ಜಪಾನ್
ವಿಹಾರ ನೌಕೆ: ಇನ್ನಿಬ್ಬರು ಭಾರತೀಯರಿಗೂ
ಕೊರೋನಾವೈರಸ್
ಟೋಕಿಯೋ:
ಪ್ರತ್ಯೇಕಿತ
ಏಕಾಂಗಿವಾಸಕ್ಕೆ ಗುರಿಪಡಿಸಲಾಗಿರುವ
ಜಪಾನಿನ ವಿಹಾರ ನೌಕೆಯಲ್ಲಿದ್ದ ಇನ್ನಿಬ್ಬರು ಭಾರತೀಯರಿಗೂ ಮಾರಕ ಕೊರೋನಾವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಸುದ್ದಿ ಮೂಲಗಳು 2020 ಫೆಬ್ರುವರಿ
16ರ ಭಾನುವಾರ ತಿಳಿಸಿದವು.
ಜಪಾನ್
ವಿಹಾರನೌಕೆಯಲ್ಲಿರುವ ತನ್ನ ಎಲ್ಲ ನಾಗರಿಕರಿಗೂ ಸ್ವದೇಶಕ್ಕೆ ವಾಪಸಾಗಲು ಸಾಧ್ಯವಿರುವ ಎಲ್ಲ ನೆರವು ಒದಗಿಸುತ್ತಿರುವುದಾಗಿ ಭಾರತ ಸರ್ಕಾರ ನೀಡಿರುವ ಭರವಸೆಯ ನಡುವೆಯೇ ಈ ವರದಿ ಬಂದಿದೆ.
ನೌಕೆಯಲ್ಲಿರುವ ಭಾರತೀಯರನ್ನು ಅಂತಿಮ ಕೊರೋನಾವೈರಸ್ ಪರೀಕ್ಷೆಗಳಿಗೆ ಸೋಮವಾರ ಗುರಿಪಡಿಸಲಾಗುವುದು ಬಳಿಕ ಅವರನ್ನು ಸ್ವದೇಶಕ್ಕೆ ಒಯ್ಯಲು ವ್ಯವಸ್ಥೆ ಮಾಡಲಾಗುವುದು ಎಂದು ಇಲ್ಲಿನ ಭಾರತೀಯ ರಾಯಭಾರ ಕಚೇರಿ ಇಲ್ಲಿ ತಿಳಿಸಿತು.
೧೩೨
ಮಂದಿ ಸಿಬ್ಬಂದಿ ಮತ್ತು ಆರು ಪ್ರಯಾಣಿಕರು ಸೇರಿದಂತೆ ಒಟ್ಟು ೧೩೮ ಭಾರತೀಯರು ’ಡೈಮಂಡ್ ಪ್ರಿನ್ಸಿಸ್’ ವಿಹಾರ
ನೌಕೆಯಲ್ಲಿರುವ ೩,೭೧೧ ಮಂದಿ
ಪ್ರಯಾಣಿಕರಲ್ಲಿ ಸೇರಿದ್ದಾರೆ. ನೌಕೆಯು ಈ ತಿಂಗಳ ಆದಿಯಲ್ಲಿ
ಜಪಾನ್ ಕರಾವಳಿಗೆ ಬಂದಿದೆ. ನೌಕೆಯಲ್ಲಿ ಕೊರೋನಾವೈರಸ್ (ಕೋವಿಡ್-೧೯) ಸೋಂಕು ಬಾಧಿತರ ಒಟ್ಟು ಸಂಖ್ಯೆ ಈದಿನ ೩೫೫ಕ್ಕೆ
ಏರಿತು.
ಕಳೆದ
ಎರಡು ದಿನಗಳಲ್ಲಿ ಡೈಮಂಡ್ ಪ್ರಿನ್ಸೆಸ್ ಪ್ರಯಾಣಿಕರಲ್ಲಿ ೧೩೭ ಮಂದಿಗೆ ಹೊಸದಾಗಿ ಕೊರೋನಾವೈರಸ್ ಸೋಂಕು ಬಾಧಿಸಿದೆ, ಅವರ ಪೈಕಿ ಇಬ್ಬರು ಭಾರತೀಯರೂ ಸೇರಿದ್ದಾರೆ.
ಅವರೆಲ್ಲರನ್ನೂ ಚಿಕಿತ್ಸಾ ಘಟಕಕ್ಕೆ ಸೇರಿಸಲಾಗಿದೆ ಎಂದು ರಾಯಭಾರ ಕಚೇರಿ ಟ್ವೀಟ್ ಮಾಡಿತು.
ಅವರೆಲ್ಲರನ್ನೂ ಚಿಕಿತ್ಸಾ ಘಟಕಕ್ಕೆ ಸೇರಿಸಲಾಗಿದೆ ಎಂದು ರಾಯಭಾರ ಕಚೇರಿ ಟ್ವೀಟ್ ಮಾಡಿತು.
‘ಭಾರತದ
ಇತರ ಮೂವರು ಪ್ರಯಾಣಿಕರಿಗೂ ಕೊರೋನಾವೈರಸ್ ಸೋಂಕಿಗಾಗಿ ಚಿಕಿತ್ಸೆ ನೀಡಲಾಗುತ್ತಿದ್ದು ಅವರು ಚೆನ್ನಾಗಿ ಸ್ಪಂದಿಸಿದ್ದಾರೆ. ಜ್ವರ ನೋವು ಕಂಡು ಬಂದಿಲ್ಲ ಎಂದು ರಾಯಭಾರ ಕಚೇರಿ ಹೇಳಿತು.
ಭಾರತದ
ಮೂವರು ಪ್ರಯಾಣಿಕರಿಗೆ ಈ ಮೊದಲು ಕೊರೋನಾವೈರಸ್
ಬಾಧಿಸಿದ್ದು ಬೆಳಕಿಗೆ ಬಂದಿತ್ತು. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದು ದೇಹಸ್ಥಿತಿ ಸುಧಾರಿಸುತ್ತಿದೆ. ಫೆಬ್ರುವರಿ ೧೭ರಂದು ಅಂತಿಮ ಪರೀಕ್ಷೆ ನಡೆಯಲಿದೆ ಎಂದು ರಾಯಭಾರ ಕಚೇರಿ ತಿಳಿಸಿತು.
No comments:
Post a Comment