My Blog List

Friday, February 14, 2020

'ಗೋಲಿಮಾರೋ’ದಂತಹ ಹೇಳಿಕೆ ಕೊಡಬಾರದಿತ್ತು: ಅಮಿತ್ ಶಾ

'ಗೋಲಿಮಾರೋದಂತಹ ಹೇಳಿಕೆ ಕೊಡಬಾರದಿತ್ತು:  ಅಮಿತ್  ಶಾ
ನವದೆಹಲಿ: ಚುನಾವಣೆ ಹತ್ತಿರ ಬರುತ್ತಿದ್ದಾಗ ಬಿಜೆಪಿ ನಾಯಕರುಗೋಲಿ ಮಾರೋ (ಗುಂಡು ಹಾರಿಸಿ) ಮತ್ತುಇಂಡೋ -ಪಾಕಿಸ್ತಾನ್ ಮ್ಯಾಚ್ನಂತಹ (ಭಾರತ- ಪಾಕಿಸ್ತಾನ ಪಂದ್ಯ) ದ್ವೇಷ ಭಾಷಣದ ಹೇಳಿಕೆಗಳನ್ನು ನೀಡಬಾರದಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 2020 ಫೆಬ್ರುವರಿ 13ರ ಗುರುವಾರ  ಇಲ್ಲಿ ಹೇಳಿದರು.

ಫೆಬ್ರುವರಿ ೧೧ರಂದು ದೆಹಲಿ ಚುನಾವಣಾ ಫಲಿತಾಂಶದ ಪ್ರಕಟಗೊಂಡ ಬಳಿಕ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಶಾ, ’ಬಿಜೆಪಿ ಇಂತಹ ಹೇಳಿಕೆಗಳಿಂದ ದೂರ ನಿಂತಿದೆ. ಆದರೂ ಪಕ್ಷದ ಕೆಲವು ನಾಯಕರ ಇಂತಹ ಹೇಳಿಕೆಗಳ ಪರಿಣಾಮವಾಗಿ ಪಕ್ಷವು ನಷ್ಟ ಅನುಭವಿಸಿದೆಎಂದು ನುಡಿದರು.

ಇವುಗಳನ್ನು ಪಕ್ಷದ ಹೇಳಿಕೆಗಳು ಎಂಬುದಾಗಿ ಭಾವಿಸಲು ಸಾಧ್ಯವಿಲ್ಲ, ಆದರೆ ಕಣದಲ್ಲಿ ಎಲ್ಲ ಮಾದರಿಯ ವ್ಯಕ್ತಿಗಳೂ ಇದ್ದರು ಎಂದು ಶಾ ಹೇಳಿದರು.

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ೭೦ ಸ್ಥಾನಗಳ ಪೈಕಿ ಸ್ಥಾನಗಳನ್ನು ಮಾತ್ರ ಗೆದ್ದಿದೆ. ಆಡಳಿತಾರೂಢ ಆಮ್ ಆದ್ಮಿ ಪಕ್ಷವು (ಎಎಪಿ-ಆಪ್) ೬೨ ಸ್ಥಾನಗಳನ್ನು ತನ್ನ ಬಗಲಿಗೆ ಹಾಕಿಕೊಂಡಿದೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ದೆಹಲಿಯ ರಿತಾಲಾದಲ್ಲಿ ಫೆಬ್ರುವರಿ ೮ರಂದು ನಡೆದ ಚುನಾವಣಾ ಸಭೆಯಲ್ಲಿ ವಿತ್ತ ಸಹಾಯಕ ಸಚಿವ ಅನುರಾಗ್ ಠಾಕೂರ್ ಅವರು ಪ್ರಚೋದನಾಕಾರಿ ಮಾತುಗಳನ್ನು ಆಡಿದ್ದು ಕ್ಯಾಮರಾದಲ್ಲಿ ದಾಖಲಾಗಿತ್ತು. ತಲೆಯ ಮೇಲ್ಭಾಗದಲ್ಲಿ ತಮ್ಮ ಕೈಗಳಿಂದ ಚಪ್ಪಾಳೆ ತಟ್ಟುತ್ತಾ ಠಾಕೂರ್ ಅವರುದೇಶ್ ಕಿ ಗದ್ದಾರೋಂ ಕೊ (ದೇಶ ದ್ರೋಹಿಗಳಿಗೆ) ಎಂದು ಕೂಗುವುದು ಮತ್ತು ಗುಂಪು ಅದಕ್ಕೆಗೋಲಿ ಮಾರೋ ಎಸ್***ಎನ್ ಕೊ (ಗುಂಡು ಹಾರಿಸಿ) ಎಂಬುದಾಗಿ ಘೋಷಣೆ ಕೂಗಿ ಪ್ರತಿಕ್ರಿಯಿಸಿದ್ದು ವಿಡಿಯೋದಲ್ಲಿ ದಾಖಲಾಗಿತ್ತು.  
ವಿಡಿಯೋ ವ್ಯಾಪಕವಾಗಿ ಪ್ರಸಾರಗೊಂಡಿದ್ದು ತೀವ್ರ ಟೀಕೆಗೆ ಗುರಿಯಾಗಿತ್ತು.

