My Blog List

Saturday, February 15, 2020

ಗಲ್ಲು ಶಿಕ್ಷೆ ವಿರುದ್ಧ ಮೇಲ್ಮನವಿಗೆ ೩ ತಿಂಗಳ ಗಡುವು

ಗಲ್ಲು ಶಿಕ್ಷೆ ವಿರುದ್ಧ ಮೇಲ್ಮನವಿಗೆ   ತಿಂಗಳ ಗಡುವು
ನಿರ್ಭಯಾ ಪ್ರಕರಣದ ಹಿನ್ನೆಲೆ: ಸುಪ್ರೀಂ ಮಾರ್ಗದರ್ಶಿ ಸೂತ್ರ
ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಶಿಕ್ಷಿತ ಅಪರಾಧಿಗಳ ಗಲ್ಲು ಜಾರಿ ವಿಳಂಬದ ಹಿನ್ನೆಲೆಯಲ್ಲಿ ಮರಣದಂಡನೆ ಸೇರಿದಂತೆ ಕ್ರಿಮಿನಲ್ ಮೇಲ್ಮನವಿಗಳ ತ್ವರಿತ ವಿಚಾರಣೆಗಾಗಿ ಸುಪ್ರೀಂಕೋರ್ಟ್ 2020 ಫೆಬ್ರುವರಿ 14ರ ಶುಕ್ರವಾರ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿತು.

ಮರಣದಂಡನೆ ಪ್ರಕರಣಗಳ ವಿರುದ್ಧದ ಮೇಲ್ಮನವಿಗಳ ವಿಚಾರಣೆಗೆ ಹೈಕೋರ್ಟ್ ತೀರ್ಪಿನ ದಿನಾಂಕದಿಂದ ತಿಂಗಳ ಗಡುವನ್ನು ಸುಪ್ರೀಂಕೋರ್ಟ್ ನಿಗದಿ ಪಡಿಸಿತು.

ಶುಕ್ರವಾರ ಬಹಿರಂಗ ಪಡಿಸಲಾಗಿರುವ ಸುತ್ತೋಲೆಯಲ್ಲಿ ವಿಚಾರವನ್ನು ಪ್ರಕಟಿಸಲಾಗಿದ್ದು, ಹೈಕೋರ್ಟ್ ಮರಣದಂಡನೆಯನ್ನು ಎತ್ತಿ ಹಿಡಿದ/ ದೃಢ ಪಡಿಸಿದ ಪ್ರಕರಣಗಳಲ್ಲಿ ಮತ್ತು ನ್ಯಾಯಾಲಯವು ವಿಶೇಷ ಅರ್ಜಿಗಳಿಗೆ ಅನುಮತಿ ನೀಡಿದ ಕ್ರಿಮಿನಲ್ ಮೇಲ್ಮನವಿಗಳನ್ನು ವಿಶೇಷ ಅರ್ಜಿಗೆ ಅನುಮತಿ ನೀಡಿದ ಬಳಿಕ ತಿಂಗಳುಗಳಿಗಿಂತ ಹೆಚ್ಚು ವಿಳಂಬವಾಗದಂತೆ, ಮೇಲ್ಮನವಿ ಸಿದ್ಧವಾಗಿರಲಿ ಅಥವಾ ಆಗದೇ ಇರಲಿ ವಿಚಾರಣೆಗಾಗಿ ಮೂವರು ನ್ಯಾಯಮೂರ್ತಿಗಳ ಪೀಠದ ಮುಂದೆ ವಿಚಾರಣೆಗಾಗಿ ಪಟ್ಟಿ ಮಾಡಬೇಕು ಎಂದು ಫೆಬ್ರುವರಿ ೧೨ರ ದಿನಾಂಕದ ಮಾರ್ಗದರ್ಶಿ ಸೂತ್ರ ತಿಳಿಸಿತು..

ಮರಣದಂಡನೆ ವಿಚಾರವೂ ಇರುವಂತಹ ವಿಶೇಷ ಅರ್ಜಿಯನ್ನು ಸಲ್ಲಿಸಿದ ತತ್ ಕ್ಷಣವೇ ರಿಜಿಸ್ಟ್ರಿಯಿಂದ ನ್ಯಾಯಾಲಯಕ್ಕೆ ಸಕಲ ದಾಖಲೆಗಳ ಸಹಿತವಾಗಿ ಮಾಹಿತಿ ರವಾನೆ ಆಗಬೇಕು ಎಂದು ತಿಳಿಸಿದ ಸುತ್ತೋಲೆ ಇದಕ್ಕೆ ಸಂಬಂಧಿಸಿದ ಕಡತಗಳ ತಯಾರಿ, ಭಾಷಾಂತರ ಇತ್ಯಾದಿ ಸಿದ್ಧತೆಗೆ ಕೂಡಾ ಗಡುವುಗಳನ್ನು ನೀಡಿತು.

೨೦೧೨ರ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನಾಲ್ವರು ಶಿಕ್ಷಿತ ಅಪರಾಧಿಗಳಾದ ಮುಕೇಶ್ ಕುಮಾರ್ ಸಿಂಗ್ (೩೨), ಪವನ್ ಗುಪ್ತ (೨೫), ವಿನಯ್ ಕುಮಾರ್ ಶರ್ಮ (೨೬) ಮತ್ತು ಅಕ್ಷಯ್ ಕುಮಾರ್ (೩೧) ಅವರ ಗಲ್ಲು ಜಾರಿಯನ್ನು ವಿಚಾರಣಾ ನ್ಯಾಯಾಲಯವು ವರ್ಷ ಜನವರಿ ೩೧ರಂದುಮುಂದಿನ ಆದೇಶದವರೆಗೆತಡೆ ಹಿಡಿದಿತ್ತು. ಇದು ಗಲ್ಲು ವಿಳಂಬ ತಂತ್ರಗಳ ಬಗ್ಗೆ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿತ್ತು.

ಈ ಮಧ್ಯೆ ಸುಪ್ರೀಂಕೋರ್ಟ್ ಪೀಠವು ಶುಕ್ರವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕ್ಷಮಾದಾನ ಕೋರಿಕೆ ಅರ್ಜಿ ತಿರಸ್ಕರಿಸಿದ್ದನ್ನು ಪ್ರಶ್ನಿಸಿ  ನಿರ್ಭಯಾ ಪ್ರಕರಣದ ಅತ್ಯಾಚಾರಿಗಳಲ್ಲಿ ಒಬ್ಬನಾದ ವಿನಯ್ ಶರ್ಮ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿತು.

No comments:

Advertisement