My Blog List

Thursday, February 6, 2020

ಇದು ಅಯೋಧ್ಯಾ ರಾಮಮಂದಿರ ಟ್ರಸ್ಟ್ ವಿಳಾಸ

ಇದು ಯೋಧ್ಯಾ ರಾಮಮಂದಿರ ಟ್ರಸ್ಟ್ ವಿಳಾಸ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ಸಲುವಾಗಿ ಬುಧವಾರ ಸಂಸತ್ತಿನಲ್ಲಿ ಪ್ರಕಟಿಸಿದ ೧೫ ಸದಸ್ಯರ ’ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್  ದೆಹಲಿಯ ಟೋನಿ ಗ್ರೇಟರ್ ಕೈಲಾಶ್ ಕಾಲೋನಿ ವಿಳಾಸವನ್ನು ಹೊಂದಿದೆ.

‘ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಹೆಸರಿನ ಟ್ರಸ್ಟನ್ನು ರಾಷ್ಟ್ರ ರಾಜಧಾನಿಯ ಆರ್-೨೦, ಜಿಕೆ-೧ ವಿಳಾಸದಲ್ಲಿ ನೋಂದಣಿ ಮಾಡಲಾಗಿದೆ. ಇದು ಹಿಂದೂ ಕಕ್ಷಿದಾರರ ಪರವಾಗಿ ಸುದೀರ್ಘ ಕಾಲ ಹೋರಾಟ ನಡೆಸಿದ್ದ ಸುಪ್ರೀಂಕೋರ್ಟಿನ ಹಿರಿಯ ವಕೀಲ ಕೆ. ಪರಾಶರನ್ ಅವರ ವಿಳಾಸವಾಗಿದೆ.

ರಾಷ್ಟ್ರದ ಅತ್ಯಂತ ಹಳೆಯ ಭೂಮಿಯ ಹಕ್ಕು ಸಂಬಂಧಿತ ಪ್ರಕರಣಗಳಲ್ಲಿ ಒಂದಾಗಿದ್ದ  ಯೋಧ್ಯಾ  ರಾಮಜನ್ಮಭೂಮಿ- ಬಾಬರಿ ಮಸೀದಿ ಪ್ರಕರಣವು ಕಳೆದ ವರ್ಷದ ಕೊನೆಯ ವೇಳೆಗೆ ಇತ್ಯರ್ಥಗೊಂಡಿದ್ದು, ೯೩ರ ಹರೆಯದ ಪರಾಶರನ್ ಅವರು ಈ ಸುದೀರ್ಘ ಕಾನೂನು ಸಮರದ ಮುಂಚೂಣಿಯಲ್ಲಿದ್ದ ವಕೀಲರಾಗಿದ್ದರು.

ಮಾಜಿ ಅಟಾರ್ನಿ ಜನರಲ್ ಪರಾಶರನ್ ಅವರು ರಾಮಜನ್ಮಭೂಮಿ - ಬಾಬರಿ ಮಸೀದಿ ಪ್ರಕರಣವು ಸುಪ್ರೀಂಕೋರ್ಟ್ ಮೆಟ್ಟಿಲೇರಿದಂದಿನಿಂದಲೂ ಅದರ ಇತ್ಯರ್ಥಕ್ಕಾಗಿ ನಿರಂತರವಾಗಿ ಶ್ರಮಿಸಿದ್ದರು. ವಕೀಲರಾದ ಪಿವಿ ಯೋಗೇಶ್ವರನ್, ಅನಿರುದ್ಧ ಶರ್ಮ, ಶ್ರೀಧರ ಪೊಟ್ಟರಾಜು, ಅದಿತಿ ದಾನಿ, ಅಶ್ವಿನ್ ಕುಮಾರ್ ಡಿಎಸ್ ಮತ್ತು ಭಕ್ತಿ ವರ್ಧನ್ ಸಿಂಗ್ ಅವರು ಪರಾಶರನ್ ಅವರ ಸಹಾಯಕರಾಗಿ ದುಡಿದಿದ್ದರು.

ಸುಪ್ರೀಂಕೋರ್ಟ್ ೪೦ ದಿನಗಳ ಕಾಲ ದೈನಂದಿನ ವಿಚಾರಣೆ ನಡೆಸಿದಾಗ, ಪರಾಶರನ್ ಅವರು ಒಂದಿಷ್ಟೂ ತಾಳ್ಮೆ ಕಳೆದುಕೊಳ್ಳದೆ ನ್ಯಾಯಾಲಯದಲ್ಲಿ ತಮ್ಮ ವಾದಗಳನ್ನು ಮಂಡಿಸಿದ್ದರು.

ಪ್ರಮುಖ ಪ್ರತಿಸ್ಪರ್ಧಿಗಳಾದ ಮುಸ್ಲಿಮ್ ಕಕ್ಷಿದಾರರ ಪರ ವಕೀಲ ರಾಜೀವ ಧವನ್ ಅವರ ಬಿರುನುಡಿಗಳು
ಮಧ್ಯೆಯೂ ಸಹನೆಯಿಂದ  ತಮ್ಮ ವಾದ ಮಂಡಿಸಿದ್ದ ಪರಾಶರನ್,  ಅಯೋಧ್ಯಾ ಪ್ರಕರಣದ ತೀರ್ಪನ್ನು ಸುಪ್ರೀಂಕೋರ್ಟ್ ಕಾಯ್ದಿರಿಸಿದಾಗ ನ್ಯಾಯಾಲಯದಿಂದ ಹೊರಬಂದು 15 ನಿಮಿಷ ಕಾದು ಎದುರಾಳಿ ವಕೀಲ ರಾಜೀವ್ ಧವನ್ ಅವರ ಕೈ ಹಿಡಿದುಕೊಂಡು ಫೊಟೋ ತೆಗೆಸಿಕೊಳ್ಳುವ ಮೂಲಕ ನ್ಯಾಯಾಲಯದ ಹೊರಗೆ ನಾವೆಲ್ಲರೂ ಒಂದೇ ಎಂಬ ಸಂದೇಶ ನೀಡಿದ್ದರು.

No comments:

Advertisement