ನಿರ್ಭಯಾ
ಪ್ರಕರಣ: ಹೊಸ ಡೆತ್ ವಾರಂಟ್ಗೆ ಮೊರೆ
ದೆಹಲಿ
ಕೋರ್ಟಿಗೆ ಪಾಲಕರ ಅರ್ಜಿ, ಇಂದು ವಿಚಾರಣೆ
ನವದೆಹಲಿ:
ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಶಿಕ್ಷಿತ ಅಪರಾಧಿಗಳ ಮರಣದಂಡನೆ ಜಾರಿಗಾಗಿ ಹೊಸದಾಗಿ ಡೆತ್ ವಾರಂಟ್ ಹೊರಡಿಸುವಂತೆ ಕೋರಿ, ಸಂತ್ರಸ್ಥೆಯ ಪಾಲಕರು ಮತ್ತು ದೆಹಲಿ ಸರ್ಕಾರ 2020 ಫೆಬ್ರುವರಿ 11ರ ಮಂಗಳವಾರ ದೆಹಲಿ
ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಅದಕ್ಕೆ ಉತ್ತರ ನೀಡುವಂತೆ ನ್ಯಾಯಾಲಯವು ಶಿಕ್ಷಿತ ಅಪರಾಧಿಗಳಿಗೆ ನೋಟಿಸ್ ನೀಡಿತು.
ಅಡಿಷನಲ್
ಸೆಷನ್ಸ್ ನ್ಯಾಯಾಧೀಶ ಧಮೇಂದ್ರ ರಾಣಾ ಅವರು ಎಲ್ಲ ಶಿಕ್ಷಿತ ಅಪರಾಧಿಗಳೂ ನೋಟಿಸ್ ಜಾರಿ ಮಾಡಿದ್ದು, ಪ್ರಕರಣವನ್ನು ಬುಧವಾರ (ಫೆಬ್ರುವರಿ ೧೨) ವಿಚಾರಣೆಗೆ ಎತ್ತಿಕೊಳ್ಳುವುದಾಗಿ ತಿಳಿಸಿದರು.
ಶಿಕ್ಷಿತ
ಅಪರಾಧಿಗಳು ಕಾನೂನನ್ನು ಅಣಕಿಸುತ್ತಿದ್ದಾರೆ ಮತ್ತು ವ್ಯರ್ಥಗೊಳಿಸುತ್ತಿದ್ದಾರೆ ಎಂದು ಸಂತ್ರಸ್ಥೆಯ ಪಾಲಕರು ನ್ಯಾಯಾಲಯಕ್ಕೆ ತಿಳಿಸಿದರು.
ಶಿಕ್ಷಿತ
ಅಪರಾಧಿಗಳನ್ನು ಗಲ್ಲಿಗೆ ಏರಿಸಲು ಹೊಸದಾಗಿ ದಿನಾಂಕ ನಿಗದಿ ಪಡಿಸುವಂತೆ ಕೋರಿ ಅಧಿಕಾರಿಗಳು ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಮಂಗಳವಾರ ಸುಪ್ರೀಂಕೋರ್ಟ್ ಅನುಮತಿ ನೀಡಿದ ಬಳಿಕ ಹೊಸ ಡೆತ್ ವಾರಂಟ್ ಜಾರಿ ಕೋರಿ ಅರ್ಜಿ ಸಲ್ಲಿಸಲಾಯಿತು.
ಗಲ್ಲು
ಶಿಕ್ಷೆ ಜಾರಿಗೆ ತಡೆಯಾಜ್ಞೆ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರವು ಸಲ್ಲಿಸಿದ ಅರ್ಜಿಗೆ ಉತ್ತರ ನೀಡುವಂತೆ ಕೂಡಾ ನ್ಯಾಯಮೂರ್ತಿ ಆರ್. ಭಾನುಮತಿ ನೇತೃತ್ವದ ತ್ರಿಸದಸ್ಯ ಸುಪ್ರೀಂಕೋರ್ಟ್ ಪೀಠವು ನಾಲ್ವರೂ ಶಿಕ್ಷಿತ ಅಪರಾಧಿಗಳಿಗೆ ನೋಟಿಸ್ ಜಾರಿ ಮಾಡಿತು.
ಕೇಂದ್ರ
ಮತ್ತು ದೆಹಲಿ ಸರ್ಕಾರ ಸಲ್ಲಿಸಿದ ಅರ್ಜಿಗಳು ಸುಪ್ರೀಂಕೋರ್ಟಿನಲ್ಲಿ ಬಾಕಿ ಉಳಿದಿರುವುದು ಹೊಸದಾಗಿ ಡೆತ್ ವಾರಂಟ್ ಜಾರಿಗೊಳಿಸಲು ವಿಚಾರಣಾ ನ್ಯಾಯಾಲಯಕ್ಕೆ ಅಡ್ಡಿಯಾಗುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಅಶೋಕ ಭೂಷಣ್ ಮತ್ತು ಎಎಸ್ ಬೋಪಣ್ಣ ಅವರನ್ನೂ ಒಳಗೊಂಡ ಪೀಠವು ಸ್ಪಷ್ಟ ಪಡಿಸಿತು.
ಕೇಂದ್ರ
ಮತ್ತು ದೆಹಲಿ ಸರ್ಕಾರಗಳ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ ಮೆಹ್ತ ಅವರು ’ಈ ಶಿಕ್ಷಿತ ಅಪರಾಧಗಳ
ಗಲ್ಲು ಜಾರಿಯು ಸಂಭ್ರಮಿಸುವುದಕ್ಕಾಗಿ ಇರುವುದಲ್ಲ, ಅಧಿಕಾರಿಗಳು ಕಾನೂನಿನ ಆದೇಶವನ್ನು ಜಾರಿಗೊಳಿಸುತ್ತಿದ್ದಾರೆ ಅಷ್ಟೇ’ ಎಂದು ವಿವರಿಸಿದ್ದರು.
No comments:
Post a Comment