Saturday, February 29, 2020

ರಾಷ್ಟ್ರದ್ರೋಹ ಪ್ರಕರಣ: ಕನ್ನಯ್ಯ ಕುಮಾರ್ ವಿರುದ್ಧ ಖಟ್ಲೆಗೆ ದೆಹಲಿ ಸರ್ಕಾರದ ಒಪ್ಪಿಗೆ

ರಾಷ್ಟ್ರದ್ರೋಹ ಪ್ರಕರಣಕನ್ನಯ್ಯ ಕುಮಾರ್ ವಿರುದ್ಧ ಖಟ್ಲೆಗೆ ದೆಹಲಿ ಸರ್ಕಾರದ ಒಪ್ಪಿಗೆ
ನವದೆಹಲಿ: ಜವಾಹರಲಾಲ್ ನೆಹರೂ ವಿಶ್ವ ವಿದ್ಯಾಲಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ಪ್ರಸುತ ಎಡ ಪಕ್ಷ ನಾಯಕರಾಗಿರುವ ಕನ್ನಯ್ಯ ಕುಮಾರ್ ವಿರುದ್ಧ ೨೦೧೬ರ ರಾಷ್ಟ್ರದ್ರೋಹ ಪ್ರಕರಣದಲ್ಲಿ ಖಟ್ಲೆ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲು ದೆಹಲಿ ಸರ್ಕಾರವು 2020 ಫೆಬ್ರುವರಿ 28ರ ಶುಕ್ರವಾರ ತನ್ನ ಒಪ್ಪಿಗೆ ನೀಡಿತು.

೨೦೧೬ರ ಜೆಎನ್ಯು  ರಾಷ್ಟ್ರದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮಕ್ಕೆ ಒಪ್ಪಿಗೆ ನೀಡುವ ಬಗ್ಗೆ ತಮ್ಮ ಸರ್ಕಾರ ಶೀಘ್ರ ನಿರ್ಧಾರ ಕೈಗೊಳ್ಳುವುದು ಎಂಬುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಭರವಸೆ ನೀಡಿದ ದಿನಗಳ ಬಳಿಕ ದೆಹಲಿ ಸರ್ಕಾರದಿಂದ ಒಪ್ಪಿಗೆ ಲಭಿಸಿದೆ. ದೆಹಲಿ ನ್ಯಾಯಾಲಯವು ಏಪ್ರಿಲ್ ೩ರಂದು ಸ್ಥಿತಿಗತಿ ವರದಿ ಸಲ್ಲಿಸುವಂತೆ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿತ್ತು.

ಕಡತವು ಗೃಹ ಇಲಾಖೆಯನ್ನು ನೋಡಿಕೊಳ್ಳುತ್ತಿರುವ ಆಪ್ ಸಚಿವ ಸತ್ಯೇಂದರ್ ಜೈನ್ ಬಳಿ ಬಾಕಿ ಉಳಿದಿತ್ತು. ಗೃಹ ಇಲಾಖೆಯು ಕಡತ ಹಾಗೂ ದಾಖಲೆಗಳ ಪರಿಶೀಲನೆಯ ಬಳಿಕ ಕಾನೂನು ಕ್ರಮಕ್ಕೆ ಒಪ್ಪಿಗೆ ನೀಡಿತು ಎಂದು ಮೂಲಗಳು ತಿಳಿಸಿದವು.

No comments:

Advertisement