My Blog List

Sunday, February 16, 2020

ವ್ಯಕ್ತಿ, ಜೀಪ್ ಪಾರುಮಾಡಲು ದಿಢೀರ್ ಗಗನಕ್ಕೆ: ಏರ್ ಇಂಡಿಯಾ ವಿಮಾನಕ್ಕೆ ಹಾನಿ

ವ್ಯಕ್ತಿ, ಜೀಪ್ ಪಾರುಮಾಡಲು ದಿಢೀರ್ ಗಗನಕ್ಕೆ: ಏರ್ ಇಂಡಿಯಾ ವಿಮಾನಕ್ಕೆ ಹಾನಿ
ನವದೆಹಲಿ: ಗಗನಕ್ಕೆ ಏರುವ ವೇಳೆಯಲ್ಲಿ ರನ್ ವೇ ನಡುವಿಗೆ ಇದ್ದಕ್ಕಿದ್ದಂತೆ ಬಂದ ವ್ಯಕ್ತಿ ಮತ್ತು ಜೀಪ್ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪೈಲಟ್ ವಿಮಾನವನ್ನು ಧಿಡೀರನೆ ಮೇಲಕ್ಕೆ ಹಾರಿಸಿದ ಪರಿಣಾಮವಾಗಿ ಏರ್ ಇಂಡಿಯಾ ವಿಮಾನದ ಬೆಸುಗೆಯಲ್ಲಿ ಬಿರುಕು ಬಿಟ್ಟ ಘಟನೆ ಪುಣೆ ವಿಮಾನ ನಿಲ್ದಾಣದಲ್ಲಿ 2020 ಫೆಬ್ರುವರಿ 15ರ  ಶನಿವಾರ ಘಟಿಸಿತು.

ಏರ್ ಇಂಡಿಯಾದ ೩೨೧ ವಿಮಾನ ಶನಿವಾರ ಬೆಳಿಗ್ಗೆ ಪುಣೆ ವಿಮಾನ ನಿಲ್ದಾಣದಿಂದ ಹೊರಟಾಗ ಘಟನೆ ಸಂಭವಿಸಿತು ಎಂದು ಡಿಜಿಸಿಎ ಅಧಿಕಾರಿ ಹೇಳಿದರು.

ಆದಾಗ್ಯೂ, ವಿಮಾನವು ಸುರಕ್ಷಿತವಾಗಿ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ ಎಂದು ಅವರು ತಿಳಿಸಿದರು.

"ಗಗನಕ್ಕೆ ಏರುವ ಸಲುವಾಗಿ ೧೨೦ ಗಂಟೆಗಳ ವೇಗದಲ್ಲಿ ವಿಮಾನ ಓಡುತ್ತಿದ್ದ ವೇಳೆಯಲ್ಲಿ ವಿಮಾನದ ಸಿಬ್ಬಂದಿ ರನ್ ವೇ ಮಧ್ಯಕ್ಕೆ ಒಬ್ಬ ವ್ಯಕ್ತಿ ಮತ್ತು ಜೀಪ್ ಬಂದುದನ್ನು ಗಮನಿಸಿದರು. ವ್ಯಕ್ತಿ ಮತ್ತು ಜೀಪ್ನ್ನು ಪಾರುಮಾಡಲು ವಿಮಾನವನ್ನು ದಿಢೀರನೆ ಬಾನಿಗೆ ಹಾರಿಸಲಾಯಿತು. ಬಳಿಕ ವಿಮಾನ ಸುರಕ್ಷಿತವಾಗಿ ದೆಹಲಿಗೆ ಬಂದಿಳಿಯಿತುಎಂದು ನಾಗರಿಕ ವಿಮಾನ ಆಡಳಿತ ನಿರ್ದೇಶನಾಲಯದ ಹೇಳಿಕೆ (ಡಿಜಿಸಿಎ) ತಿಳಿಸಿತು.

ಘಟನೆಯ ವಿಶ್ಲೇಷಣೆಗಾಗಿ ಕಾಕ್ಪಿಟ್ ವಾಯ್ಸ್ ರೆಕಾರ್ಡರನ್ನು (ಸಿವಿಆರ್) ತೆಗೆದು ಇರಿಸುವಂತೆ ಏರ್ ಇಂಡಿಯಾಕ್ಕೆ ಸೂಚಿಸಲಾಗಿದೆ ಎಂದು ಅಧಿಕಾರಿ ನುಡಿದರು.

"ವಿಮಾನವನ್ನು ತನಿಖೆಯ ಸಲುವಾಗಿ ಸೇವೆಯಿಂದ ಹಿಂತೆಗೆದುಕೊಳ್ಳಲಾಗಿದೆ. ರನ್ವೇಯಲ್ಲಿ ಯಾವುದೇ ಗುರುತು ಇರುವುದನ್ನು ಕಂಡುಹಿಡಿಯಲು ಏರ್ ಇಂಡಿಯಾಕ್ಕೆ ಪುಣೆ ಎಟಿಸಿ (ಏರ್ ಟ್ರಾಫಿಕ್ ಕಂಟ್ರೋಲ್) ನೊಂದಿಗೆ ಸಮನ್ವಯ ಸಾಧಿಸಲು ಸೂಚಿಸಲಾಗಿದೆ" ಎಂದು ಘಟನೆಯ ಪ್ರಾಥಮಿಕ ತನಿಖೆಯ ಬಗ್ಗೆ ಮಾಹಿತಿ ಹೊಂದಿದ ಇನ್ನೊಬ್ಬ ಅಧಿಕಾರಿ ತಿಳಿಸಿದರು.

ಶ್ರೀನಗರಕ್ಕೆ ಹೋಗಬೇಕಾಗಿದ್ದ ೩೨೧ ವಿಮಾನದ ಎಂಪೆನೇಜ್ ಭಾಗದಲ್ಲಿ ಕೆಲವು ಗುರುತುಗಳಾಗಿರುವುದನ್ನು  ಗಮನಿಸಲಾಗಿದೆ. ವಿಮಾನವು ಪುಣೆಯಿಂದ ಬಂದಿತ್ತುಎಂದು ಘಟನೆಯ ಬಗ್ಗೆ ಪ್ರಶ್ನಿಸಿದಾಗ ಏರ್ ಇಂಡಿಯಾ ವಕ್ತಾರರು ಉತ್ತರಿಸಿದರು.

ವಿವರವಾದ ತನಿಖೆಗಾಗಿ ವಿಮಾನವನ್ನು ಹಿಂಪಡೆಯಲಾಗಿದೆ. ಸಿವಿಆರ್ ಮತ್ತು ಎಸ್ಎಸ್ಎಫ್ಡಿಆರ್ (ಸಾಲಿಡ್ ಸ್ಟೇಟ್ ಫ್ಲೈಟ್ ಡಾಟಾ ರೆಕಾರ್ಡರ್) ರೀಡ್ ಔಟ್ಗಳನ್ನು ಕೈಗೊಳ್ಳಲಾಗುವುದು ಮತ್ತು ಮಾಹಿತಿಯನ್ನು ಹಂಚಿಕೊಳ್ಳಲಾಗುವುದುಎಂದು ವಕ್ತಾರರು ಹೇಳಿದರು.

No comments:

Advertisement