My Blog List

Friday, February 14, 2020

ಪುಲ್ವಾಮ: ೪೦ ಸಿಆರ್‌ಪಿಎಫ್ ಹುತಾತ್ಮ ಯೋಧರ ಸ್ಮಾರಕ

ಪುಲ್ವಾಮ: ೪೦ ಸಿಆರ್ಪಿಎಫ್ ಹುತಾತ್ಮ ಯೋಧರ ಸ್ಮಾರಕ
ಶ್ರೀನಗರ: ೨೦೧೯ರ ಫೆಬ್ರುವರಿ ತಿಂಗಳಲ್ಲಿ ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾಗಿದ್ದ ೪೦ ಮಂದಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಯೋಧರ ಗೌರವಾರ್ಥ ನಿರ್ಮಿಸಲಾಗಿರುವ ಸ್ಮಾರಕವನ್ನು  2020 ಫೆಬ್ರುವರಿ 14ರ ಶುಕ್ರವಾರ ಲೆತ್ಪೋರ ಶಿಬಿರದಲ್ಲಿ ಉದ್ಘಾಟಿಸಲಾಗುವುದು ಎಂದು ಉನ್ನತ ಅಧಿಕಾರಿಯೊಬ್ಬರು 2020 ಫೆಬ್ರುವರಿ 13ರ ಗುರುವಾರ ಇಲ್ಲಿ ತಿಳಿಸಿದರು.

ದಾಳಿಯಲ್ಲಿ ತಮ್ಮ ಪ್ರಾಣಗಳನ್ನು ಕಳೆದುಕೊಂಡ ಕೆಚ್ಚೆದೆಯ ಯೋಧರಿಗೆ ನೀಡುವ ಗೌರವ ಇದುಎಂದು ಸಿಆರ್ಪಿಎಫ್ ಅಡಿಷನಲ್ ಡೈರೆಕ್ಟರ್ ಜನರಲ್ ಝುಲ್ಪಿಕರ್ ಹಸನ್ ಸ್ಮಾರಕ ತಾಣಕ್ಕೆ ಭೇಟಿ ನೀಡಿದ ಬಳಿಕ ಹೇಳಿದರು.

ಹುತಾತ್ಮರಾದ ಎಲ್ಲ ೪೦ ಮಂದಿ ಸಿಬ್ಬಂದಿಯ ಹೆಸರುಗಳನ್ನು ಅವರ ಚಿತ್ರ ಮತ್ತು ಸಿಆರ್ಪಿಎಫ್ಸೇವಾ ಮತ್ತು ನಿಷ್ಠಾ  ಲಾಂಛನ ಸಹಿತವಾಗಿ ಸ್ಮಾರಕದಲ್ಲಿ ಅಳವಡಿಸಲಾಗಿದೆ.

ಇದು ಖಂಡಿತವಾಗಿ ದುರದೃಷ್ಟಕರ ಘಟನೆ ಮತ್ತು ನಾವೀಗ ಇದರಿಂದ ಪಾಠ ಕಲಿತಿದ್ದೇವೆ. ಈಗ ನಾವು ನಮ್ಮ ಚಲನವಲನಗಳ ವೇಳೆ ಹೆಚ್ಚಿನ ಎಚ್ಚರ ವಹಿಸುತ್ತೇವೆಎಂದು ಹಸನ್ ಹೇಳಿದರು.

No comments:

Advertisement