My Blog List

Sunday, February 16, 2020

ಭಾರತದ ಆಂತರಿಕ ವಿಷಯದಲ್ಲಿ ಮೂಗು ತೂರಿಸಬೇಡಿ: ಟರ್ಕಿಗೆ ಭಾರತದ ತಾಕೀತು


ಭಾರತದ ಆಂತರಿಕ ವಿಷಯದಲ್ಲಿ ಮೂಗು ತೂರಿಸಬೇಡಿ: ಟರ್ಕಿಗೆ ಭಾರತದ ತಾಕೀತು
ನವದೆಹಲಿ: ಕಾಶ್ಮೀರ ವಿಷಯದಲ್ಲಿ ಟೀಕೆ ಮಾಡಿದ್ದಕ್ಕಾಗಿ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಅವರನ್ನು 2020 ಫೆಬ್ರುವರಿ 15ರ  ಶನಿವಾರ ತರಾಟೆಗೆ ತೆಗೆದುಕೊಂಡ ಭಾರತರಾಷ್ಟ್ರದ ಆಂತರಿಕ ವ್ಯವಹಾರಗಳಲ್ಲಿ ಮೂಗುತೋರಿಸಬೇಡಿಎಂದು ಅವರಿಗೆ ಸೂಚಿಸಿತು.

ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್ ಕುಮಾರ್ ಅವರುಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಟರ್ಕಿ ಅಧ್ಯಕ್ಷರು ಮಾಡಿದ ಎಲ್ಲ ಉಲ್ಲೇಖಗಳನ್ನು ಭಾರತ ತಿರಸ್ಕರಿಸಿದೆ ಮತ್ತು ಪ್ರದೇಶವು ಭಾರತದ ಅವಿಭಾಜ್ಯ ಮತ್ತು ಪರಾಭಾರೆ ಮಾಡಲು ಸಾಧ್ಯವಿಲ್ಲದಂತಹ ಅಂಗವಾಗಿದೆಎಂದು ಹೇಳಿದರು..

ಪಾಕಿಸ್ತಾನೀ ಸಂಸತ್ತನ್ನು ಉದ್ದೇಶಿಸಿ ಶುಕ್ರವಾರ ಮಾಡಿದ್ದ ಭಾಷಣದಲ್ಲಿ ಎರ್ಡೋಗನ್ ಅವರುಕಾಶ್ಮೀರಿ ಜನರ ಹೋರಾಟವನ್ನು ಒಂದನೇ ಜಾಗತಿಕ ಸಮರ ಕಾಲದಲ್ಲಿ ವಿದೇಶೀ ಪ್ರಾಬಲ್ಯದ ವಿರುದ್ಧ ಟರ್ಕಿಯ ಜನರು ನಡೆಸಿದ ಹೋರಾಟಕ್ಕೆಹೋಲಿಸಿದ್ದರು.

ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಎಲ್ಲ ಉಲ್ಲೇಖಗಳನ್ನೂ ಭಾರತವು ತಿರಸ್ಕರಿಸುತ್ತದೆ. ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಮತ್ತು ಪರಾಭಾರೆ ಮಾಡಲಾಗದಂತಹ ಅಂಗವಾಗಿದೆಎಂದು ಎರ್ಡೋಗನ್ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಮಾಡಿದ ಟೀಕೆಗಳನ್ನು ಉಲ್ಲೇಖಿಸಿ ಭಾರತದ ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್ ಕುಮಾರ್ ನುಡಿದರು.

ಟರ್ಕಿ ನಾಯಕತ್ವವು ಭಾರತದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಬಾರದು ಮತ್ತು ಭಾರತ ಮತ್ತು ಪ್ರದೇಶಕ್ಕೆ ಪಾಕಿಸ್ತಾನಿ ಪ್ರಚೋದಿತ ಭಯೋತ್ಪಾದನೆಯ ಭೀಕರ ಬೆದರಿಕೆ ಸೇರಿದಂತೆ ವಾಸ್ತವಾಂಶಗಳ ಬಗ್ಗೆ ಸಮರ್ಪಕ ತಿಳುವಳಿಕೆಯನ್ನು ಪಡೆದುಕೊಳ್ಳಬೇಕು ಎಂಬುದಾಗಿ ನಾವು ಟರ್ಕಿಗೆ ಕರೆ ನೀಡುತ್ತೇವೆಎಂದು ರವೀಶ್ ಕುಮಾರ್ ಹೇಳಿದರು.

ಟರ್ಕಿ ಅಧ್ಯಕ್ಷ ಎರ್ಡೋಗನ್ ಅವರು ಇಸ್ಲಮಾಬಾದಿಗೆ ಭೇಟಿ ನೀಡಿ ಕಾಶ್ಮೀರದಲ್ಲಿನ ಭಾರತದ ಇತ್ತೀಚಿನ ಕ್ರಮಗಳು ಏಕಪಕ್ಷೀಯ ಎಂಬುದಾಗಿ ಹೇಳಿಕೆ ನೀಡಿದ್ದನ್ನು ಅನುಸರಿಸಿ ಭಾರತ ಪ್ರತಿಕ್ರಿಯೆ ನೀಡಿತು.

ಪಾಕಿಸ್ತಾನದ ಹೊರತಾಗಿ, ಟರ್ಕಿ ಮತ್ತು ಮಲೇಶ್ಯಾ ಕಳೆದ ವರ್ಷ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ ಭಾರತದ ನಿರ್ಧಾರವನ್ನು ಟೀಕಿಸಿದ್ದವು. ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪಡಿಸಿದ ಹಿನ್ನೆಲೆಯಲ್ಲಿ ಪ್ರದೇಶದಲ್ಲಿ ವಿಧಿಸಲಾದ ನಿರ್ಬಂಧಗಳು ಆರು ತಿಂಗಳಿಗೂ ಹೆಚ್ಚು ಕಾಲದ ಮುಂದುವರೆದಿದ್ದವು.

No comments:

Advertisement