ಗ್ರಾಹಕರ ಸುಖ-ದುಃಖ

My Blog List

Sunday, February 16, 2020

ರಿಕ್ಷಾವಾಲನ ಮಗಳ ಮದುವೆಗೆ ಬಂತು ಪ್ರಧಾನಿಯ ಶುಭಾಶಯ..

ರಿಕ್ಷಾವಾಲನ ಮಗಳ ಮದುವೆಗೆ ಬಂತು ಪ್ರಧಾನಿಯ ಶುಭಾಶಯ..
ನವದೆಹಲಿ: ತಾವು ದತ್ತು ಪಡೆದ ಉತ್ತರ ಪ್ರದೇಶದ ಹಳ್ಳಿಯ ರಿಕ್ಷಾವಾಲಾನ (ರಿಕ್ಷಾ ಎಳೆಯುವವನು) ಮಗಳ ಮದುವೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಪತ್ರದ ಮೂಲಕ ಶುಭಾಶಯ ಕೋರಿದ್ದಾರೆ.


ರಿಕ್ಷಾವಾಲ ತನ್ನ ಮಗಳ ಮದುವೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಹಾಜರಾಗಬೇಕೆಂದು ಬಯಸಿದ್ದ.

ಡೊಮ್ರಿ ಗ್ರಾಮದ ನಿವಾಸಿ ಮಂಗಲ್ ಕೆವಾತ್ ಅವರು ಮಗಳ ಮದುವೆಯ ಆಮಂತ್ರಣವನ್ನು ದೆಹಲಿಯ ಪ್ರಧಾನ ಮಂತ್ರಿ ಕಚೇರಿಗೆ (ಪಿಎಂಒ) ಕಳುಹಿಸಿದ್ದರು. ಫೆಬ್ರವರಿ ೧೨ ರಂದು ತಮ್ಮ ಮಗಳ ಮದುವೆಗೆ ಆಗಮಿಸುವಂತೆ ಕೆವಾತ್ ತಮ್ಮ ಪತ್ರದಲ್ಲಿ ಪ್ರಧಾನಿ ಮೋದಿಯವರನ್ನು ಒತ್ತಾಯಿಸಿದ್ದರು.

ನನ್ನ ಕೆಲವು ಸ್ನೇಹಿತರು ಮೋದಿಜಿಗೆ ಮದುವೆಯ ಆಹ್ವಾನವನ್ನು ಕಳುಹಿಸಲು ನನಗೆ ಸೂಚಿಸಿದ್ದರು.

ಹಾಗಾಗಿ
ನಾನು ಒಂದು ಆಹ್ವಾನ ಪತ್ರಿಕೆಯನ್ನು ಪ್ರಧಾನಿಯ ದೆಹಲಿ ಕಚೇರಿ ಮತ್ತು ಇನ್ನೊಂದನ್ನು ಅವರ ವಾರಾಣಸಿ ಕಚೇರಿಗೆ ಕಳುಹಿಸಿದ್ದೆಎಂದು ಕೆವಾತ್ ಸುದ್ದಿ ಸಂಸ್ಥೆಗೆ ತಿಳಿಸಿದರು.

ವಿವಾಹ ಆಮಂತ್ರಣಕ್ಕೆ ಸ್ಪಂದಿಸಿದ ಪ್ರಧಾನಿ ಮೋದಿಯವರು ಕೆವಾತ್ಗೆ ಪತ್ರವೊಂದನ್ನು ಕಳುಹಿಸಿದ್ದು, ಅವರ ಮಗಳ ಮದುವೆಗೆ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿತು.

ಪ್ರಧಾನಿಯವರು ಮದುಮಗಳು ಮತ್ತು ಕುಟುಂಬವನ್ನು ಆಶೀರ್ವದಿಸಿ ಶುಭ ಹಾರೈಸಿದ್ದಾರೆ ಎಂದು ವರದಿ ತಿಳಿಸಿತು.

ಕೆವಾತ್ ಅವರ ಮಗಳ ಮದುವೆಂಯ ದಿನವೇ ಪ್ರಧಾನಿಯವರ ಪತ್ರ ತಲುಪಿತ್ತು.

"ನಾನು ಪ್ರಧಾನಿಯವರ ಪ್ರತಿಕ್ರಿಯೆಯನ್ನು ನಿರೀಕ್ಷಿಸಿರಲಿಲ್ಲ ಆದರೆ ಈಗ ಅವರ ಪತ್ರ ನಮ್ಮ ಬಳಿ ಇದೆ. ನಮಗೆ ತುಂಬಾ ಖುಷಿಯಾಗಿದೆ. ನನ್ನ ಮಗಳ ಮದುವೆಯಲ್ಲಿ ನಾನು ಎಲ್ಲಾ ಅತಿಥಿಗಳಿಗೆ ಪತ್ರವನ್ನು ತೋರಿಸಿದ್ದೇನೆಎಂದು ಕೆವಾತ್ ಸಂಭ್ರಮೋತ್ಸಾಹದೊಂದಿಗೆ ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.

ಗಂಗಾ ಮಾತೆಯ ಕಟ್ಟಾ ಭಕ್ತ ಕೆವಾತ್ ತನ್ನ ಗಳಿಕೆಯ ಒಂದು ಭಾಗವನ್ನು ನದಿಗೆ ಪ್ರಾರ್ಥನೆ ಸಲ್ಲಿಸಲು ಖರ್ಚು ಮಾಡುತ್ತಾರೆ. ಅವರು ಸ್ವಚ್ಛ ಭಾರತ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ.

ಬಿಜೆಪಿಯ ಸದಸ್ಯತ್ವ ಅಭಿಯಾನದ ವೇಳೆಯಲ್ಲಿ ಪ್ರಧಾನಿಯವರು ಸ್ವತಃ ಕೆವಾತ್ ಅವರನ್ನು  ಭಾರತೀಯ ಜನತಾ ಪಕ್ಷದ ಸದಸ್ಯರಾಗಿ ದಾಖಲಿಸಿದ್ದರು.

No comments:

Advertisement