ಸಮಿತಿಯು ರಾಜೀವ್ ಬನ್ಸಲ್ ಅವರನ್ನು ಏರ್ ಇಂಡಿಯಾದ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕರಾಗಿ ನೇಮಿಸಲು ಅನುಮೋದನೆ ನೀಡಿದೆ ಎಂದು ಆದೇಶವು ತಿಳಿಸಿದೆ. ಹೆಚ್ಚಿನ ವಿವರಗಳನ್ನು ಅದು ನೀಡಿಲ್ಲ.
ಅಶ್ವನಿ
ಲೋಹಾನಿ ಅವರು ತಮ್ಮ ಅವಧಿಯನ್ನು ಪೂರ್ಣಗೊಳಿಸಿದ ಬಳಿಕ ಹುದ್ದೆಯು ಖಾಲಿ ಬಿದ್ದಿತ್ತು.
No comments:
Post a Comment