Sunday, February 16, 2020

ಉಸೇನ್ ಬೋಲ್ಟ್ ವಿಶ್ವದಾಖಲೆ ಮುರಿದ ಕಂಬಳದ ವೀರ

ಉಸೇನ್ ಬೋಲ್ಟ್ ವಿಶ್ವದಾಖಲೆ ಮುರಿದ ಕಂಬಳದ ವೀರ
ಸರ್ವತ್ರ ಪ್ರಶಂಸೆ, ಒಲಿಂಪಿಕ್ಸ್ ಗೆ ಕಳುಹಿಸಲು ಸರ್ಕಾರದ ಒಲವು
ಮಂಗಳೂರು/ ಬೆಂಗಳೂರು:  ದಕ್ಷಿಣ ಕನ್ನಡ, ಉಡುಪಿ ಒಳಗೊಂಡಂತೆ ಕರಾವಳಿಯ ಜನಪ್ರಿಯ ಕ್ರೀಡೆಯಾದ ಕಂಬಳದಲ್ಲಿ 100 ಮೀಟರ್ ದೂರವನ್ನು ಕೋಣಗಳನ್ನು ಓಡಿಸುತ್ತಾ 9.55 ಸೆಕೆಂಡುಗಳಲ್ಲಿ ಕ್ರಮಿಸುವ ಮೂಲಕ ಮೂಡಬಿದ್ರಿಯ ಶ್ರೀನಿವಾಸ ಗೌಡ ಅವರು ಜಮೈಕಾದ ಅತಿವೇಗದ ಓಟಗಾರ ಉಸೇನ್ ಬೋಲ್ಟ್ ಅವರ  ಜಾಗತಿಕ ಒಲಿಂಪಿಕ್ ದಾಖಲೆಯನ್ನು ಮುರಿದದ್ದು, ಕೇಂದ್ರ ಸಚಿವ ಕಿರಣ್ ರಿಜಿಜು ಸೇರಿದಂತೆ ಸರ್ವತ್ರ  ಗಮನ ಸೆಳೆಯಿತು.

100 ಮೀಟರ್ ದೂರವನ್ನು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 9.58 ಸೆಕೆಂಡುಗಳಲ್ಲಿ ಕ್ರಮಿಸಿದ ಉಸೇನ್ ಬೋಲ್ಟ್ ಅವರದ್ದು ಈವರೆಗಿನ ವಿಶ್ವದಾಖಲೆಯಾಗಿತ್ತು.

ಶ್ರೀನಿವಾಸ ಗೌಡ  ಅವರು 142.5 ಮೀಟರ್ ದೂರವನ್ನು ಕೇವಲ 13.62 ಸೆಕೆಂಡುಗಳಲ್ಲಿ ಕ್ರಮಿಸಿದರು. ಕಾರ್ಕಳ ಸಮೀಪ ಐಕಳದಲ್ಲಿ ಫೆಬ್ರುವರಿ  1ರಂದು ಈ  ಕಂಬಳ ಸ್ಪರ್ಧೆ ನಡೆದಿತ್ತು.

ಟ್ವಿಟ್ಟರಿನಲ್ಲಿ ಶ್ರೀನಿವಾಸ ಗೌಡ ಅವರ ಸಾಧನೆಗೆ ವ್ಯಾಪಕ ಪ್ರಸಂಸೆ ಲಭಿಸುತ್ತಿದ್ದಂತೆಯೇ ಅವರಿಗೆ ಸೂಕ್ತ ತರಬೇತಿ ನೀಡಿ ಒಲಿಂಪಿಕ್ಸ್ ಗೆ ಕಳಿಸುವ ಸಿದ್ಧತೆಗೆ ಸರ್ಕಾರವು ಸಜ್ಜಾಯಿತು.

No comments:

Advertisement