My Blog List

Saturday, February 29, 2020

ನಿರ್ಭಯಾ ಪ್ರಕರಣ: ಸುಪ್ರೀಂಕೋರ್ಟಿಗೆ ಪವನ್ ಗುಪ್ತ, ಕ್ಯುರೇಟಿವ್ ಅರ್ಜಿ ಸಲ್ಲಿಕೆ

ನಿರ್ಭಯಾ ಪ್ರಕರಣ: ಸುಪ್ರೀಂಕೋರ್ಟಿಗೆ ಪವನ್ ಗುಪ್ತ, ಕ್ಯುರೇಟಿವ್ ಅರ್ಜಿ ಸಲ್ಲಿಕೆ
ನವದೆಹಲಿ: ಗಲ್ಲು ಶಿಕ್ಷೆ ಜಾರಿಗೆ ಕೇವಲ ನಾಲ್ಕು ದಿನಗಳು ಬಾಕಿ ಉಳಿದಿರುವಾಗ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಶಿಕ್ಷಿತ ಅಪರಾಧಿಗಳು ಪುನಃ ಕಾನೂನುಬದ್ಧ ಪರಿಹಾರದ ಅವಕಾಶಗಳನ್ನು ಬಳಸಿಕೊಳ್ಳಲು ಆರಂಭಿಸಿದರು.

೨೦೧೨ರ ನಿರ್ಭಯಾ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ೨೫ ವರ್ಷ ವಯಸ್ಸಿನ ಪವನ್ ಕುಮಾರ್ ಗುಪ್ತಾ 2020 ಫೆಬ್ರುವರಿ 28ರ ಶುಕ್ರವಾರ ಸುಪ್ರೀಂ ಕೋರ್ಟಿಗೆ ಕ್ಯುರೇಟಿವ್ ಅರ್ಜಿ ಸಲ್ಲಿಸಿದ್ದು, ತನಗೆ ವಿಧಿಸಿರುವ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಬೇಕು ಎಂದು ಮನವಿ ಮಾಡಿದ.

ನಾಲ್ವರು ಆಪರಾಧಿಗಳ ಪೈಕಿ ಪವನ್ ಗುಪ್ತಾ ಈವರೆಗೆ ಕ್ಯುರೇಟಿವ್ ಅರ್ಜಿ ಸಲ್ಲಿಸಿರಲಿಲ್ಲ. ರಾಷ್ಟ್ರಪತಿಗಳಿಗೆ ಕ್ಷಮಾದಾನ ಕೋರಿಕೆ ಅರ್ಜಿಯನ್ನೂ ಸಲ್ಲಿಸಿಲ್ಲ. ಉಳಿದ ಮೂವರು ಅಪರಾಧಿಗಳಾದ ಮುಕೇಶ್ ಕುಮಾರ್ ಸಿಂಗ್, ವಿನಯ್ ಕುಮಾರ್ ಶರ್ಮಾ ಮತ್ತು ಅಕ್ಷಯ್ ಕುಮಾರ್ ಕ್ಷಮಾದಾನ ಅರ್ಜಿಗಳನ್ನು ಈಗಾಗಲೇ ರಾಷ್ಟ್ರಪತಿಗಳು ತಿರಸ್ಕರಿಸಿದ್ದಾರೆ.

ರಾಷ್ಟ್ರಪತಿಗಳೂ ತಮ್ಮ ಕ್ಷಮಾದಾನ ಅರ್ಜಿ ತಿರಸ್ಕರಿಸಿದ್ದನ್ನು ಮುಖೇಶ್ ಕುಮಾರ್ ಮತ್ತು ವಿನಯ್ ಶರ್ಮಾ ಕೋರ್ಟಿನಲ್ಲಿ ಪ್ರಶ್ನಿಸಿ ಹಿನ್ನಡೆ ಅನುಭವಿಸಿದ್ದಾರೆ. ಅಕ್ಷಯ್ ಕುಮಾರ್ ಕ್ಷಮಾದಾನ ಅರ್ಜಿ ತಿರಸ್ಕರಿಸಿದ್ದನ್ನು ಇನ್ನೂ ನ್ಯಾಯಾಲಯದಲ್ಲಿ ಪ್ರಶ್ನಿಸಿಲ್ಲ.

ದೆಹಲಿಯ ನ್ಯಾಯಾಲಯ ಫೆಬ್ರವರಿ ೧೭ ರಂದು ಅಪರಾಧಿಗಳನ್ನು ಗಲ್ಲಿಗೇರಿಸುವ ದಿನಾಂಕವನ್ನು ಘೋಷಿಸಿದ್ದು, ಮಾರ್ಚ್ ಮುಂಜಾನೆ ನೇಣುಗಂಬಕ್ಕೇರಿಸಲು ಆದೇಶ ನೀಡಿದೆ. ಹಿಂದೆ ಎರಡು ಬಾರಿ ಗಲ್ಲಿಗೇರಿಸುವ ದಿನಾಂಕವನ್ನು ಘೋಷಿಸಲಾಗಿದ್ದರೂ, ಅಪರಾಧಿಗಳು ಕಾನೂನು ಅವಕಾಶಗಳನ್ನು ಬಳಸಿಕೊಳ್ಳಲು ಮುಂದಾz ಪರಿಣಾಮವಾಗಿ ನೇಣಿಗೇರಿಸಲು ಸಾಧ್ಯವಾಗಿರಲಿಲ್ಲ.

ಇದೀಗ ಮೂರನೇ ಬಾರಿಗೆ ಗಲ್ಲುಶಿಕ್ಷೆ ಜಾರಿಗೆ ದಿನ ನಿಗದಿ ಮಾಡಲಾಗಿದ್ದು, ಶಿಕ್ಷೆ ಜಾರಿಯ ದಿನ ಹತ್ತಿರ ಬರುತ್ತಿರುವಾಗ ಅಪರಾಧಿಗಳು ಕಾನೂನು ಅವಕಾಶಗಳನ್ನು ಬಳಸಿಕೊಳ್ಳಲು ಆರಂಭಿಸಿದ್ದಾರೆ. ಇದಕ್ಕೂ ಮೊದಲು ಆರೋಗ್ಯ ಸರಿ ಇಲ್ಲ, ಆರೋಪಿಗಳು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಹೇಳಿ ಗಲ್ಲು ಜಾರಿ ದಿನಾಂಕ ಮುಂದೂಡುವ ಪ್ರಯತ್ನಗಳು ನಡೆದಿದ್ದವು. ಆದರೆ ನ್ಯಾಯಾಲಯ ಅರ್ಜಿಯನ್ನು ತಳ್ಳಿಹಾಕಿತ್ತು.

No comments:

Advertisement