ಬಿಜೆಪಿ ಅಭ್ಯರ್ಥಿ ಕಪಿಲ್ ಮಿಶ್ರ ಅವರು ನಗರದ ಚುನಾವಣೆಯನ್ನು  ಭಾರತ ವರ್ಸಸ್ ಪಾಕಿಸ್ತಾನ ಪಂದ್ಯಕ್ಕೆ ಹೋಲಿಸಿದ್ದರು. ಬಗ್ಗೆ ಮಿಶ್ರ ಅವರು ವಿವಾದಾತ್ಮಕ ಟ್ವೀಟ್ ಪ್ರಕಟಿಸಿದ್ದರು. ಪೊಲೀಸರು ಅವರ ವಿರುದ್ಧ ಚುನಾವಣಾ ಅಧಿಕಾರಿಗಳ ನಿರ್ದೇಶನದ ಮೇರೆಗೆ ಪ್ರಥಮ ಮಾಹಿತಿ ವರದಿ (ಎಫ್ ಐಆರ್) ದಾಖಲಿಸಿದ್ದರು.

ಕೇಂದ್ರ ಹಣಕಾಸು ಸಹಾಯಕ ಸಚಿವ ಅನುರಾಗ್ ಠಾಕೂರ್, ಬಿಜೆಪಿ ಪಶ್ಚಿಮ ದೆಹಲಿ ಸಂಸದ ಪರ್ವೇಶ್ ವರ್ಮ ಮತ್ತು ಬಿಜೆಪಿಯ ಮಾಡೆಲ್ ಟೌನ್ ಅಭ್ಯರ್ಥಿ ಕಪಿಲ್ ಮಿಶ್ರ ಅವರ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ಮತ್ತು ಘೋಷಣೆಗಳಿಗಾಗಿ ಚುನಾವಣಾ ಆಯೋಗವು ಪ್ರಚಾರ ನಿಷೇಧ ವಿಧಿಸಿತ್ತು.

ಶಾಹೀನ್ ಬಾಗ್ ನಲ್ಲಿನ ಪ್ರತಿಭಟನಕಾರರನ್ನು ಉಲ್ಲೇಖಿಸಿದ ಠಾಕೂರ್ ತಮ್ಮ ಬೆಂಬಲಿಗರುಗೋಲಿ ಮಾರೋಘೋಷಣೆ ಕೂಗುವಂತೆ ಪ್ರಚೋದಿಸಿದರೆ, ವರ್ಮ ಅವರುಪ್ರತಿಭಟನಕಾರರು ನಿಮ್ಮ ಪುತ್ರಿಯರು ಮತ್ತು ಸಹೋದರಿಯರ ಮೇಲೆ ಅತ್ಯಾಚಾರ ಮಾಡಬಹುದು ಮತ್ತು ಕೊಲ್ಲಬಹುದುಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ದೆಹಲಿ ಚುನಾವಣೆಯನ್ನುಭಾರತ- ಪಾಕಿಸ್ತಾನ ಪಂದ್ಯಕ್ಕೆಹೋಲಿಸಿದ್ದ ಮಿಶ್ರ ಶಾಹೀನ್ ಬಾಗ್ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆಯನ್ನುಮಿನಿ ಪಾಕಿಸ್ತಾನಎಂದು ಟೀಕಿಸಿದ್ದರು. 

No comments:

Advertisement